ದಾರಿತಪ್ಪಿಸುವ ಜಾಹೀರಾತು; ಬೌರ್ನ್‌ವಿಟಾ ಸಂಸ್ಥೆಗೆ ಮಕ್ಕಳ ಆಯೋಗ ನೋಟಿಸ್

Date:

  • ಬೌರ್ನ್ವಿಟಾದಲ್ಲಿ ಹಾನಿಕಾರಕ ಹೆಚ್ಚಿನ ಸಕ್ಕರೆ ಅಂಶವಿದೆ ಎಂದು ನೋಟಿಸ್
  • ಈ ಆರೋಗ್ಯ ಪಾನೀಯ ಕುಡಿದರೆ ಕ್ಯಾನ್ಸರ್‌ ಬರುತ್ತದೆ ಎಂದಿದ್ದ ರೇವಂತ್ ಹಿಮತ್ಸಿಂಕಾ

ದಾರಿತಪ್ಪಿಸುವ ಜಾಹೀರಾತುಗಳು, ಪ್ಯಾಕೇಜಿಂಗ್ ಮತ್ತು ಲೇಬಲ್‌ಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಆರೋಗ್ಯ ಪಾನೀಯ ಬೌರ್ನ್‌ವಿಟಾ ತಯಾರಿಸುವ ಮೊಂಡೆಲೆಜ್ ಇಂಟರ್‌ನ್ಯಾಶನಲ್ ಇಂಡಿಯಾ ಸಂಸ್ಥೆಗೆ ಮಕ್ಕಳ ಹಕ್ಕುಗಳ ರಕ್ಷಣಾ ರಾಷ್ಟ್ರೀಯ ಆಯೋಗ ನೋಟಿಸ್ ನೀಡಿದೆ.

“ಈ ಆರೋಗ್ಯ ಪಾನೀಯದಲ್ಲಿ ಹೆಚ್ಚಿನ ಸಕ್ಕರೆ ಅಂಶವಿದೆ. ಅಲ್ಲದೆ ನಿಮ್ಮ ಕಂಪನಿಯು ತಯಾರಿಸಿದ ಉತ್ಪನ್ನವು ಪ್ಯಾಕೇಜಿಂಗ್ ಮತ್ತು ಜಾಹೀರಾತುಗಳ ಮೂಲಕ ಗ್ರಾಹಕರನ್ನು ದಾರಿತಪ್ಪಿಸುತ್ತಿದೆ ಎಂಬುದನ್ನು ಆಯೋಗ ಗಮನಿಸುತ್ತಿದೆ” ಎಂದು ಮಕ್ಕಳ ಹಕ್ಕುಗಳ ಸಂಸ್ಥೆಯು ಏಪ್ರಿಲ್ 21ರಂದು ನೀಡಿರುವ ನೋಟಿಸ್‌ನಲ್ಲಿ ತಿಳಿಸಿದೆ.

ಮಕ್ಕಳ ಬೆಳವಣಿಗೆಯನ್ನು ಹೆಚ್ಚಿಸುವ ಆರೋಗ್ಯ ಪಾನೀಯವಾಗಿ ಬೌರ್ನ್‌ವಿಟಾವನ್ನು ಮೊಂಡೆಲೆಜ್ ಇಂಟರ್‌ನ್ಯಾಶನಲ್ ಇಂಡಿಯಾ ಕಂಪನಿ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿ ದೂರು ಸ್ವೀಕರಿಸಲಾಗಿದೆ ಎಂದಿರುವ ಆಯೋಗ, “ಇದು ಹೆಚ್ಚಿನ ಶೇಕಡಾವಾರು ಸಕ್ಕರೆ ಮತ್ತು ಇತರ ಪದಾರ್ಥಗಳನ್ನು ಹೊಂದಿದ್ದು, ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ” ಎಂಬ ಆರೋಪಿಸಿದೆ.

ಈ ಸುದ್ದಿ ಓದಿದ್ದೀರಾ? ಮೋದಿ ಉಪನಾಮ ಪ್ರಕರಣ: ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಹೈಕೋರ್ಟ್‌ ನ್ಯಾಯಮೂರ್ತಿ

ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯರಾಗಿರುವ ರೇವಂತ್ ಹಿಮತ್ಸಿಂಕಾ ಎಂಬವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, “ಮಕ್ಕಳ ಪಾನೀಯವೆಂದೇ ಜನಪ್ರಿಯವಾಗಿರುವ ಬೌರ್ನ್‌ವಿಟಾದಲ್ಲಿ ಹೆಚ್ಚಿನ ಸಕ್ಕರೆ ಅಂಶವಿದೆ. ಇದನ್ನು ಸೇವಿಸುವುದರಿಂದ ಮಧುಮೇಹ ಮತ್ತು ಕ್ಯಾನ್ಸರ್‌ ಬರಬಹುದು” ಎಂದು ಆರೋಪಿಸಿದ್ದರು.

ಈ ವಿಡಿಯೋ ಹಂಚಿಕೊಂಡ ನಂತರ ವಿವಾದ ಉಂಟಾಗಿದೆ. ಅಲ್ಲದೆ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ 1 ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಆದರೆ ಏಪ್ರಿಲ್ 13 ರಂದು ಮೊಂಡೆಲೆಜ್ ಇಂಡಿಯಾವು ಕಾನೂನು ಕ್ರಮ ಕೈಗೊಳ್ಳುವುದಾಗಿ ಸೂಚನೆಯನ್ನು ನೀಡಿದ ನಂತರ ಹಿಮತ್ಸಿಂಕಾ ಅವರು ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ರೇವಂತ್ ಹಿಮತ್ಸಿಂಕಾ ಅವರ ಟ್ವಿಟರ್ ಹ್ಯಾಂಡಲ್ ಅನ್ನೂ ಅಮಾನತುಗೊಳಿಸಲಾಗಿದೆ.

ವಿಡಿಯೊದಲ್ಲಿ ಮಾಡಿರುವ ಆರೋಪಗಳನ್ನು ಬೌರ್ನ್‌ವಿಟಾ ಸಂಸ್ಥೆ ನಿರಾಕರಿಸಿದ್ದು, ಬಳಕೆಗೆ ಅನುಮೋದಿಸಲಾದ ಪದಾರ್ಥಗಳನ್ನು ಉಪಯೋಗಿಸಿ, ವೈಜ್ಞಾನಿಕವಾಗಿ ವಿನ್ಯಾಸಗೊಳಿಸಿದ ಸೂತ್ರವನ್ನು ಆಧರಿಸಿ ಉತ್ಪನ್ನವನ್ನು ತಯಾರಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಮ್ಮು ಕಾಶ್ಮೀರದಲ್ಲಿ ಉದ್ದೇಶಪೂರ್ವಕವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ: ಒಮರ್, ಮೆಹಬೂಬಾ ಆರೋಪ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ...

ಭಾರತದ ‘ಹಸಿರು ಕ್ರಾಂತಿ’ಯ ಪಿತಾಮಹ ಎಂ ಎಸ್‌ ಸ್ವಾಮಿನಾಥನ್‌ ನಿಧನ

ಭಾರತದ 'ಹಸಿರು ಕ್ರಾಂತಿ'ಯ ಪಿತಾಮಹ ಎಂದು ಖ್ಯಾತರಾಗಿದ್ದ ಎಂ ಎಸ್ ಸ್ವಾಮಿನಾಥನ್...

ಬಿಜೆಪಿಯ ದುರಾಡಳಿತದಲ್ಲಿ ಮಹಿಳೆಯರು ಸುರಕ್ಷಿತರಲ್ಲ: ಉಜ್ಜಯಿನಿ ಘಟನೆಗೆ ಪ್ರಿಯಾಂಕಾ ಆಕ್ರೋಶ

ಮಧ್ಯಪ್ರದೇಶದ ಉಜ್ಜಯಿನಿ ನಗರದ ಬೀದಿಯಲ್ಲಿ 12 ವರ್ಷದ ಬಾಲಕಿಯ ಅತ್ಯಾಚಾರ 'ಲಾಡ್ಲಿ ಬೆಹನಾ'...

ಕೇಜ್ರಿವಾಲ್ ಬಂಗಲೆ ನಿರ್ಮಾಣದಲ್ಲಿ ಅಕ್ರಮ ಎಂದ ಸಿಬಿಐ; ಬಿಜೆಪಿಯ ಸೇಡು ಎಂದು ಎಎಪಿ ತಿರುಗೇಟು

ನವದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ನೂತನ ಅಧಿಕೃತ ನಿವಾಸ ನಿರ್ಮಾಣಕ್ಕೆ...