ಎಸ್‌ ಆರ್‌ ಶ್ರೀನಿವಾಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಘೋಷಣೆ; ಜೆಡಿಎಸ್‌ ತೊರೆದ ನೂರಾರು ಮುಖಂಡರು

Date:

  • 300ಕ್ಕೂ ಹೆಚ್ಚು ಜೆಡಿಎಸ್‌ ಮುಖಂಡರು ರಾಜೀನಾಮೆ
  • ಗುಬ್ಬಿ ಕ್ಷೇತ್ರದ ಅಭ್ಯರ್ಥಿ ಘೋಷಿಸದ ಕಾಂಗ್ರೆಸ್

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಲೆಕ್ಕಚಾರ ಜೋರಾಗಿವೆ. ಪ್ರಭಾವಿ ನಾಯಕರುಗಳ ಪಕ್ಷಾಂತರ ಪರ್ವ ಸಹ ಶುರುವಾಗಿದೆ. ಜೆಡಿಎಸ್‌ ಉಚ್ಛಾಟಿತ ಶಾಸಕ ಎಸ್‌ ಆರ್‌ ಶ್ರೀನಿವಾಸ್ ಅವರು ತಮ್ಮ ಶಾಸಕ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

ಜೆಡಿಎಸ್‌ ಪಕ್ಷದಿಂದ ಉಚ್ಛಾಟಿತರಾಗಿರುವ ಗುಬ್ಬಿ ಶಾಸಕ ಎಸ್‌ ಆರ್‌ ಶ್ರೀನಿವಾಸ್‌ ಅವರು ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತವಾಗಿದೆ. ದಳದಿಂದ ಹೊರಬಂದ ಬಳಿಕ ಶ್ರೀನಿವಾಸ್ ಕಾಂಗ್ರೆಸ್ ನಾಯಕರೊಂದಿಗೆ ಸಕ್ರಿಯವಾಗಿ ಕಾಣಿಸಿಕೊಂಡಿದ್ದರು. ಈ ಹಿಂದೆಯೂ ಕಾಂಗ್ರೆಸ್ ಸೇರುವ ಇಂಗಿತ ಹೊರಹಾಕಿದ್ದರು.

ಶ್ರೀನಿವಾಸ್ ಅವರು ಅಧಿಕೃತವಾಗಿ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಗುಬ್ಬಿ ಜೆಡಿಎಸ್​ನಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಜಿ. ಹೊಸಹಳ್ಳಿ ಗ್ರಾಮದಲ್ಲಿ ಸಾಲು ಸಾಲು ಜೆಡಿಎಸ್ ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ.

300ಕ್ಕೂ ಹೆಚ್ಚು ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು, ಜೆಡಿಎಸ್​​​ ಬೂತ್ ಕಮಿಟಿ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪತ್ರವನ್ನು ಜೆಡಿಎಸ್​ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಕಚೇರಿಗೆ ರವಾನಿಸಿದ್ದಾರೆ.

ತಮ್ಮ ರಾಜೀನಾಮೆ ಕುರಿತು ತುಮಕೂರಿನ ಗುಬ್ಬಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸ್, “ ಸೋಮವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಸದ್ಯಕ್ಕೆ ನಾನೊಬ್ಬನೇ ರಾಜೀನಾಮೆ ಕೊಡುತ್ತೇನೆ. ಬೇರೆ ಶಾಸಕರ ಬಗ್ಗೆ ನನಗೆ ಗೊತ್ತಿಲ್ಲ” ಎಂದಿದ್ದಾರೆ.

“ಬೇರೆ ಪಕ್ಷಗಳಿಗೆ ಸೇರ್ಪಡೆಯಾಗಬೇಕಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕು” ಎಂದಿರುವ ಶ್ರೀನಿವಾಸ್ ಅವರು ಗುಬ್ಬಿಯಲ್ಲಿ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ರಾಜ್ಯ ಚುನಾವಣಾ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಪಕ್ಷದ ಮೊದಲ ಪಟ್ಟಿಯಲ್ಲಿ ತುಮಕೂರು ನಗರ, ಗ್ರಾಮಾಂತರ ಮತ್ತು ಗುಬ್ಬಿ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಶ್ರೀನಿವಾಸ್ ಅವರ ಹೆಸರು ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಇರಲಿದೆ.

ಕಳೆದ ನಾಲ್ಕು ಚುನಾವಣೆಗಳಲ್ಲೂ ಸತತ ಗೆಲುವು ಸಾಧಿಸಿರುವ ಶ್ರೀನಿವಾಸ್ ಅವರ ಸೇರ್ಪಡೆ ಕಾಂಗ್ರೆಸ್‌ಗೆ ಬಲ ತಂದುಕೊಡಲಿದೆ. ಬಿಜೆಪಿಯ ಅನೇಕ ನಾಯಕರುಗಳು ಕಾಂಗ್ರೆಸ್‌ ಸೇರುತ್ತಿರುವ ನಡುವೆ ಜೆಡಿಎಸ್‌ ನಾಯಕ ಪಕ್ಷಾಂತರ ಆಗುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ ವಿಪ್‌ಗೆ ಎಸ್ ಆರ್ ಶ್ರೀನಿವಾಸ್ ಸೆಡ್ಡು ಹೊಡೆದು ಕಾಂಗ್ರೆಸ್‌ಗೆ ಬೆಂಬಲ ನೀಡಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದಾರೆ. ಪಕ್ಷಕ್ಕೆ ಸೆಡ್ಡು ಹೊಡೆದ ಶ್ರೀನಿವಾಸ್‌ಗೆ ಬುದ್ಧಿ ಕಲಿಸಲು ಜೆಡಿಎಸ್ ಈಗಾಗಲೇ ಇಲ್ಲಿ ಬಿ.ಎಸ್‌. ನಾಗರಾಜು ಎಂಬ ಅಭ್ಯರ್ಥಿಯನ್ನು ಘೋಷಿಸಿ ಬೃಹತ್‌ ಸಮಾವೇಶವನ್ನೂ ನಡೆಸಿದೆ.

ಈ ದಿನ ಡೆಸ್ಕ್‌
Website | + posts

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಜನಪ್ರಿಯ

ಈ ರೀತಿಯ ಹೆಚ್ಚು
Related

ಮೈಸೂರು | ಜೆಎಸ್ಎಸ್ ಮಹಾವಿದ್ಯಾಪೀಠ; 1 ರಿಂದ 8ನೇ ತರಗತಿಗೆ ಅರ್ಜಿ ಆಹ್ವಾನ

ಜೆಎಸ್ಎಸ್ ಮಹಾವಿದ್ಯಾಪೀಠದ ವತಿಯಿಂದ 2023-24ನೇ ಸಾಲಿಗೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು...

2002 ಗಲಭೆಯ ಬಿಬಿಸಿ ಸಾಕ್ಷ್ಯಚಿತ್ರ; ವಿಪಕ್ಷಗಳ ವಿರೋಧದ ನಡುವೆ ನಿರ್ಣಯ ತಂದ ಬಿಜೆಪಿ ರಾಜ್ಯಗಳು

2002ರ ಗುಜರಾತ್‌ ಗಲಭೆಗಳನ್ನು ಒಳಗೊಂಡಿರುವ ಸಾಕ್ಷ್ಯಚಿತ್ರ ಭಾರತದಲ್ಲಿ ಬಿಡುಗಡೆಗೂ ಮೊದಲೇ ನಿಷೇಧಿಸಿದ್ದ ಕೇಂದ್ರ...

ಚಾಮರಾಜನಗರ | ಹನೂರಿ‌ನ ಆಸ್ಪತ್ರೆಗೆ ಆಂಬ್ಯುಲೆನ್ಸ್ ಕೊಡುಗೆ ನೀಡಿದ ನಟ ಪ್ರಕಾಶ್ ರೈ

ತಮ್ಮ ಒಡೆತನದ ಪಿಆರ್‌ಎಫ್ ಫೌಂಡೇಶನ್ ವತಿಯಿಂದ ಕೊಡುಗೆ ಕಾಮಗೆರೆ ಹೋಲಿಕ್ರಾಸ್ ಬಳಿ ಇರುವ...

ಇತರ ಸಮುದಾಯಗಳಿಗೆ ಅನ್ಯಾಯವಾಗದಂತೆ ಮೀಸಲಾತಿ ನೀಡಲಾಗಿದೆ: ಸಿಎಂ ಬೊಮ್ಮಾಯಿ

ʼಚುನಾವಣಾ ಲಾಭಕ್ಕಾಗಿ ರಾಜಕಾರಣ ಮಾಡುವುದಿಲ್ಲʼ ʼ30 ವರ್ಷಗಳ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆʼ ಇತರ...