ಮಧ್ಯಪ್ರದೇಶದ ಜಬಲ್‌ಪುರ್ ಜಿಲ್ಲೆಯ ಅನಿಲ ಕಾರ್ಖಾನೆಯೊಂದರಲ್ಲಿ ರೇಕ್‌ಗಳನ್ನು ಖಾಲಿ ಮಾಡಲು ಹೋಗುತ್ತಿದ್ದ ಗೂಡ್ಸ್ ರೈಲಿನ ಎಲ್‌ಪಿಜಿ ರೇಕ್‌ಗಳಿದ್ದ ಎರಡು ವ್ಯಾಗನ್‌ಗಳು ಹಳಿ ತಪ್ಪಿದ ನಂತರ ದೊಡ್ಡ ಅಪಘಾತ ತಪ್ಪಿಸಲಾಗಿದೆ.
ಜಿಲ್ಲೆಯ ಶಹಪುರ ಭಿಟೋನಿ ನಿಲ್ದಾಣದ ಭಾರತ್ ಪೆಟ್ರೋಲಿಯಂ ಡಿಪೋ ಬಳಿ ಈ ಘಟನೆ ನಡೆದಿದೆ. ಕಳೆದ ರಾತ್ರಿ(ಜೂನ್ 6) ಎಲ್‌ಪಿಜಿಯನ್ನು ಇಳಿಸುತ್ತಿದ್ದ ಸಂದರ್ಭದಲ್ಲಿ ಎರಡು ವ್ಯಾಗನ್‌ಗಳು ಹಳಿ ತಪ್ಪಿದವು. ಆದರೆ ಇದರಿಂದಾಗಿ ಯಾವುದೇ ರೈಲು ಸಂಚಾರಕ್ಕೆ ತೊಂದರೆಯಾಗಿಲ್ಲ ಎಂದು ಕೇಂದ್ರ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಹುಲ್ ಶ್ರೀವಾಸ್ತವ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಮಗುವಿನ ಡಿಎನ್‌ಎ ಪರೀಕ್ಷೆಗೆ ಅನುಮತಿ: ರಾಜಸ್ಥಾನ ಹೈಕೋರ್ಟ್
ರೈಲ್ವೆ ಹಳಿಯನ್ನು ಪುನರ್ ಸ್ಥಾಪಿಸುವ ಕೆಲಸ ಸಾಗಿದ್ದು, ಶೀಘ್ರದಲ್ಲಿ ಕೆಲಸವನ್ನು ಪೂರ್ಣಗೊಳಿಸಲಾಗುವುದು. ಜೂನ್ 2ರಂದು ಒಡಿಶಾದ ಬಾಲ್ ಸೋರ್‌ನಲ್ಲಿ ಸಂಭವಿಸಿದ್ದ ತ್ರಿವಳಿ ರೈಲು ಅಪಘಾತದ ಪ್ರಕರಣದಲ್ಲಿ 280ಕ್ಕೂ ಅಧಿಕ ಮಂದಿ ಪ್ರಯಾಣಿಕರು ಮೃತಪಟ್ಟು, ಒಂದು ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.