ಜಮ್ಮು ಮತ್ತು ಕಾಶ್ಮೀರ | ಸಚಿವ ಕಿರಣ್ ರಿಜುಜು ಕಾರು ಅಪಘಾತ; ಯಾವುದೇ ಅಪಾಯವಿಲ್ಲ

Date:

  • ಜಮ್ಮು-ಕಾಶ್ಮೀರ ಮೂಲಕ ಉಧಮ್‌ಪುರಕ್ಕೆ ತೆರಳುತ್ತಿದ್ದ ಕಿರಣ್ ರಿಜಿಜು
  • ರಾಂಬನ್ ಜಿಲ್ಲೆಯ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ

ಕಾನೂನು ಸಚಿವ ಕಿರಣ್ ರಿಜಿಜು ಅವರ ಕಾರು ಜಮ್ಮು-ಕಾಶ್ಮೀರ ರಾಂಬನ್ ಜಿಲ್ಲೆಯ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದ ವೇಳೆ ಶನಿವಾರ (ಏಪ್ರಿಲ್ 8) ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಆದರೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.

ರಿಜಿಜು ಅವರು ಉಧಮ್‌ಪುರದಿಂದ ಕಾಶ್ಮೀರಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ಮರೂಗ್ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಕಾರು ಹಾಗೂ ಟ್ರಕ್‌ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಟ್ರಕ್‌ ಸರಕುಗಳಿಂದ ತುಂಬಿತ್ತು. ಅಪಘಾತದಿಂದ ಗುಂಡು ನಿರೋಧಕ ಕಾರು ಜಖಂಗೊಂಡಿದೆ. ಜಮ್ಮುವಿನಿಂದ ಶ್ರೀನಗರಕ್ಕೆ ರಸ್ತೆ ಮಾರ್ಗವಾಗಿ ಕಾರಿನಲ್ಲಿ ಸಚಿವ ಕಿರಣ್‌ ರಿಜಿಜು, ಇತರರು ಸಂಚರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್‌ ಮಾಡಿದ್ದು ಅಪಘಾತದ ವಿಡಿಯೋ ಹಂಚಿಕೊಂಡಿದೆ.

ಅಪಘಾತ ಸಂಭವಿಸಿದ ಬಳಿಕ ಸಚಿವ ಕಿರಣ್ ರಿಜಿಜು ಅವರಿದ್ದ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಿಂದ ಅವರನ್ನು ಹೊರಗೆ ಕರೆತರಲು ಭದ್ರತಾ ಸಿಬ್ಬಂದಿ ಧಾವಿಸುವುದು ವಿಡಿಯೋದಲ್ಲಿ ಕಾಣಿಸಿದೆ.

ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ಹಾಜರಿದ್ದು, ಸಚಿವರನ್ನು ಕಾರಿನಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ.

ಎಲ್ಲರೂ ಸುರಕ್ಷಿತರಾಗಿದ್ದಾರೆ. ಸಣ್ಣ ಅಪಘಾತವಾಗಿದ್ದು, ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿ) ಮುಖೇಶ್ ಸಿಂಗ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? 11 ಬುಡಕಟ್ಟು ಮಹಿಳೆಯರ ಅತ್ಯಾಚಾರ ಪ್ರಕರಣ; 21 ಆಂಧ್ರ ಪೊಲೀಸರ ಖುಲಾಸೆ

ಇದಕ್ಕೂ ಮುನ್ನ ಕಿರಣ್‌ ರಿಜಿಜು ಅವರು ಜಮ್ಮು-ಕಾಶ್ಮೀರ ಮೂಲಕ ಉಧಮ್‌ಪುರಕ್ಕೆ ಕಾನೂನು ಸೇವೆಗಳ ಶಿಬಿರಕ್ಕೆ ಪ್ರಯಾಣಿಸಿದ್ದರು. ಈ ಮಾರ್ಗದ ಹೆದ್ದಾರಿಯ ವಿಡಿಯೋವನ್ನು ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡು ಪ್ರಯಾಣದ ಖುಷಿಯನ್ನು ವ್ಯಕ್ತಪಡಿಸಿದ್ದರು.

“ಕಾನೂನು ಸೇವೆಗಳ ಶಿಬಿರದಲ್ಲಿ ಹಾಜರಾಗಲು ಜಮ್ಮು ಮತ್ತು ಕಾಶ್ಮೀರದಲ್ಲಿ ಜಮ್ಮುವಿನಿಂದ ಉಧಮ್‌ಪುರಕ್ಕೆ ತೆರಳುತ್ತಿದ್ದೇನೆ. ನ್ಯಾಯಾಧೀಶರು ಹಾಗೂ ಎನ್ಎಎಲ್ಎಸ್ಎ ತಂಡದ ಜತೆಗೆ ಕೇಂದ್ರ ಸರ್ಕಾರಿ ಯೋಜನೆಗಳ ಅನೇಕ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ” ಎಂದು ವಿಡಿಯೋದಲ್ಲಿ ಹೇಳಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2022ರ ವಿಶ್ವ ಡಿಜಿಟಲ್ ಪಾವತಿ ವಹಿವಾಟಿನಲ್ಲಿ ಭಾರತಕ್ಕೆ ಮೊದಲ ಸ್ಥಾನ | ಕೇಂದ್ರದ ದತ್ತಾಂಶ

ಭಾರತ 2022ರಲ್ಲಿ 8.95 ಲಕ್ಷ ಡಿಜಿಟಲ್ ಪಾವತಿ ವಹಿವಾಟು ನಡೆಸಿದೆ 9 ವರ್ಷದಲ್ಲಿ...

3 ತಿಂಗಳೊಳಗೆ ಎಲ್ಲ ಮಹಿಳೆಯರಿಗೂ ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ವಿತರಣೆ : ರಾಮಲಿಂಗಾರೆಡ್ಡಿ

ಭಾನುವಾರ ಅಧಿಕೃತ ಚಾಲನೆ ಪಡೆದುಕೊಳ್ಳಲಿರುವ ಶಕ್ತಿ ಯೋಜನೆ ನಾಳೆ ಸಾಂಕೇತಿಕವಾಗಿ ಕೆಲವರಿಗೆ ಸ್ಮಾರ್ಟ್...

ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಗೊಂದಲಗಳಿಲ್ಲ: ಸಿಎಂ ಸಿದ್ದರಾಮಯ್ಯ

ಸರ್ಕಾರದ ಘೋಷಿತ ಗ್ಯಾರಂಟಿಗಳು ಹಂತಹಂತವಾಗಿ ಜಾರಿಯಾಗಲಿವೆ ಪ್ರಣಾಳಿಕೆಯ ಘೋಷಣೆಯಂತೆ ನಾವು ಗ್ಯಾರಂಟಿ ಅನುಷ್ಠಾನ...

ಮುಂದಿನ 24 ಗಂಟೆಗಳಲ್ಲಿ ತೀವ್ರಗೊಳ್ಳಲಿರುವ ಬಿಪೊರ್‌ಜಾಯ್‌ | 3 ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ

ಬಿಪೊರ್‌ಜಾಯ್‌ ಚಂಡಮಾರುತ ಹಿನ್ನೆಲೆ ಕೇರಳದ 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಬಂಗಾಳಿ ಭಾಷೆಯಲ್ಲಿ...