ಅದಾನಿ ಗದ್ದಲ | ಉಭಯ ಸದನಗಳ ಸಂಸತ್ತು ಕಲಾಪ ಏಪ್ರಿಲ್‌ 5ಕ್ಕೆ ಮುಂದೂಡಿಕೆ

Date:

  • ಏಪ್ರಿಲ್ 6 ವರೆಗೆ ನಡೆಯಲಿರುವ ಸಂಸತ್ತು ಕಲಾಪ
  • ಮಾರ್ಚ್ 13ರಿಂದ ಆರಂಭವಾಗಿರುವ ಅಧಿವೇಶನ

ಅದಾನಿ ಹಿಂಡನ್ ಬರ್‍ಗ್ ಸಂಶೋಧನಾ ವರದಿ ಸೋಮವಾರ (ಏಪ್ರಿಲ್ 3) ರಂದು ಆರಂಭವಾದ ಸಂಸತ್ತು ಕಲಾಪದಲ್ಲಿ ಮತ್ತೆ ಸದ್ದು ಮಾಡಿದೆ. ಇದರಿಂದ ರಾಜ್ಯಸಭೆಯ ಕಲಾಪವನ್ನು ಸೋಮವಾರದ ವರೆಗೂ (ಏಪ್ರಿಲ್‌ 5) ಮುಂದೂಡಲಾಗಿದೆ.

ಅದಾನಿ ಸಮೂಹ ಹಗರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಬೇಕು ಎಂದು ಬೆಳಗ್ಗೆ 11 ಗಂಟೆಗೆ ಆರಂಭವಾದ ರಾಜ್ಯಸಭೆ ಕಲಾಪದಲ್ಲಿ ಪ್ರತಿಪಕ್ಷಗಳು ಗದ್ದಲ ಸೃಷ್ಟಿಸಿದವು. ಇದರಿಂದ ಕಲಾಪವನ್ನು ಮಧ್ಯಾಹ್ನ 2 ಗಂಟೆವರೆಗೂ ಮುಂದೂಡಲಾಗಿತ್ತು.

ಇತ್ತೀಚೆಗೆ ನಿಧನ ಹೊಂದಿದ ಪುಣೆ ಸಂಸದ ಗಿರೀಶ್ ಬಾಪಟ್ ಮತ್ತು ಕೇರಳದ ಮಾಜಿ ಸಂಸದ ಇನ್ನೋಸೆಂಟ್ ವರೀದ್ ಅವರಿಗೆ ಸಂತಾಪ ಸೂಚಕವಾಗಿ ಲೋಕಸಭೆ ಕಲಾಪವೂ ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿಕೆಯಾಯಿತು.

ಮಧ್ಯಾಹ್ನ ಕಲಾಪ ಸೇರಿದಾಗ ಪ್ರತಿಪಕ್ಷಗಳು ಘೋಷಣೆ ಕೂಗಿದವು. ಇದರಿಂದ ಕಲಾಪಕ್ಕೆ ಅಡ್ಡಿಯುಂಟಾಯಿತು. ಇದರಿಂದ ಲೋಕಸಭೆಯ ಕಲಾಪವನ್ನೂ ಸೋಮವಾರದವರೆಗೆ ಮುಂದೂಡಲಾಯಿತು.

ಪುಣೆಯ ಹಾಲಿ ಬಿಜೆಪಿ ಸಂಸದರಾಗಿದ್ದ ಬಾಪಟ್ ಅವರು ಮಾರ್ಚ್ 29 ರಂದು ನಿಧನರಾದರು ಮತ್ತು ತ್ರಿಶೂರ್ ನ ಚಾಲಕುಡಿ ಕ್ಷೇತ್ರದ ಮಾಜಿ ಸಂಸದ ಇನೋಸೆಂಟ್ ಮಾರ್ಚ್ 26 ರಂದು ನಿಧನರಾದರು.

ಮಾರ್ಚ್ 13 ರಿಂದ ಸಂಸತ್ತು ಬಜೆಟ್ ಅಧಿವೇಶನ ಆರಂಭವಾದಾಗಿನಿಂದ ಅದಾನಿ ಸಮೂಹದ ವಿರುದ್ಧದ ಷೇರು ಅಕ್ರಮದ ಆರೋಪಗಳ ಕುರಿತು ಜೆಪಿಸಿ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಸದನದಲ್ಲಿ ಕೋಲಾಹಲ ಸೃಷ್ಟಿಸುತ್ತಿವೆ.

ಇದರ ಜತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅನರ್ಹ ವಿಚಾರವೂ ಗದ್ದಲ ಉಂಟು ಮಾಡಿದೆ. ಇದರಿಂದ ಸಂಸತ್ತು ಉಭಯ ಸದನಗಳು ಹಲವು ಬಾರಿ ಮುಂದೂಡಿಕೆಯಾಗಿವೆ. ಪ್ರತಿಪಕ್ಷಗಳ ಪ್ರತಿಭಟನೆ ನಡುವೆ ಯಾವುದೇ ಚರ್ಚೆ ಇಲ್ಲದೆ ಬಜೆಟ್ ಅನುಮೋದನೆಯಾಗಿದೆ. ಅಲ್ಲದೆ ಹಲವು ಮಸೂದೆಗಳು ಮಂಡನೆಯಾಗಿವೆ.

ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿ ಬಂದಿದ್ದರು. ಟಿಎಂಸಿ ಸದಸ್ಯರು ಕಪ್ಪು ಮುಖವಾಡಗಳನ್ನು ಧರಿಸಿದ್ದರು. ಪ್ರತಿಪಕ್ಷಗಳ ಸಂಸದರು ಕಲಾಪ ಆರಂಭವಾಗುತ್ತಿದ್ದಂತೆ ಚರ್ಚೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಕೂಡಲೇ ಧನಕರ್ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಪ್ರಧಾನಿ ವಿರುದ್ಧ ಹೇಳಿಕೆಗೆ ಕಾಂಗ್ರೆಸ್‌ನ ಸಚಿನ್‌ ಚೌಧರಿ ವಿರುದ್ಧ ಪ್ರಕರಣ

ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆಯ ಸಂಕೇತವಾಗಿ ಪ್ರತಿಪಕ್ಷಗಳ ಸಂಸದರು ಕಪ್ಪು ಬಟ್ಟೆ ಧರಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮೋದಿ-ಅದಾನಿ ಭಾಯ್-ಭಾಯ್ ಎಂದು ಘೋಷಣೆ ಕೂಗಿದರು.

ಸಂಸತ್ತು ಬಜೆಟ್ ಅಧಿವೇಶನದ ಎರಡನೇ ಭಾಗವು ಏ.6ರ ವರೆಗೆ ನಡೆಯಲಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2022ರ ವಿಶ್ವ ಡಿಜಿಟಲ್ ಪಾವತಿ ವಹಿವಾಟಿನಲ್ಲಿ ಭಾರತಕ್ಕೆ ಮೊದಲ ಸ್ಥಾನ | ಕೇಂದ್ರದ ದತ್ತಾಂಶ

ಭಾರತ 2022ರಲ್ಲಿ 8.95 ಲಕ್ಷ ಡಿಜಿಟಲ್ ಪಾವತಿ ವಹಿವಾಟು ನಡೆಸಿದೆ 9 ವರ್ಷದಲ್ಲಿ...

3 ತಿಂಗಳೊಳಗೆ ಎಲ್ಲ ಮಹಿಳೆಯರಿಗೂ ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ವಿತರಣೆ : ರಾಮಲಿಂಗಾರೆಡ್ಡಿ

ಭಾನುವಾರ ಅಧಿಕೃತ ಚಾಲನೆ ಪಡೆದುಕೊಳ್ಳಲಿರುವ ಶಕ್ತಿ ಯೋಜನೆ ನಾಳೆ ಸಾಂಕೇತಿಕವಾಗಿ ಕೆಲವರಿಗೆ ಸ್ಮಾರ್ಟ್...

ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಗೊಂದಲಗಳಿಲ್ಲ: ಸಿಎಂ ಸಿದ್ದರಾಮಯ್ಯ

ಸರ್ಕಾರದ ಘೋಷಿತ ಗ್ಯಾರಂಟಿಗಳು ಹಂತಹಂತವಾಗಿ ಜಾರಿಯಾಗಲಿವೆ ಪ್ರಣಾಳಿಕೆಯ ಘೋಷಣೆಯಂತೆ ನಾವು ಗ್ಯಾರಂಟಿ ಅನುಷ್ಠಾನ...

ಮುಂದಿನ 24 ಗಂಟೆಗಳಲ್ಲಿ ತೀವ್ರಗೊಳ್ಳಲಿರುವ ಬಿಪೊರ್‌ಜಾಯ್‌ | 3 ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ

ಬಿಪೊರ್‌ಜಾಯ್‌ ಚಂಡಮಾರುತ ಹಿನ್ನೆಲೆ ಕೇರಳದ 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಬಂಗಾಳಿ ಭಾಷೆಯಲ್ಲಿ...