ಕರ್ನಲ್‌ ಶ್ರೇಣಿ | ಭಾರತೀಯ ಸೇನೆಯಲ್ಲಿ 108 ಮಹಿಳೆಯರಿಗೆ ಉನ್ನತ ಸ್ಥಾನ

Date:

  • ಕರ್ನಲ್‌ ಶ್ರೇಣಿ ಸ್ಥಾನಕ್ಕೆ 1992ರಿಂದ 2006 ಬ್ಯಾಚ್‌ ಮಹಿಳೆಯರು ಆಯ್ಕೆ
  • ಮಹಿಳಾ ಅಧಿಕಾರಿಗಳಿಗೆ ವಿಶೇಷ ಹಿರಿಯ ಕಮಾಂಡ್ ಕೋರ್ಸ್ ಪರಿಚಯ

ಕರ್ನಲ್ ಶ್ರೇಣಿ ಸ್ಥಾನವನ್ನು ಈ ಬಾರಿ ಭಾರತೀಯ ಸೇನೆಯಲ್ಲಿ ಅರ್ಧದಷ್ಟು ಮಹಿಳೆಯರಿಗೆ ನೀಡಲಾಗಿದೆ. ಭಾರತೀಯ ಸೇನೆಯಲ್ಲಿ ಶೇ 55 ರಷ್ಟು ಮಹಿಳೆಯರನ್ನು ಕರ್ನಲ್‌ ಶ್ರೇಣಿಗೆ ಆರಿಸಲಾಗಿದೆ.

ಈ ತಿಂಗಳ ಆರಂಭದಲ್ಲಿ ಕಮಾಂಡ್ ನೇಮಕಾತಿಗಳನ್ನು ನೀಡುವ ನೆಪದಲ್ಲಿ ಸೇನೆಯು ಕಿರಿಯ ಶ್ರೇಣಿಯ ಪುರುಷ ಅಧಿಕಾರಿಯನ್ನು ನಿಯೋಜಿಸಲಾಗಿದ್ದ ಹುದ್ದೆಯನ್ನು ತಾತ್ಕಾಲಿಕವಾಗಿ ಮೇಲ್ದರ್ಜೆಗೇರಿಸಿದೆ ಎಂದು ಆರೋಪಿಸಿ ಮಹಿಳಾ ಅಧಿಕಾರಿಗಳ ಗುಂಪು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಮರುನಿಯೋಜಿತ ನೇಮಕಾತಿಗಳು ಪುರುಷ ಮತ್ತು ಮಹಿಳಾ ಅಧಿಕಾರಿಗಳಿಗೆ ಮೀಸಲಿರುತ್ತವೆ ಎಂದು ಅಧಿಕಾರಿಗಳು ಇದೀಗ ತಿಳಿಸಿದ್ದಾರೆ.

“ನೂತನ ‘ಮರುನಿಯೋಜಿತ’ ಹುದ್ದೆಗಳಲ್ಲಿ ಪುರುಷ ಮತ್ತು ಮಹಿಳಾ ಅಧಿಕಾರಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಗುವುದು. ಇದರಿಂದಾಗಿ ಕರ್ನಲ್ ಶ್ರೇಣಿಯಲ್ಲಿರುವ ಮಹಿಳಾ ಅಧಿಕಾರಿಗಳ ನಿಯೋಜನೆಯಲ್ಲಿ ಯಾವುದೇ ಅಸಮಾನತೆಗಳು ಮತ್ತು ವಿಳಂಬ ಉಂಟಾಗುವುದಿಲ್ಲ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಕರ್ನಲ್‌ ಶ್ರೇಣಿ ನೇಮಕಾತಿಗಳು ಮಹಿಳಾ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಸರದಿಯ ಪ್ರಕಾರ ಪುರುಷ ಸೇನಾ ಅಧಿಕಾರಿಗಳೂ ಈ ಸ್ಥಾನ ಪಡೆಯಲಿದ್ದಾರೆ” ಎಂದು ಅಧಿಕಾರಿ ಹೇಳಿದರು.

“ಕರ್ನಲ್‌ ಶ್ರೇಣಿಯಲ್ಲಿನ ಮಹಿಳಾ ಅಧಿಕಾರಿಗಳ ಹಿರಿತನದ ಅವಧಿ ಅವರ ಪುರುಷ ಅಧಿಕಾರಿಗಳಿಗೆ ಸಮಾನವಾಗಿರುತ್ತದೆ. ಮಹಿಳೆಯರ ಮೂಲ ಬ್ಯಾಚ್‌ ಮತ್ತು ಅವರ ಸೇವಾ ಹಿರಿತನಕ್ಕೆ ಸೂಕ್ತ ಮಾನ್ಯತೆ ನೀಡಲಾಗುತ್ತದೆ” ಎಂದು ಅಧಿಕಾರಿ ವಿವರಿಸಿದರು.

ಪ್ರಸ್ತುತ ನಾನಾ ಪ್ರದೇಶಗಳಲ್ಲಿ ನೇಮಿಸಿದ ಸೇನಾ ತುಕಡಿಗಳನ್ನು ಮಹಿಳೆಯರು ನಿರ್ವಹಿಸುತ್ತಿದ್ದಾರೆ. 108 ಮಂದಿ ಮಹಿಳಾ ಸೇನಾಧಿಕಾರಿಗಳಿಗೆ ಉನ್ನತ ಕರ್ನಲ್‌ ಶ್ರೇಣಿ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಹಿಳಾ ಅಧಿಕಾರಿಗಳು ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ಭಾಗವನ್ನು ಒಳಗೊಂಡಿರುವ ಉತ್ತರ ಹಾಗೂ ಪೂರ್ವ ಪ್ರದೇಶದ ಸೇನೆಯ ನೇತೃತ್ವ ವಹಿಸಿದ್ದಾರೆ. ಕರ್ನಲ್‌ ಶ್ರೇಣಿ ಸ್ಥಾನಕ್ಕೆ ವಿಶೇಷ ಆಯ್ಕೆ ಮಂಡಳಿಯು ಜನವರಿಯಲ್ಲಿ 1992ರಿಂದ 2006ರ ಬ್ಯಾಚ್‌ಗಳ 244ರಲ್ಲಿ ಒಟ್ಟು 108 ಮಹಿಳಾ ಅಧಿಕಾರಿಗಳನ್ನು ನಿಯೋಜಿಸಿದೆ. ಸದ್ಯ ಅವರು ದೇಶಾದ್ಯಂತ ನಾನಾ ಸೇನಾ ಘಟಕಗಳಲ್ಲಿ ಸೇನಾ ತುಕಡಿ ನಿರ್ವಹಣೆ ಪಾತ್ರ ವಹಿಸಿಕೊಂಡಿದ್ದಾರೆ.

ಕಮಾಂಡ್ ಪಾತ್ರಗಳಿಗಾಗಿ ಆಯ್ಕೆ ಮಾಡಲಾದ 108 ಮಹಿಳಾ ಅಧಿಕಾರಿಗಳಲ್ಲಿ ಸುಮಾರು ಶೇ. 60ರಷ್ಟು ಮಂದಿಯನ್ನು ಈ ಹಿಂದೆ ಕರ್ನಲ್‌ಗಳು ನಡೆಸುತ್ತಿದ್ದ ನೇಮಕಾತಿಗಳಿಗೆ ನಿಯೋಜಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಪರಿಸರವಾದಿ ವಕೀಲ ರಿತ್ವಿಕ್‌ ದತ್ತಾ ವಿರುದ್ಧ ಎಫ್‌ಸಿಆರ್‌ಎ ಉಲ್ಲಂಘನೆ ಅಡಿ ಸಿಬಿಐ ಪ್ರಕರಣ

ಕರ್ನಲ್‌ ಶ್ರೇಣಿ ಹುದ್ದೆಗೆ ಆಯ್ಕೆ ಮಾಡಲು 2009ರ ನಂತರದ ಎಲ್ಲ ಬ್ಯಾಚ್‌ಗಳಿಗೆ ಸಾಮಾನ್ಯ ಲಿಂಗ ತಟಸ್ಥ ಕರ್ನಲ್ ಆಯ್ಕೆ ಮಂಡಳಿ ಸ್ಥಾಪಿಸಲಾಗಿದೆ.

ಅದರಂತೆ ಪುರುಷರ ಜತೆ ಮಹಿಳೆಯರನ್ನೂ ಸಮಾನವಾಗಿ ಪರಿಗಣಿಸಲಾಗುತ್ತದೆ. ಅಲ್ಲಿ ಅವರ ಅರ್ಹತೆ ಆಧರಿಸಿ ಶ್ರೇಣೀಕರಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕಾರ್ಯಾಚರಣೆ, ಗುಪ್ತಚರ ಮತ್ತು ಆಡಳಿತಾತ್ಮಕ ಅಂಶಗಳ ಎಲ್ಲ ದೃಷ್ಟಿಕೋನಗಳ ಮೇಲೆ ಕೇಂದ್ರೀಕರಿಸುವ ಮೂಲಕ ಮಹಿಳಾ ಅಧಿಕಾರಿಗಳಿಗೆ ವಿಶೇಷ ಹಿರಿಯ ಕಮಾಂಡ್ ಕೋರ್ಸ್ ಪರಿಚಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಂಪತಿಗೆ ಕನ್ನಡ ನಟ ನಾಗಭೂಷಣ್​ ಕಾರು ಡಿಕ್ಕಿ: ಮಹಿಳೆ ಮೃತ್ಯು

ಬೆಂಗಳೂರಿನ ವಸಂತನಗರ ಮುಖ್ಯರಸ್ತೆಯ ಬಳಿ ಶನಿವಾರ ರಾತ್ರಿ ನಡೆದ ಘಟನೆ ರಾತ್ರಿ ವಾಕಿಂಗ್‌...

2 ಸಾವಿರ ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಅ. 7ರವರೆಗೆ ಅವಧಿ ವಿಸ್ತರಿಸಿದ ಆರ್‌ಬಿಐ

ಅಕ್ಟೋಬರ್ 7ರವರೆಗೂ 2000 ರೂ. ನೋಟು ವಿನಿಮಯಕ್ಕೆ ಅವಕಾಶ ಅ.8ರ ನಂತರ 2000...

‘ಲಿಪ್‌ಸ್ಟಿಕ್‌ ಹಾಕಿದ ಮಹಿಳೆಯರು ಮುಂದೆ ಬರುತ್ತಾರೆ’; ಮಹಿಳಾ ಮೀಸಲಾತಿ ಬಗ್ಗೆ ಆರ್‌ಜೆಡಿ ನಾಯಕ ಸೆಕ್ಸಿಸ್ಟ್ ಹೇಳಿಕೆ

ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರದಿಂದ ‘ಲಿಪ್‌ಸ್ಟಿಕ್‌ ಮತ್ತು ಬಾಬ್-ಕಟ್ ಹೇರ್ ಸ್ಟೈಲ್’...

ನಿತೀಶ್ ಪ್ರಯಾಣಕ್ಕೆ ಸಂಚಾರ ತಡೆ; ಟ್ರಾಫಿಕ್‌ನಲ್ಲಿ ಸಿಲುಕಿದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಗು

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಯಾಣಕ್ಕಾಗಿ ಪೊಲೀಸರು ರಸ್ತೆಯಲ್ಲಿ ಇತರ ವಾಹನ...