ಒಡಿಶಾ ರೈಲು ದುರಂತ | ಕೋಮುವಾದದ ಬಣ್ಣ ಬಳಿಯಲು ಯತ್ನಿಸಿದವರ ವಿರುದ್ಧ ಪೊಲೀಸ್‌ ಕ್ರಮ

Date:

ಸುಳ್ಳು ಸುದ್ದಿ ಹಬ್ಬಿಸಿದ್ದ ಬಲಪಂಥೀಯರು

ಅಸಲಿಯತ್ತು ಬಹಿರಂಗಪಡಿಸಿದ್ದ ʼಆಲ್ಟ್‌ ನ್ಯೂಸ್‌ʼ

ಬಾಲಾಸೋರ್‌ನಲ್ಲಿ ನಡೆದ ರೈಲು ದುರಂತಕ್ಕೆ ಕೋಮುವಾದದ ಬಣ್ಣ ಬಳಿಯಲು ಯತ್ನಿಸಿದ ಬಲಪಂಥೀಯರಿಗೆ ಒಡಿಶಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸುಳ್ಳು ಸುದ್ದಿ ಹರಡಲು ಯತ್ನಸಿದವರ ಮೇಲೆ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಒಡಿಶಾ ಪೊಲೀಸರು, “ಬಾಲಾಸೋರ್‌ನಲ್ಲಿ ನಡೆದ ರೈಲು ದುರಂತಕ್ಕೆ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೋಮುವಾದದ ಬಣ್ಣ ಬಳಿಯುತ್ತಿದ್ದಾರೆ. ಈ ಬೆಳವಣಿಗೆ ದುರದೃಷ್ಟಕರ. ಅಪಘಾತ ಸಂಭವಿಸಿದ್ದು ಹೇಗೆ ಎಂಬುದನ್ನು ಪತ್ತೆ ಹಚ್ಚಲು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂಬಂಧಪಟ್ಟವರು ಈ ರೀತಿಯ ಸುಳ್ಳು ಮತ್ತು ದುರುದ್ದೇಶಪೂರಿತ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನು ನಿಲ್ಲಿಸಬೇಕು. ಕೋಮು ಸೌಹಾರ್ದತೆಯನ್ನು ಹದಗೆಡಿಸಲು ಯತ್ನಿಸಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ರೈಲು ಅಪಘಾತ ಸಂಭವಿಸಿದ ಸ್ಥಳದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ, ಆ ಫೋಟೋದಲ್ಲಿ ಕಾಣಸಿಗುವ ಕಟ್ಟಡವೊಂದನ್ನು ಮಸೀದಿ ಎಂದು ಬಿಂಬಿಸಿದ್ದ ಬಲಪಂಥೀಯರು ಮತ್ತು ಬಿಜೆಪಿ ಬೆಂಬಲಿಗರು, “ಅಪಘಾತ ಸಂಭವಿಸಿರುವುದು ಶುಕ್ರವಾರ, ರೈಲ್ವೆ ಹಳಿಯ ಪಕ್ಕದಲ್ಲಿ ಮಸೀದಿ ಇದೆ. ಇದೇ ಮಸಿದಿಯಲ್ಲಿ ಅಪಘಾತಕ್ಕೆ ಅಗತ್ಯ ಪ್ರಯೋಗಗಳು ನಡೆದಿವೆ. ಘಟನೆಗೆ ಮುಸ್ಲಿಮರೇ ಕಾರಣ” ಎಂದು ಆರೋಪಿಸಿದ್ದರು.

ಆದರೆ, ಈ ಸುಳ್ಳು ಸುದ್ದಿಯ ಹಿಂದೆ ಬಿದ್ದಿದ್ದ ಸತ್ಯ ಶೋಧನಾ ಸಂಸ್ಥೆ ʼಆಲ್ಟ್‌ ನ್ಯೂಸ್‌ʼ ವೈರಲ್‌ ಫೋಟೋದಲ್ಲಿರುವ ಕಟ್ಟಡದ ಅಸಲಿಯತ್ತನ್ನು ಬಹಿರಂಗ ಪಡಿಸಿತ್ತು. ಘಟನಾ ಸ್ಥಳದಿಂದ ಕೂಗಳತೆ ದೂರದಲ್ಲಿರುವ ಈ ಬಹುಚರ್ಚಿತ ಕಟ್ಟಡ ಮಸೀದಿ ಅಲ್ಲ, ಬದಲಿಗೆ ನಿರ್ಮಾಣ ಹಂತದಲ್ಲಿರುವ ಇಸ್ಕಾನ್‌ ಮಂದಿರ ಎಂಬುದನ್ನು ಫೋಟೋ ಮತ್ತು ವಿಡಿಯೋಗಳ ಮೂಲಕ ಸ್ಪಷ್ಟಪಡಿಸಿತ್ತು.

ಇದರ ಬೆನ್ನಲ್ಲೇ ತನಿಖೆಯ ಪ್ರಾಥಮಿಕ ವರದಿಯನ್ನು ಉಲ್ಲೇಖಿಸಿ ಮಾತನಾಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ” ʼಎಲೆಕ್ಟ್ರಾನಿಕ್‌ ಇಂಟರ್‌ಲಾಕಿಂಗ್‌ʼ ಮತ್ತು ʼಪಾಯಿಂಟ್‌ ಮಷಿನ್‌ʼಗಳಲ್ಲಿನ ಬದಲಾವಣೆಯಿಂದ ಅಪಘಾತ ಸಂಭವಿಸಿದೆ” ಎಂದು ಮಾಹಿತಿ ನೀಡಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉದಯನಿಧಿ ಪೂರ್ವಜರು ಕೂಡ ಸನಾತನ ಧರ್ಮದ ಬಗ್ಗೆ ಮಾತನಾಡಿದ್ದರು: ನಟ ಕಮಲ್ ಹಾಸನ್

ಕೊಯಮತ್ತೂರಿನಲ್ಲಿ ಮಕ್ಕಳ್ ನೀಧಿ ಮೈಯಂ ಪಕ್ಷದ ಸಭೆಯಲ್ಲಿ ಹೇಳಿಕೆ ನೀಡಿದ ಸ್ಥಾಪಕ ಪೆರಿಯಾರ್...

ಬಿಜೆಪಿ ಸಂಸದನಿಂದ ಅವಹೇಳನ: ಸ್ಪೀಕರ್‌ ವಿರುದ್ಧ ಸಿಡಿದೆದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಮರ್ಯಾದಾ ಪುರುಷ ಸ್ಪೀಕರ್ ಅವರೇ ಏನು ಕ್ರಮ ಕೈಗೊಳ್ಳುತ್ತೀರಿ? ಬಹಿರಂಗವಾಗಿಯೇ ಪ್ರಶ್ನಿಸಿದ...

ಯುಪಿಯ ಸರ್ಕಾರ ಒಬಿಸಿ ಕೋಟಾ ಸೇರಿಸದಿರುವುದಕ್ಕೆ ವಿಷಾದವಿದೆ: ರಾಹುಲ್‌ ಗಾಂಧಿ

ಯುಪಿಎ ಸರ್ಕಾರ 2010ರಲ್ಲಿ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಮಹಿಳೆಯರಿಗೆ...

ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದ ಎಬ್ಬಿಸಿದ ‘ಭಯೋತ್ಪಾದಕ’ ಹೇಳಿಕೆ | ಬಿಜೆಪಿ ಸಂಸದನ ಬಂಧನಕ್ಕೆ ಆಗ್ರಹ

ಬಿಎಸ್‌ಪಿಯ ಮುಸ್ಲಿಂ ಸಂಸದ ದಾನಿಶ್ ಅಲಿಯನ್ನು ಭಯೋತ್ಪಾದಕ ಎಂದು ಕರೆದಿದ್ದ ರಮೇಶ್...