ಅಮೃತ್‌ಪಾಲ್‌ ಆಪ್ತರ ಬಂಧನಕ್ಕೆ ಬ್ರಿಟಿಷ್‌ ಸಂಸದ ಮೃದು ಧೋರಣೆ; ಸಿಂಘ್ವಿ ಖಂಡನೆ

Date:

  • ಅಮೃತ್‌ಪಾಲ್‌ ಸಿಂಗ್‌ನ 112 ಬೆಂಬಲಿಗರ ಬಂಧನ
  • ಪೊಲೀಸರಿಂದ ತಲೆಮರೆಸಿಕೊಂಡಿರುವ ಅಮೃತ್‌ಪಾಲ್

ಪಂಜಾಬ್‌ನಲ್ಲಿ ಸಿಖ್‌ ಮೂಲಭೂತವಾದಿ ಮತ್ತು ಧರ್ಮ ಪ್ರಚಾರಕ ಅಮೃತ್‌ಪಾಲ್‌ ಸಿಂಗ್‌ ಆಪ್ತರ ಬಂಧನದ ಬಗ್ಗೆ ಬ್ರಿಟಿಷ್‌ ಸಂಸತ್‌ನ ಲೇಬರ್‌ ಪಕ್ಷದ ಸಿಖ್‌ ಸಂಸದ ತನ್‌ಮನ್ಜೀತ್‌ ಸಿಂಗ್‌ ದೇಸಾಯಿ ಭಾನುವಾರ (ಮಾರ್ಚ್ 19) ಮೃದು ಧೋರಣೆ ತಾಳಿದ್ದಾರೆ. ಇದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, “ಭಾರತದ ಪಂಜಾಬ್‌ ರಾಜ್ಯದಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಂಡಿರುವುದು, ಖಲಿಸ್ತಾನ್‌ ಸಂಬಂಧಿತ ಬಂಧನಗಳು, ಗುಂಪು ಸೇರದಂತೆ ವಿಧಿಸಿರುವ ನಿರ್ಬಂಧಗಳಂತಹ ಕಳವಳಕಾರಿ ವರದಿಗಳು ಬರುತ್ತಿವೆ. ಈ ಉದ್ವಿಗ್ನ ಪರಿಸ್ಥಿತಿ ಶೀಘ್ರ ಕೊನೆಗೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.

ಸಿಖ್ ಸಮುದಾಯದ ಬ್ರಿಟಿಷ್‌ ಸಂಸದನ ಈ ಹೇಳಿಕೆಯನ್ನು ಕಾಂಗ್ರೆಸ್‌ ವಕ್ತಾರ ಹಾಗೂ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ಖಂಡಿಸಿದ್ದಾರೆ.

“ಖಲಿಸ್ತಾನಿಗಳ ಪರವಾದ ಬ್ರಿಟಿಷ್‌ ಸಂಸದನ ಈ ಮಾತುಗಳಿಂದ ಅವರಿಗೆ ಹೆಚ್ಚು ಮತಗಳು ದೊರೆಯುವುದಿಲ್ಲ. ಈ ಮೂಲಕ ಅವರು ಇಂಗ್ಲೆಂಡ್‌ನಲ್ಲಿ ಹೊಸ ಖಲಿಸ್ತಾನ್ ರೂಪಿಸಲು ಹೊರಟಿದಿದ್ದಾರೆ? ನೀವು ಇಂಗ್ಲೆಂಡ್‌ನಲ್ಲಿ ಖಾಲಿಸ್ತಾನಿಗಳ ಪರ ಭಾವನೆಗಳನ್ನು ಪೋಷಿಸಲು ಮುಂದಾಗಿದ್ದೀರಿ” ಎಂದು ಅಣಕವಾಡಿದ್ದಾರೆ.

ಪಂಜಾಬ್‌ನಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಿ, ಪೊಲೀಸರು ಕೈಗೊಂಡ ಕಾರ್ಯಾಚರಣೆಯಲ್ಲಿ ಅಮೃತ್‌ಪಾಲ್‌ ಸಿಂಗ್‌ನ 112 ಬೆಂಬಲಿಗರನ್ನು ಭಾನುವಾರ (ಮಾರ್ಚ್‌ 19) ತಡರಾತ್ರಿ ಬಂಧಿಸಿದ್ದಾರೆ. ಆ ನಂತರದಲ್ಲಿ ಬ್ರಿಟಿಷ್‌ ಸಂಸದ ಈ ಟ್ವೀಟ್‌ ಮಾಡಿದ್ದಾರೆ.

ಅಮೃತ್‌ಪಾಲ್‌ ಸಿಂಗ್‌ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.

ಈ ಸುದ್ದಿ ಓದಿದ್ದೀರಾ? 45 ದಿನಗಳ ನಂತರ ಈಗೇಕೆ ನೋಟಿಸ್? ಕೇಂದ್ರದ ನಡೆಗೆ ಕಾಂಗ್ರೆಸ್ ಆಕ್ರೋಶ

ಇತ್ತೀಚಿನ ತಿಂಗಳುಗಳಲ್ಲಿ ಸಿಖ್ಖರಿಗಾಗಿ ಪ್ರತ್ಯೇಕ ರಾಜ್ಯ ಖಲಿಸ್ತಾನ ರಚನೆಗೆ ಸಿಖ್‌ ಮೂಲಭೂತವಾದಿ ಅಮೃತ್‌ಪಾಲ್‌ ಸಿಂಗ್‌ ತನ್ನ ಬೆಂಬಲಿಗರ ನೇತೃತ್ವದಲ್ಲಿ ಪಂಜಾಬ್‌ನಲ್ಲಿ ಚಳವಳಿ ಆರಂಭಿಸಿದ್ದಾನೆ.

ಪ್ರತ್ಯೇಕತಾವಾದಿ ಅಂಶಗಳ ಆಧಾರದಲ್ಲಿ ಪೊಲೀಸರು ಅಮೃತ್‌ಪಾಲ್‌ ಸಿಂಗ್‌ ಪರ ಬೆಂಬಲಿಗರ ಬಂಧಿಸಿದ ನಂತರ ಇಂಗ್ಲೆಂಡ್‌ನಲ್ಲಿಯ ಖಲಿಸ್ತಾನಿ ಪರ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಕೆಲವರು ಲಂಡನ್‌ನಲ್ಲಿ ಭಾರತದ ರಾಷ್ಟ್ರಧ್ವಜವನ್ನು ಕೆಳಗೆ ಎಳೆದರು. ಇದು ಮತ್ತಷ್ಟು ವಿವಾದಕ್ಕೆ ಕಾರಣವಾಯಿತು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರತ್ಯೇಕ ಬಜೆಟ್‌ ಮಂಡನೆ ಪದ್ಧತಿ ಸ್ಥಗಿತಗೊಳಿಸಿ ಬಿಜೆಪಿ ರೈಲ್ವೆ ವ್ಯವಸ್ಥೆ ನಾಶಗೊಳಿಸಿದೆ: ಮಮತಾ ಬ್ಯಾನರ್ಜಿ ಟೀಕೆ

ಕೋಲ್ಕತ್ತದಲ್ಲಿ ಸುದ್ದಿಗಾರರ ಜೊತೆ ಮಮತಾ ಬ್ಯಾನರ್ಜಿ ಮಾತು 2017ರಲ್ಲಿ ಕೇಂದ್ರ ಬಜೆಟ್‌ ಜೊತೆ...

ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಅನುಮತಿ ಕೇಳಿದ್ದಕ್ಕೆ ಗುಜರಾತ್‌ ಹೈ ನ್ಯಾಯಾಧೀಶರು `ಮನುಸ್ಮೃತಿ ಓದಿ’ ಎಂದರು!

ಅಪ್ರಾಪ್ತೆ ಮೇಲೆ ಅತ್ಯಾಚಾರವಾಗಿ 7 ತಿಂಗಳ ಗರ್ಭಿಣಿಯಾಗಿದ್ದು, ಆಕೆಗೆ ಗರ್ಭಪಾತ ಮಾಡಬಹುದೇ...

ಒಡಿಶಾ | ದುರ್ಗ್-ಪುರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ; ತಪ್ಪಿದ ಪ್ರಾಣಹಾನಿ

ಒಡಿಶಾ ರಾಜ್ಯದ ನುವಾಪಾದ ಜಿಲ್ಲೆಯಲ್ಲಿ ರೈಲಿನ ಎಸಿ ಕೋಚ್‌ನಲ್ಲಿ ಬೆಂಕಿ ಬಾಲಾಸೋರ್‌ನಲ್ಲಿ ತ್ರಿವಳಿ...

ಕೇರಳ | ಆರು ವರ್ಷದ ಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ತಂದೆ

ಆರು ವರ್ಷದ ಬಾಲಕಿಯನ್ನು ಸ್ವತಃ ತಂದೆಯೇ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ...