₹2000 ನೋಟು ಹಿಂಪಡೆಯಲು ಆರ್‌ಬಿಐಗೆ ಅಧಿಕಾರವಿಲ್ಲ; ಪಿಐಎಲ್‌ ಅರ್ಜಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Date:

  • ಮೇ 19ರಂದು ₹2,000 ನೋಟುಗಳನ್ನು ಚಲಾವಣೆಯಿಂದ ಹಿಂಪಡೆದ ಆರ್‌ಬಿಐ
  • ಯಾವುದೇ ಮುಖಬೆಲೆಯ ನೋಟು ರದ್ದು ಅಧಿಕಾರ ಆರ್‌ಬಿಐಗಿಲ್ಲ ಎಂದು ವಾದ

₹2000 ನೋಟು ಸಂಬಂಧಿಸಿ ಬ್ಯಾಂಕ್ ನೋಟುಗಳನ್ನು ಚಲಾವಣೆಯಿಂದ ಸ್ಥಗಿತಗೊಳಿಸಲು ಅಥವಾ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಸಾಧ್ಯವಿಲ್ಲ ಮತ್ತು ಕೇಂದ್ರ ಸರ್ಕಾರಕ್ಕೆ ಮಾತ್ರ ಅಂತಹ ಅಧಿಕಾರವಿದೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು (ಮೇ 30) ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ತೀರ್ಪನ್ನು ಕಾಯ್ದಿರಿಸಿದೆ.        

₹2000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಆರ್‌ಬಿಐ ನಿರ್ಧಾರ ಪ್ರಶ್ನಿಸಿ ಅರ್ಜಿದಾರ ರಜನೀಶ್ ಭಾಸ್ಕರ್ ಗುಪ್ತಾ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರ ಪೀಠವು ಅರ್ಜಿದಾರರ ಮತ್ತು ಆರ್‌ಬಿಐ ಪರ ವಕೀಲರನ್ನು ಆಲಿಸಿದ ನಂತರ ಪಿಐಎಲ್‌ನ ಆದೇಶ ಕಾಯ್ದಿರಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಯಾವುದೇ ಮುಖಬೆಲೆಯ ನೋಟುಗಳನ್ನು ನೀಡದಿರುವುದು ಅಥವಾ ರದ್ದುಗೊಳಿಸುವುದನ್ನು ನಿರ್ದೇಶಿಸಲು ಆರ್‌ಬಿಐಗೆ ಯಾವುದೇ ಸ್ವತಂತ್ರ ಅಧಿಕಾರವಿಲ್ಲ ಮತ್ತು ಈ ಅಧಿಕಾರವು ಆರ್‌ಬಿಐ ಕಾಯಿದೆ, 1934ರ ಸೆಕ್ಷನ್ 24 (2) ರ ಅಡಿಯಲ್ಲಿ ಕೇಂದ್ರಕ್ಕೆ ಮಾತ್ರ ಇದೆ ಎಂದು ಅರ್ಜಿದಾರರು ಸಲ್ಲಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹರಿದ್ವಾರದಲ್ಲಿ ಚಾರಿತ್ರಿಕ ಪ್ರತಿಭಟನೆ; ಕುಸ್ತಿಪಟುಗಳು ಪದಕ ನದಿಗೆಸೆಯುವುದ ತಡೆದ ರೈತ ನಾಯಕ

ಗುಪ್ತಾ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೀಪ್ ಪಿ ಅಗರ್ವಾಲ್, ಈ ನೋಟುಗಳ ಜೀವಿತಾವಧಿ ಕೇವಲ 4-5 ವರ್ಷಗಳು ಎಂಬ ತೀರ್ಮಾನಕ್ಕೆ ಆರ್‌ಬಿಐ ಹೇಗೆ ಬಂತು ಎಂದು ತಿಳಿಯಲು ಬಯಸಿದರು.

“ಆರ್‌ಬಿಐ ಕಾಯಿದೆಯ ಸೆಕ್ಷನ್ 22 ಮತ್ತು 27ರ ಅಡಿಯಲ್ಲಿ ಬ್ಯಾಂಕ್ ನೋಟುಗಳನ್ನು ವಿತರಿಸಲು ಮತ್ತು ಮರು ವಿತರಿಸಲು ಮಾತ್ರ ಆರ್‌ಬಿಐಗೆ ಅಧಿಕಾರವಿದೆ. ಆದರೆ ಅಂತಹ ನೋಟುಗಳನ್ನು ವಿತರಿಸುವ ಅವಧಿಯನ್ನು ಕೇಂದ್ರ ಸರ್ಕಾರವು ನಿಗದಿಪಡಿಸುತ್ತದೆ” ಎಂದು ಹಿರಿಯ ವಕೀಲರು ವಾದಿಸಿದರು.

ಈ ಮನವಿಯನ್ನು ಆರ್‌ಬಿಐ ಪರ ವಕೀಲರು ವಿರೋಧಿಸಿದ್ದು, ಕೇವಲ ₹2,000 ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಹೇಳಿದ್ದು, ಇದು ‘ಕರೆನ್ಸಿ ನಿರ್ವಹಣೆಯ ಬಳಕೆ’ ಮತ್ತು ಆರ್ಥಿಕ ನೀತಿಯ ವಿಷಯವಾಗಿದೆ ಎಂದು ತಿಳಿಸಿದರು.

ಆರ್‌ಬಿಐ ಪರವಾಗಿ ಹಿರಿಯ ವಕೀಲ ಪರಾಗ್ ಪಿ ತ್ರಿಪಾಠಿ, ಇದೇ ಸುತ್ತೋಲೆ/ ಅಧಿಸೂಚನೆಯ ಮೇಲೆ ಹೈಕೋರ್ಟ್ ಈಗಾಗಲೇ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ ಮತ್ತು ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ, ನ್ಯಾಯಾಲಯವು ಅದೇ ವಿಷಯದ ಕುರಿತು ಸರಣಿ ಪಿಐಎಲ್‌ಗಳನ್ನು ಹೊಂದುವಂತಿಲ್ಲ ಎಂದು ವಾದಿಸಿದರು.

ಮೇ 29ರಂದು, ಆರ್‌ಬಿಐ ಮತ್ತು ಎಸ್‌ಬಿಐ ಪುರಾವೆಗಳಿಲ್ಲದೆ ₹2,000 ನೋಟು ಬದಲಾಯಿಸಲು ಅನುವು ಮಾಡಿಕೊಟ್ಟ ಅಧಿಸೂಚನೆಗಳು, ನಿರಂಕುಶ ಕ್ರಮ ಮತ್ತು ಭ್ರಷ್ಟಾಚಾರ ನಿಗ್ರಹಿಸಲು ಜಾರಿಗೆ ತಂದ ಕಾನೂನುಗಳ ವಿರುದ್ಧ ಎಂದು ಆರೋಪಿಸಿದ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರ ಮನವಿಯನ್ನು ವಜಾಗೊಳಿಸಿತ್ತು.

ಸರ್ಕಾರದ ನಿರ್ಧಾರವು ವಿಕೃತ ಅಥವಾ ನಿರಂಕುಶ ಅಥವಾ ಕಪ್ಪುಹಣ, ಹಣ ವರ್ಗಾವಣೆ, ಲಾಭಕೋರತನ ಅಥವಾ ಭ್ರಷ್ಟಾಚಾರವನ್ನು ಉತ್ತೇಜಿಸುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ಹೈಕೋರ್ಟ್ ಸಮರ್ಥಿಸಿಕೊಂಡಿದೆ.

“₹2,000 ನೋಟು ಚಲಾವಣೆಯಿಂದ ಹಿಂತೆಗೆದುಕೊಂಡ ನಂತರ ಆರ್‌ಬಿಐ ಅಥವಾ ರಾಷ್ಟ್ರೀಯ ಆರ್ಥಿಕತೆಗೆ ಏನು ಪ್ರಯೋಜನ ಎಂದು ಆರ್‌ಬಿಐ ಇಲ್ಲಿಯವರೆಗೆ ಸ್ಪಷ್ಟಪಡಿಸಿಲ್ಲ, ಆದಾಗ್ಯೂ ದೇಶದ ನಾಗರಿಕರಿಗೆ ₹500 ಮುಖಬೆಲೆಯ ನೋಟು ಅಮಾನ್ಯೀಕರಣದ ಸಮಯದಲ್ಲಿ ಬಹಳ ಚೆನ್ನಾಗಿ ತಿಳಿದಿದೆ ಮತ್ತು 2016ರಲ್ಲಿ ₹1,000 ಮತ್ತು ₹2,000 ಹಿಂಪಡೆಯುವಿಕೆಯು ಹಿಂದಿನ ನೋಟು ಅಮಾನ್ಯೀಕರಣಕ್ಕಿಂತ ಹೆಚ್ಚು ಭಿನ್ನವಾಗಿಲ್ಲ” ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮೇ 19 ರಂದು, ಆರ್‌ಬಿಐ ₹2,000 ನೋಟು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಿಸಿತ್ತು ಮತ್ತು ಚಲಾವಣೆಯಲ್ಲಿರುವ ಅಸ್ತಿತ್ವದಲ್ಲಿರುವ ನೋಟುಗಳನ್ನು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಬಹುದು ಅಥವಾ ಸೆಪ್ಟೆಂಬರ್ 30ರೊಳಗೆ ವಿನಿಮಯ ಮಾಡಿಕೊಳ್ಳಬಹುದು ಎಂದು  ಆರ್‌ಬಿಐ ಹೇಳಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಎಪಿಯ ಏಕೈಕ ಸಂಸದ ಬಿಜೆಪಿ ಸೇರ್ಪಡೆ

ಎಎಪಿ ಯಿಂದ ಆಯ್ಕೆಯಾಗಿದ್ದ ಏಕೈಕ ಸಂಸತ್ ಸದಸ್ಯ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಂಜಾಬ್‌ನ...

ಧಾರವಾಡ ಕ್ಷೇತ್ರ | ಪ್ರಲ್ಹಾದ್ ಜೋಶಿ ಬದಲಾವಣೆಗೆ ಮಠಾಧೀಶರಿಂದ ಹಕ್ಕೊತ್ತಾಯ

ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್‌ ಜೋಶಿ ಅವರನ್ನು ಬದಲಿಸಬೇಕು...

ಕನ್ನಡಿಗರ ಎದುರು ಚರ್ಚೆಗೆ ಬನ್ನಿ; ನಿರ್ಮಲಾ ಸೀತಾರಾಮನ್‌ಗೆ ಸಿದ್ದರಾಮಯ್ಯ ಪಂಥಾಹ್ವಾನ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬಹಿರಂಗ ಚರ್ಚೆಗೆ ಸಿಎಂ ಸಿದ್ದರಾಮಯ್ಯ...