ಇತ್ತೀಚೆಗಷ್ಟೇ ನಿಧನರಾಗಿದ್ದ ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ ಅವರ ಪತ್ನಿ ವೀಣಾ ಧ್ರುವನಾರಾಯಣ ಅವರು ಇಂದು (ಏ.7) ನಿಧನರಾಗಿದ್ದಾರೆ.
ಬ್ರೈನ್ ಟ್ಯೂಬರ್‌ನಿಂದ ಬಳಲುತ್ತಿದ್ದ ಅವರು ಕಳೆದ 10 ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಪತಿ ಧ್ರುವನಾರಾಯಣ ಅವರ ಅಕಾಲಿನ ಸಾವಿನಿಂದಾಗಿ ವೀಣಾ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು.
ತೀವ್ರ ಆನಾರೋಗ್ಯದ ಕಾರಣ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ವೀಣಾ ಅವರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಧ್ರುವನಾರಾಯಣ್ ಹುಟ್ಟೂರಾದ ಚಾಮರಾಜ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ನಂಜನಗೂಡಿನಿಂದ ಹಿಂದೆ ಸರಿದಿದ್ದು ಆತ್ಮಸಾಕ್ಷಿಯಿಂದ: ಡಾ. ಎಚ್.ಸಿ ಮಹದೇವಪ್ಪ ಸ್ಪಷ್ಟನೆ
ಧ್ರುವನಾರಾಯಣ ಅವರ ಸಮಾದಿಯ ಪಕ್ಕದಲ್ಲಿಯೇ ವೀಣಾ ಅವರ ಅಂತ್ಯಕ್ರಿಯೆಯೂ ನಡೆಯಲಿದೆ. ಕೇವಲ ಒಂದು ತಿಂಗಳ ಅಂತರದಲ್ಲೇ ಪತಿ – ಪತ್ನಿ ಇಬ್ಬರೂ ಸಾವಿಗೀಡಾಗಿದ್ದು, ಕುಟುಂಬಕ್ಕೆ ದುಃಖ ತಂದೊಡ್ಡಿದೆ.
ಧ್ರುವನಾರಾಯಣ ಅವರ ಪುತ್ರ ದರ್ಶನ್ ಅವರಿಗೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ತಂದೆಯ ಸಾವಿನ ನಂತರ ಚೇತರಿಸಿಕೊಂಡಿದ್ದ ದರ್ಶನ್ ಪ್ರಚಾರ ಕಾರ್ಯ ಆರಂಭಿಸಿದ್ದರು. ಆದರೆ, ಪ್ರಚಾರ ಆರಂಭಿಸಿದ ಮೂರೇ ದಿನಕ್ಕೆ ದರ್ಶನ್ ಅವರಿಗೆ ಮತ್ತೊಂದು ಅಘಾತವಾಗಿದೆ.