ರಕ್ಬರ್‌ ಖಾನ್‌ ಹತ್ಯೆ ಪ್ರಕರಣ | ನಾಲ್ವರು ದೋಷಿ ಎಂದು ಅಲ್ವಾರ್‌ ನ್ಯಾಯಾಲಯ ತೀರ್ಪು

Date:

  • ರಕ್ಬರ್ ಖಾನ್‌ ಪ್ರಕರಣದಲ್ಲಿ ನಾಲ್ವರಿಗೆ 7 ವರ್ಷ ಜೈಲು ಶಿಕ್ಷೆ
  • ಸಾಕ್ಷ್ಯಾಧಾರಗಳ ಕೊರತೆಯಿಂದ ನವಲ್‌ ಕಿಶೋರ್ ಖುಲಾಸೆ

ರಕ್ಬರ್‌ ಖಾನ್‌ ಹತ್ಯೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ದೋಷಿ ಎಂದು ರಾಜಸ್ಥಾನದ ಅಲ್ವಾರ್‌ ನ್ಯಾಯಾಲಯ ಗುರುವಾರ (ಮೇ 25) ತೀರ್ಪು ನೀಡಿದೆ.

ಹತ್ಯೆ ಪ್ರಕರಣದಲ್ಲಿ ದೋಷಿಗಳಾದ ನಾಲ್ವರಿಗೆ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದಲ್ಲಿ ಒಬ್ಬ ಆರೋಪಿಯ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆ ಆತನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ನರೇಶ್‌, ವಿಜಯ್‌, ಪರಂಜೀತ್‌ ಹಾಗೂ ಧರ್ಮೇಂದ್ರ ಎಂಬ ಆರೋಪಿಗಳನ್ನು ರಕ್ಬರ್ ಖಾನ್‌ ಹತ್ಯೆ ಪ್ರಕರಣದಲ್ಲಿ ದೋಷಿಗಳೆಂದು ನ್ಯಾಯಾಲಯ ತನ್ನ ಆದೇಶದಲ್ಲಿ ಪ್ರಕಟಿಸಿದೆ.

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸುನೀಲ್‌ ಕುಮಾರ್ ಗೋಯಲ್‌ ಅವರು ಪ್ರಕರಣದ ವಿಚಾರಣೆ ನಡೆಸಿದರು.

ಪ್ರಕರಣದಲ್ಲಿ ನವಲ್‌ ಕಿಶೋರ್ ಶರ್ಮಾ ಎಂಬ ಆರೋಪಿ ವಿರುದ್ಧ ಸಾಕ್ಷ್ಯಾಧಾರಗಳು ದೊರೆಯಲಿಲ್ಲ. ಈ ಹಿನ್ನೆಲೆ ಆತನನ್ನು ಖುಲಾಸೆಗೊಳಿಸಲಾಯಿತು. ಈತ ವಿಶ್ವ ಹಿಂದೂ ಪರಿಷತ್‌ನ ಸದಸ್ಯನಾಗಿದ್ದಾನೆ.

2018ರ ಜುಲೈ 20 ರಂದು ಹರಿಯಾಣ ನಿವಾಸಿ ರಕ್ಬರ್ ತಮ್ಮ ಸ್ನೇಹಿತ ಅಸ್ಲಾಂ ಅವರೊಡನೆ ಅಲ್ವಾರ್‌ನ ಲಾಲವಾಂಡಿ ಬಳಿಯ ಅರಣ್ಯ ಪ್ರದೇಶದ ಮೂಲಕ ಎರಡು ಹಸುಗಳನ್ನು ಹಿಡಿದು ಸಾಗುತ್ತಿದ್ದಾಗ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತ್ತು.

ರಕ್ಬರ್ ಖಾನ್‌ ಹಾಗೂ ಅವರ ಸ್ನೇಹಿತ ದನ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗುಂಪು ಹಲ್ಲೆ ನಡೆಸಿತ್ತು. ಅಸ್ಲಾಂ ಗುಂಪಿನಿಂದ ತಪ್ಪಿಸಿಕೊಂಡರು. ರಕ್ಬರ್‌ ಅವರಿಗೆ ಗಂಭೀರ ಗಾಯಗಳಾಗಿದ್ದವು.

ದನ ಕಳ್ಳಸಾಗಣೆ ಆರೋಪದಲ್ಲಿ ರಕ್ಬರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ತೀವ್ರ ಗಾಯಗಳಿಂದ ರಕ್ಬರ್‌ ಮೃತಪಟ್ಟಿದ್ದರು.

ಈ ಸುದ್ದಿ ಓದಿದ್ದೀರಾ? ನೂತನ ಸಂಸತ್‌ ಭವನ ಉದ್ಘಾಟನೆ | ಆಹ್ವಾನ ಸ್ವೀಕರಿಸಿದ ಬಿಜೆಡಿ, ವೈಎಸ್‌ಆರ್‌ಸಿಪಿ

ಈ ಹಿಂದೆ ಪೊಲೀಸರು ಪ್ರಕರಣದಲ್ಲಿ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ನಾಲ್ವರನ್ನು ಆರೋಪಿಗಳೆಂದು ಹೆಸರಿಸಿತ್ತು.

ಗುಂಪಿನ ಹಲ್ಲೆಯಿಂದ ರಕ್ಬರ್‌ ಮೈಮೇಲೆ 12 ಕಡೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಭಾರೀ ಪ್ರಮಾಣದ ರಕ್ತ ಸ್ರಾವದಿಂದಲೇ ರಕ್ಬರ್ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ವರದಿ ತಿಳಿಸಿತ್ತು.

ರಕ್ಬರ್‌ ಖಾನ್ ಹತ್ಯೆ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಿಹಾರ್‌ ಜೈಲಿನಲ್ಲಿ ಸಾವಿರ ದಿನ ಕಳೆದ ಉಮರ್‌ ಖಾಲಿದ್‌ : ಪ್ರತಿರೋಧದ ಸಂಕೇತ ಎಂದ ಹೋರಾಟಗಾರರು

ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಹೋರಾಟದ ವೇಳೆ ದೆಹಲಿ ಹಿಂಸಚಾರಕ್ಕೆ ಸಂಚು...

ಚೀನಾವನ್ನು ಬುದ್ಧಿವಂತಿಕೆಯಿಂದ ಎದುರಿಸಬೇಕು; ಬಡಾಯಿ ಕೊಚ್ಚಿಕೊಳ್ಳುವುದರಿಂದಲ್ಲ: ಪ್ರಧಾನಿಗೆ ಖರ್ಗೆ ತರಾಟೆ

ಉತ್ತರಾಖಂಡದ ಗಡಿಯಂತ್ರಣ ರೇಖೆಯ ಉದ್ದಕ್ಕೂ ಚೀನಾದ ಹೊಸ ಮಿಲಿಟರಿ ನಿರ್ಮಾಣಗಳ ವರದಿಗಳ...

ಜಾರ್ಖಂಡ್ | ಧನ್‌ಬಾದ್‌ ಬಳಿ ಅಕ್ರಮ ಕಲ್ಲಿದ್ದಲು ಗಣಿ ಕುಸಿದು ಮೂರು ಸಾವು; ಹಲವರು ಸಿಲುಕಿರುವ ಶಂಕೆ

ಧನ್‌ಬಾದ್‌ ಬಳಿಯ ಭೌರಾ ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಘಟನೆ ಭಾರತ್ ಕೋಕಿಂಗ್ ಕೋಲ್...

ಥಾಣೆ ಹತ್ಯೆ ಪ್ರಕರಣ | ಎಚ್‌ಐವಿ ಸೋಂಕಿತನಾಗಿದ್ದ ಹಂತಕ; ಮಹಿಳೆಯದು ಆತ್ಮಹತ್ಯೆ ಎಂದು ಹೇಳಿಕೆ!

ದೆಹಲಿಯ ಶ್ರದ್ದಾ ವಾಕರ್ ಹತ್ಯೆ ಪ್ರಕರಣದ ರೀತಿಯಲ್ಲಿಯೇ ಮಹಾರಾಷ್ಟ್ರದ ಥಾಣೆಯಲ್ಲಿ ಮಹಿಳೆಯೊಬ್ಬರನ್ನು...