ಚೀತಾ ಪ್ರಾಜೆಕ್ಟ್‌ | ಕುನೋ ಅಭಯಾರಣ್ಯದಲ್ಲಿ ಮತ್ತೊಂದು ಚೀತಾ ಮರಿ ಸಾವು

Date:

  • ಕುನೋ ಅಭಯಾರಣ್ಯದಲ್ಲಿ ಎರಡು ತಿಂಗಳಲ್ಲಿ ನಾಲ್ಕು ಚೀತಾಗಳ ಸಾವು
  • ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರದ ಯೋಜನೆ ಪ್ರಾಜೆಕ್ಟ್ ಚೀತಾ

ಪ್ರಧಾನಿ ನರೇಂದ್ರ ಮೋದಿ ಬಹಳ ಅಬ್ಬರದಿಂದ ಆರಂಭಿಸಿದ ಯೋಜನೆ ಪ್ರಾಜೆಕ್ಟ್ ಚೀತಾ ಕೇವಲ ಪ್ರಚಾರವಾಗಿ ಉಳಿಯುವಂತೆ ಕಾಣಿಸುತ್ತದೆ. ಭಾರತದಲ್ಲಿ ಚೀತಾಗಳ ಸಂಖ್ಯೆ ಹೆಚ್ಚಿಸುವ ಯೋಜನೆ ಕುಂಟುತ್ತಾ ಸಾಗಿದೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 2023 ಮಾರ್ಚ್ 29ರಂದು ಹುಟ್ಟಿದ ನಾಲ್ಕು ಚೀತಾ ಮರಿಗಳಲ್ಲಿ ಒಂದು ಮೇ 23ರಂದು ಸಾವನ್ನಪ್ಪಿದೆ.

ಚೀತಾ ಮರಿ ಜ್ವಾಲಾ ಸೇರಿದಂತೆ ಈವರೆಗೆ ಕಳೆದ ಎರಡು ತಿಂಗಳಲ್ಲಿ ನಾಲ್ಕು ಚೀತಾಗಳು ಇಲ್ಲಿ ಸಾವನ್ನಪ್ಪಿವೆ. ಪ್ರಸ್ತುತ ಕುನೋ ಅಭಯಾರಣ್ಯದಲ್ಲಿ 17 ವಯಸ್ಕ ಮತ್ತು ಮೂರು ಮರಿ ಚೀತಾಗಳಷ್ಟೇ ಉಳಿದಿವೆ.

ಅಭಯಾರಣ್ಯದ ವಾರ್ಡನ್ ಜೆ ಎಸ್ ಚೌಹಾನ್ ಪ್ರಕಾರ, ಮೇ 23ರಂದು ಬೆಳಗ್ಗೆ 7 ಗಂಟೆಗೆ ಚೀತಾ ಮರಿ ಜ್ವಾಲಾ ಮೃತಪಟ್ಟಿದೆ. “ಮೂರು ಚೀತಾ ಮರಿಗಳು ಅತ್ತಿತ್ತ ಓಡಾಡುತ್ತಿದ್ದರೆ, ಜ್ವಾಲಾ ನೆಲದಲ್ಲಿ ಬಿದ್ದಿರುವುದು ಕಂಡು ಪರಿಶೀಲಿಸಿದಾಗ ಪ್ರಜ್ಞೆತಪ್ಪಿರುವುದು ತಿಳಿದಿದೆ“ ಎಂದು ಚೌಹಾನ್ ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನೆಲದಲ್ಲಿ ಬಿದ್ದಿದ್ದ ಮರಿಯನ್ನು ಪರಿಶೀಲಿಸಿದ ಪಶುತಜ್ಞರಿಗೆ ತಕ್ಷಣಕ್ಕೆ ಸಾವಿಗೆ ಕಾರಣ ತಿಳಿದುಬಂದಿಲ್ಲ. “ಪ್ರಜ್ಞೆ ತಪ್ಪಿದ್ದ ಮರಿಗೆ ಚಿಕಿತ್ಸೆ ನೀಡುತ್ತಿದ್ದಾಗ ಸಾವನ್ನಪ್ಪಿದೆ. ಮರಿಯ ಆರೋಗ್ಯ ಕ್ಷೀಣಿಸಿತ್ತು. ನಾಲ್ಕು ಮರಿಗಳಲ್ಲಿ ಇದು ಚಿಕ್ಕದಾಗಿದ್ದು, ಕಡಿಮೆ ಚಟುವಟಿಕೆ ತೋರಿಸಿತ್ತು. ಇತರ ಮೂರು ಮರಿಗಳಂತಲ್ಲದೆ, ಜಡವಾಗಿ ಬಿದ್ದುಕೊಂಡಿರುತ್ತಿತ್ತು. ಇತರ ಮರಿಗಳಿಗೆ ಹೋಲಿಸಿದಲ್ಲಿ ಕಡಿಮೆ ಹಾಲು ಸೇವಿಸುತ್ತಿತ್ತು” ಎಂದು ಚೌಹಾನ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಕೇಜ್ರೀವಾಲ್ ಸರ್ಕಾರದ ವಿರುದ್ಧ ಮೋದಿ ಸೇಡಿನ ಕ್ರಮ

“ಮರಿಯ ಸಾವನ್ನು ಅಸ್ತಿತ್ವಕ್ಕಾಗಿ ನಡೆದ ಹೋರಾಟ ಎಂದು ಪರಿಗಣಿಸಬೇಕಾಗುತ್ತದೆ. ಸಹಜ ಪರಿಸರವಾಗಿರುವ ಆಫ್ರಿಕಾದಲ್ಲಿಯೇ ಚೀತಾ ಮರಿಗಳು ಧೀರ್ಘ ಕಾಲ ಬದುಕುವ ಪ್ರಮಾಣ ಕಡಿಮೆ. ಚೀತಾಗಳಲ್ಲಿ ಶೇ 10ರಷ್ಟು ಮರಿಗಳು ಮಾತ್ರ ಉಳಿದು ಬೆಳೆಯುತ್ತವೆ. ಇತರ ಬೆಕ್ಕು ಪ್ರಬೇಧದ ಪ್ರಾಣಿಗಳಿಗೆ ಹೋಲಿಸಿದಲ್ಲಿ ಚೀತಾಗಳಲ್ಲಿ ಅತ್ಯಧಿಕ ಜನನ ದರ ಇದೆ, ಉಳಿವಿನ ದರ ಕಡಿಮೆ” ಎಂದು ಅಭಯಾರಣ್ಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮಾರ್ಚ್‌ನಲ್ಲಿ ನಮೀಬಿಯದಿಂದ ತಂದ ಚೀತಾ ಸಾಷಾ ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿತ್ತು. ಏಪ್ರಿಲ್ 24ರಂದು ಮತ್ತೊಂದು ಚೀತಾ ಉದಯ್ ಹೃದಯಾಘಾತದಿಂದ ಸಾವನ್ನಪ್ಪಿತ್ತು. ಮೇ 9ರಂದು ಚೀತಾ ದಕ್ಷ ಗಂಡು ಹುಲಿಗಳ ಜೊತೆಗಿರುವಾಗ ಸಾವನ್ನಪ್ಪಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸುವ ಹೋರಾಟ ಇಂದಿನಿಂದ ಶುರು: ಮಲ್ಲಿಕಾರ್ಜುನ ಖರ್ಗೆ

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದಿನಿಂದ ಆರಂಭವಾಗಲಿದ್ದು, ಕಾಂಗ್ರೆಸ್ ಅಧ್ಯಕ್ಷ...

ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಡಿ ಕೆ ತ್ರಿಪಾಠಿ ನೇಮಕ

ಭಾರತದ ಮುಂದಿನ ನೌಕಾಪಡೆಯ ಮುಖ್ಯಸ್ಥರನ್ನಾಗಿ ಡಿ ಕೆ ತ್ರಿಪಾಠಿ ಅವರನ್ನು ಕೇಂದ್ರ...

ಲೋಕಸಭಾ ಚುನಾವಣೆ | 21 ರಾಜ್ಯಗಳ 102 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಇಂದು

ಲೋಕಸಭಾ ಚುನಾವಣೆ ಯ ಮೊದಲ ಹಂತದ ಮತದಾನ ಇಂದು ನಡೆಯಲಿದ್ದು, ದೇಶದ...

ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಕೊಲ್ಲಲು ಸಂಚು: ಎಎಪಿ ಗಂಭೀರ ಆರೋಪ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರನ್ನು ಕೊಲ್ಲಲು ಸಂಚು ನಡೆಯುತ್ತಿದೆ ಎಂದು...