ವಿಜಯಪುರ | ಮೂಲ ಸೌಕರ್ಯಗಳಿಂದ ವಂಚಿತ ನಾಗಠಾಣ ಮೀಸಲು ಕ್ಷೇತ್ರ: ರಾಕೇಶ್ ಕುಮಟಗಿ

Date:

  • ಉದ್ಯೋಗ ಇಲ್ಲದ ಕಾರಣ ದೂರದ ರಾಜ್ಯಗಳಿಗೆ ಹೋಗಿ ಕೂಲಿ ಮಾಡುವ ಸನ್ನಿವೇಶ
  • ಪ್ರಸ್ತುತ ಚುನಾವಣೆಯಲ್ಲಿ ಸೂಕ್ತ ವಿದ್ಯಾವಂತ ಅಭ್ಯರ್ಥಿಯನ್ನು ಆರಿಸುವಂತೆ ಕರೆ

ಕರ್ನಾಟಕದಲ್ಲಿಯೇ ಅತೀ ದೊಡ್ಡ ಪ್ರಮಾಣದ ಮತದಾರರನ್ನು ಹೊಂದಿರುವ ನಾಗಠಾಣ ಮೀಸಲು ಕ್ಷೇತ್ರವು ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಇದುವರೆಗೂ ಈ ಕ್ಷೇತ್ರಕ್ಕೆ ಆರಿಸಿ ಬಂದಿರುವ ಯಾವೊಬ್ಬ ಶಾಸಕರು ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ ಎಂದು ಕರ್ನಾಟಕ ರಣಧೀರ ಪಡೆಯ ವಿಜಯಪುರ ತಾಲೂಕು ಅಧ್ಯಕ್ಷ ರಾಕೇಶ ಕುಮಟಗಿ ಆರೋಪಿಸಿದ್ದಾರೆ.

ಕ್ಷೇತ್ರದ ಸಮಸ್ಯೆ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ನಾಗಠಾಣ ಮೀಸಲು ಕ್ಷೇತ್ರದಲ್ಲಿ ನಡೆದಿರುವ ಪ್ರತಿ ಚುನಾವಣೆಯೂ ಕೇವಲ ಪ್ರತಿಷ್ಠೆಯ ಮತಕ್ಷೇತ್ರವಾಗಿದೆಯೇ ಹೊರತು ಮಹತ್ತರವಾದ ಕ್ಷೇತ್ರವಾಗಿ ರೂಪುಗೊಳ್ಳುವಂತೆ ಇಲ್ಲಿಯ ರಾಜಕಾರಣಿಗಳು ಕೆಲಸ ಮಾಡಿಲ್ಲ. ಈ ಬಾರಿಯಾದರೂ ನಾಗಠಾಣ ಮತಕ್ಷೇತ್ರಕ್ಕೆ ಒಬ್ಬ ಪ್ರಜ್ಞಾವಂತ ಜನಪ್ರತಿನಿಧಿಯನ್ನು ಆರಿಸುವ ಜವಾಬ್ದಾರಿ ಮತದಾರರ ಮೇಲಿದೆ” ಎಂದು ಹೇಳಿದ್ದಾರೆ.

“ನಾಗಠಾಣ ಮತಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಕೃಷಿಗೆ ಒತ್ತು ನೀಡಬೇಕು. ಮುಖ್ಯವಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಒತ್ತು ನೀಡಬೇಕು. ನಾಗಠಾಣ ಮತಕ್ಷೇತ್ರದಲ್ಲಿ ವಿದ್ಯಾವಂತ ನಿರುದ್ಯೋಗ ಯುವಕರು ಬಹಳಷ್ಟಿದ್ದಾರೆ. ಅವರಿಗೆ ಉದ್ಯೋಗ ಒದಗಿಸುವಂತಾಗಬೇಕು. ಸದ್ಯ ಕ್ಷೇತ್ರದಲ್ಲಿ ನಿರುದ್ಯೋಗ ಯುವಕರು ಬಹಳಷ್ಟಿದ್ದು ಇವರಿಗೆ ಉದ್ಯೋಗ ಇಲ್ಲದ ಕಾರಣ ದೂರದ ರಾಜ್ಯಗಳಿಗೆ ಹೋಗಿ ಕೂಲಿ ಮಾಡಿ ಜೀವನ ನಡೆಸುವ ಸನ್ನಿವೇಶ ಎದುರಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಇಲ್ಲಿಯವರೆಗೆ ಈ ನಾಗಠಾಣ ಮತಕ್ಷೇತ್ರಕ್ಕೆ ಸ್ಪರ್ಧೆ ಬಯಸಿದ ಜನಪ್ರತಿನಿಧಿಗಳು ಪೊಳ್ಳು ಭರವಸೆಗಳನ್ನು ನೀಡುತ್ತಾ ಬಂದಿದ್ದಾರೆಯೇ ಹೊರತು, ಮತಕ್ಷೇತ್ರದ ಜನರ ಅಭಿವೃದ್ಧಿಗೆ ಕಡೆಗೆ ಕಿಂಚಿತ್ತು ಜವಾಬ್ದಾರಿಯುತ ಕೆಲಸವನ್ನು ಮಾಡಿಲ್ಲ” ಎಂದು ಕಿಡಿ ಕಾರಿದ್ದಾರೆ.

ಈ ಸುದ್ದಿ ಓದಿದ್ದೀರಾ? : ವಿಜಯಪುರ | ಪೊಲೀಸ್‌ ಪೇದೆ ಸಮಯ ಪ್ರಜ್ಞೆ; ಮೂವರು ಪ್ರಾಣಾಪಾಯದಿಂದ ಪಾರು

“ಈ ಬಾರಿಯ ಚುನಾವಣೆಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಹಾಗೂ ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡದೇ ಯುವಕರ ಪರವಾಗಿ ಕೆಲಸ ಮಾಡುವ ವ್ಯಕ್ತಿಯನ್ನು ಎಲ್ಲ ನಾಗಠಾಣ ಮತಕ್ಷೇತ್ರದ ಮತದಾರರು ಆರಿಸಿ ಕ್ಷೇತ್ರವು ಅಭಿವೃದ್ಧಿಗೊಳ್ಳುವಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಬೇಕು” ಎಂದು ಸಲಹೆ ನೀಡಿದ್ದಾರೆ.

“ಮತದಾನದ ವೇಳೆಯಲ್ಲಿ ಹಣ, ಬಟ್ಟೆ, ಸಾರಾಯಿಗಳಿಗೆ ಬಲಿಯಾಗದೇ ತಮ್ಮ ಮತವನ್ನು ನಿಷ್ಠಾವಂತ ಹಾಗೂ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಎಲ್ಲ ಜನಾಂಗದ ಹಾಗೂ ಜನರ ಪರವಾಗಿ ಹೋರಾಡುವ ಅವರ ಕೆಲಸಗಳನ್ನು ಮಾಡುವ ವ್ಯಕ್ತಿಯನ್ನು ಈ ಬಾರಿ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವದರ ಮೂಲಕ ತಮ್ಮ ಮತದಾನದ ಹಕ್ಕು ಒಳ್ಳೆಯ ರೀತಿಯಿಂದ ನಿರ್ವಹಿಸಬೇಕು” ಎಂದು ಕರೆ ನೀಡಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಮಾದಿಗ ಸಮುದಾಯದ ಅಭ್ಯರ್ಥಿ ಘೋಷಣೆಗೆ ಆಗ್ರಹ

2024ನೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಮಾದಿಗ...

ಕೋಲಾರ ಟಿಕೆಟ್‌ | ಬಣ ಬಡಿದಾಟಕ್ಕೆ ಪೂರ್ಣವಿರಾಮವಿಟ್ಟ ಸಿಎಂ, ಡಿಸಿಎಂ; ಅಭ್ಯರ್ಥಿ ಯಾರು?

ಕೋಲಾರ ಟಿಕೆಟ್‌ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್ ಪಾಳಯದಲ್ಲಿ ಉಂಟಾಗಿದ್ದ ಬಣಗಳ ಬಡಿದಾಟವನ್ನು...

ಕಂಗನಾ ರಣಾವತ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ

ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಖ್ಯಾತ ನಟಿ ಕಂಗನಾ ರಣಾವತ್...