ರಫ್ತು ಮಾಡುವ ಕೆಮ್ಮಿನ ಸಿರಪ್‌ ಔಷಧಗಳಿಗೆ ಜೂನ್‌ 1ರಿಂದ ಪರೀಕ್ಷೆ ಕಡ್ಡಾಯ

Date:

  • ಭಾರತದ ಕೆಮ್ಮಿನ ಸಿರಪ್‌ ಸೇವಿಸಿ ಗಾಂಬಿಯಾ, ಉಜ್ಬಕಿಸ್ತಾನದಲ್ಲಿ ಮಕ್ಕಳ ಸಾವು
  • ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಸೂಚನೆ

ಭಾರತದಿಂದ ವಿದೇಶಗಳಿಗೆ ರಫ್ತಾಗುವ ಕೆಮ್ಮಿನ ಸಿರಪ್‌ಗಳನ್ನು ಜೂನ್‌ 1ರಿಂದ ಸರ್ಕಾರಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸುವುದನ್ನು ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ಮಂಗಳವಾರ (ಮೇ 23) ಆದೇಶ ನೀಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದಿಂದ ರಫ್ತಾದ ಸಿರಪ್‌ಗಳ ಗುಣಮಟ್ಟದ ಬಗ್ಗೆ ಟೀಕೆ ವ್ಯಕ್ತವಾಗಿರುವುದು ಮತ್ತು ವಿಶ್ವಸಂಸ್ಥೆಯೇ ಭಾರತದ ಕೆಮ್ಮಿನ ಸಿರಪ್‌ಗಳ ಸೇವನೆ ಬಗ್ಗೆ ಎಚ್ಚರಿಕೆ ಪ್ರಕಟಿಸಿದ ನಂತರ ಕೇಂದ್ರ ಸರ್ಕಾರ ಎಚ್ಚೆತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ವೈದ್ಯಕೀಯ ಉತ್ಪನ್ನಗಳ ಗುಣಮಟ್ಟ ಕಾಪಾಡುವ ಉದ್ದೇಶದಿಂದ ನಿಯಮಗಳನ್ನು ಹೇರುತ್ತಿದೆ.

ಭಾರತದಿಂದ ರಫ್ತಾದ ಕೆಮ್ಮಿನ ಔಷಧಗಳ ಸೇವನೆಯಿಂದ ಗಾಂಬಿಯಾ ಮತ್ತು ಉಜ್ಬೇಕಿಸ್ತಾನದಲ್ಲಿ ಅನೇಕ ಮಕ್ಕಳು ಮೃತಪಟ್ಟ ವರದಿಯಿಂದ ದೇಶದ ಔಷಧ ಮಾರುಕಟ್ಟೆ ಮೇಲೆ ಸಂಶಯದ ನೆರಳು ವ್ಯಾಪಿಸಿದ ನಂತರ ಕೇಂದ್ರ ಸರ್ಕಾರ ಇದೀಗ ಕ್ರಮ ಕೈಗೊಂಡಿದೆ.

ರಫ್ತಾಗುವ ಔಷಧಗಳ ಪರೀಕ್ಷೆ ಕಡ್ಡಾಯವಾಗಿದ್ದು, ಜೂನ್ 1ರಿಂದಲೇ ಈ ಕೆಮ್ಮಿನ ಸಿರಪ್‌ಗಳ ಮೇಲೆ ರಫ್ತು ನಿಯಮ ಅನ್ವಯವಾಗಲಿದೆ. ಎಲ್ಲ ಔಷಧ ಕಂಪನಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಆದೇಶದಲ್ಲಿ ಹೇಳಿದೆ.

“ಭಾರತದಿಂದ ವಿದೇಶಗಳಿಗೆ ರಫ್ತು ಮಾಡುವ ಮೊದಲು ಸಿರಪ್‌ಗಳನ್ನು ಸರ್ಕಾರಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿ ಪ್ರಮಾಣಪತ್ರ ಪಡೆಯಬೇಕು. ರಫ್ತು ಮಾಡುವ ಕೆಮ್ಮಿನ ಸಿರಪ್‌ ಮಾದರಿಯನ್ನು ಪರೀಕ್ಷಿಸಿ, ಉತ್ಪನ್ನದ ಗುಣಮಟ್ಟ ಖಾತರಿಪಡಿಸುವ ಪ್ರಮಾಣಪತ್ರ ಪಡೆದ ಬಳಿಕ ಔಷಧ ರಫ್ತು ಮಾಡಬೇಕು” ಎಂದು ವಾಣಿಜ್ಯ ಸಚಿವಾಲಯದ ನೋಟಿಸ್‌ ಹೇಳಿದೆ.

ಭಾರತೀಯ ಕೆಮ್ಮಿನ ಸಿರಪ್‌ಗಳಿಂದ ಮಕ್ಕಳಿಗೆ ಅಪಾಯವಾಗಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿತ್ತು. ಇದೀಗ ಇಂತಹ ಪ್ರಕರಣಗಳನ್ನು ಗಮನದಲ್ಲಿಟ್ಟು ಸರ್ಕಾರ ಪ್ರಮಾಣಪತ್ರ ಕಡ್ಡಾಯದ ನಿರ್ಧಾರ ಕೈಗೊಂಡಿದೆ.

ಯಾವುದೇ ಕಂಪನಿಯ ಔಷಧಿಗಳು ಮತ್ತು ವಿಶೇಷವಾಗಿ ಕೆಮ್ಮಿನ ಔಷಧಗಳನ್ನು ವಿದೇಶಕ್ಕೆ ಕಳುಹಿಸುವ ಮೊದಲು ಸರ್ಕಾರಿ ಪ್ರಯೋಗಾಲಯಗಳಲ್ಲಿ ಕಡ್ಡಾಯವಾಗಿ ಪರೀಕ್ಷಿಸಬೇಕು. ವಿದೇಶಕ್ಕೆ ರಫ್ತಾಗುವ ಕೆಮ್ಮಿನ ಔಷಧ ಉತ್ಪನ್ನಗಳ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ನಂತರವೇ ಕೆಮ್ಮಿನ ಔಷಧಿಗಳನ್ನು ರಫ್ತು ಮಾಡಲು ಅನುಮತಿಸಲಾಗುವುದು ಎಂದು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.

ಈ ಪರೀಕ್ಷೆಯನ್ನು ಭಾರತೀಯ ಔಷಧ ಸಂಹಿತೆ ಆಯೋಗ, ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯಗಳು ಮತ್ತು ಎನ್‌ಎಬಿಎಲ್ ಮಾನ್ಯತೆ ಪಡೆದ ಔಷಧ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಮಾಡಬಹುದಾಗಿದೆ.

ಭಾರತ ನಾನಾ ಲಸಿಕೆಗಳಿಗೆ ಇರುವ ಜಾಗತಿಕ ಬೇಡಿಕೆಯ 50 ಪ್ರತಿಶತಕ್ಕೂ ಹೆಚ್ಚು ಪೂರೈಕೆ ಮಾಡುತ್ತದೆ. 2021-22ರ ಆರ್ಥಿಕ ವರ್ಷದಲ್ಲಿ 17 ಬಿಲಿಯನ್ ಡಾಲರ್ ಮೌಲ್ಯದ ಕೆಮ್ಮಿನ ಸಿರಪ್‌ ಅನ್ನು ಭಾರತದಿಂದ ವಿದೇಶಗಳಿಗೆ ರಫ್ತು ಮಾಡಲಾಗಿದೆ. 2022-23ರಲ್ಲಿ ಈ ಮೊತ್ತವು 17.6 ಶತಕೋಟಿ ಡಾಲರ್‌ಗಳಿಗೆ ಏರಿದೆ. ಹೀಗೆ, ಭಾರತವು ಜಾಗತಿಕವಾಗಿ ಕೆಮ್ಮಿನ ಔಷಧಗಳ ಅತಿ ದೊಡ್ಡ ಪೂರೈಕೆದಾರನೆಂಬ ಘನತೆ ಹೊಂದಿತ್ತು. ಇದೀಗ ಆಫ್ರಿಕಾ ದೇಶಗಳಿಗೆ ರಫ್ತಾದ ಕೆಮ್ಮಿನ ಔಷಧಗಳ ಬಗ್ಗೆ ಅನುಮಾನ ಮೂಡಿರುವುದು ಔಷಧ ಉದ್ಯಮಕ್ಕೆ ಹಿನ್ನಡೆಯಾಗಿದೆ.

ಈ ಸುದ್ದಿ ಓದಿದ್ದೀರಾ? ಇಂದಿನಿಂದ 2,000 ರೂ. ನೋಟು ಬದಲಾವಣೆ; ಆಧಾರ್ ಕಡ್ಡಾಯವಾ?

ಅಮೆರಿಕದ ಸುಮಾರು 40 ಪ್ರತಿಶತದಷ್ಟು ಔಷಧ ಬೇಡಿಕೆ, ಇಂಗ್ಲೆಂಡ್‌ನ ಎಲ್ಲ ಔಷಧಿಗಳ ಸುಮಾರು 25 ಪ್ರತಿಶತವನ್ನು ಭಾರತದ ಔಷಧ ಉದ್ಯಮ ಪೂರೈಸುತ್ತದೆ. ಜಾಗತಿಕವಾಗಿ, ಭಾರತವು ಔಷಧೀಯ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ.

ಭಾರತದ ಕೆಮ್ಮಿನ ಸಿರಪ್‌ ಸೇವಿಸಿ ಗಾಂಬಿಯಾದಲ್ಲಿ 70 ಮಕ್ಕಳು ಹಾಗೂ ಉಜ್ಬೇಕಿಸ್ತಾನದಲ್ಲಿ 19 ಮಕ್ಕಳು ಮೃತಪಟ್ಟಿರುವುದು ದೇಶದ ಔಷಧ ಮಾರುಕಟ್ಟೆ ಮೇಲೆ ಪರಿಣಾಮ ಬೀರಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಡಿಶಾ ರೈಲು ದುರಂತ : ಜೋ ಬೈಡನ್‌ ಸೇರಿ ಜಗತ್ತಿನ ಹಲವು ಗಣ್ಯರಿಂದ ಸಂತಾಪ

ರೈಲು ದುರಂತಕ್ಕೆ 288 ಮಂದಿ ಪ್ರಯಾಣಿಕರು ಬಲಿ ಸಾವಿರಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ...

ನಮ್ಮ ಸಚಿವರು | ಅಂದು ಗೌಡರ ಶಿಷ್ಯ, ಇಂದು ಸಿದ್ದು ಬಂಟ; ಪ್ರಭಾವಿ ರಾಜಕೀಯ ನಾಯಕನಾದ ಟ್ರಾವೆಲ್ಸ್ ಮಾಲೀಕ

ಬೆಂಗಳೂರಿನ ರಾಜಕೀಯದಲ್ಲಿ ಜಮೀರ್ ಅಹ್ಮದ್ ಖಾನ್ ಕೂಡ ಪ್ರಭಾವಿಯಾಗಿದ್ದಾರೆ. 2015ರಲ್ಲಿ ನಡೆದ...

ಬಾಲಸೋರ್ ರೈಲು ಅವಘಡ | ಗಾಯಾಳು ಕನ್ನಡಿಗರ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದಲ್ಲಿ ಶುಕ್ರವಾರ ಸಂಭಿವಿಸಿದ  ಭೀಕರ...

ಕಡು ಬಡತನದಲ್ಲಿಯೂ 10ನೇ ತರಗತಿ ಪಾಸು ಮಾಡಿದ ಅಮ್ಮ-ಮಗ

ಮಾಂಜ್ರಿಯಲ್ಲಿನ ಬಿಸ್ಲೇರಿ ಬಾಟಲ್ ವಾಟರ್ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮೋನಿಕಾ 'ನನ್ನ...