ಫೋರಂ ಶಾಪಿಂಗ್‌ ಅವಕಾಶ ನೀಡುವುದಿಲ್ಲ ಎಂದ ಸಿಜೆಐ; ಏನಿದು ಅನುಚಿತ ಅಭ್ಯಾಸ?

Date:

ಸುಪ್ರೀಂ ಕೋರ್ಟ್ ಅನೇಕ ಬಾರಿ ಟೀಕಿಸಿದ್ದರೂ, ಇಂದಿಗೂ ಬಹುತೇಕರು ನ್ಯಾಯಾಲಯಗಳಲ್ಲಿ ಫೋರಂ ಶಾಪಿಂಗ್‌ ಮಾಡಲು ಪ್ರಯತ್ನಿಸುತ್ತಾರೆ. ಏನಿದು ಫೋರಂ ಶಾಪಿಂಗ್?

ಇತ್ತೀಚೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಚಂದ್ರಚೂಡ್ ಅವರು ಫೋರಂ ಶಾಪಿಂಗ್‌ ಬಗ್ಗೆ ಉಲ್ಲೇಖಿಸಿ, ಅಂತಹ ಅಭ್ಯಾಸವನ್ನು ಟೀಕಿಸಿದ್ದಾರೆ. “ನಾನು ಫೋರಂ ಶಾಪಿಂಗ್‌ಗೆ ಅವಕಾಶ ಕೊಡುವುದಿಲ್ಲ” ಎಂದು ಅವರು ಮೇ 19ರಂದು ತಮ್ಮ ಮುಂದೆ ವಿಚಾರಣೆಗೆ ಬಂದ ಅರ್ಜಿದಾರರಿಗೆ ಹೇಳಿದ್ದರು. ಏನಿದು ಫೋರಂ ಶಾಪಿಂಗ್?

ಅರ್ಜಿದಾರನು ಸಿಜೆಐ ಮುಂದೆ ವಿಚಾರಣೆಗಾಗಿ ಪ್ರಸ್ತಾಪಿಸಿದ ಪ್ರಕರಣವನ್ನು ಒಂದು ದಿನದ ಹಿಂದೆ ನ್ಯಾಯಮೂರ್ತಿ ಕೆ ಎಂ ಜೋಸೆಫ್ ಮುಂದೆಯೂ ಉಲ್ಲೇಖಿಸಿದ್ದರು. ಇದೇ ವಿಚಾರವಾಗಿ ಸಿಜೆಐ ಫೋರಂ ಶಾಪಿಂಗ್ ನನಗಿಷ್ಟವಿಲ್ಲ ಎಂದು ಖಡಾಖಂಡಿತವಾಗಿ ಉತ್ತರಿಸಿದ್ದರು.

ನ್ಯಾಯಾಲಯಗಳಲ್ಲಿ ಫೋರಂ ಶಾಪಿಂಗ್ ಅಭ್ಯಾಸ

ಅರ್ಜಿದಾರರು ಅಥವಾ ವಕೀಲರು ತಮ್ಮ ಪರವಾಗಿ ತೀರ್ಪು ಬರುವ ನಿರೀಕ್ಷೆಯಲ್ಲಿ ಉದ್ದೇಶಪೂರ್ವಕವಾಗಿ ತಮ್ಮ ಪ್ರಕರಣವನ್ನು ನಿರ್ದಿಷ್ಟ ನ್ಯಾಯಾಧೀಶರು ಅಥವಾ ನ್ಯಾಯಪೀಠದ ಮುಂದೆ ವಿಚಾರಣೆಗೆ ತರುವುದನ್ನೇ ನ್ಯಾಯಾಲಯದ ಭಾಷೆಯಲ್ಲಿ ‘ಫೋರಂ ಶಾಪಿಂಗ್’ ಎಂದು ಹೇಳಲಾಗುತ್ತದೆ.

ತಮ್ಮ ಅರ್ಜಿ ಹಾಕುವ ಕಾರ್ಯಯೋಜನೆಯಲ್ಲಿ ವಕೀಲರು ಯಾವ ವೇದಿಕೆಯಲ್ಲಿ ಪ್ರಕರಣ ಇಡಬೇಕು ಎಂದು ಯೋಜಿಸುತ್ತಾರೆ. ಉದಾಹರಣೆಗೆ, ಕೆಲವರು ನೇರವಾಗಿ ಹೈಕೋರ್ಟ್‌ ಬದಲಾಗಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ತಮ್ಮ ಪ್ರಕರಣ ಇಟ್ಟು ಪ್ರಚಾರ ಪಡೆಯುತ್ತಾರೆ. ಆದರೆ, ಹಿನ್ನೆಲೆಯಲ್ಲಿ ನಿರ್ದಿಷ್ಟ ನ್ಯಾಯಾಧೀಶರ ಮುಂದೆ ತಮ್ಮ ಪ್ರಕರಣ ಹೋಗದಂತೆ ಅವರು ತಡೆಯುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರತಿವಾದಿಗೆ ತಾರತಮ್ಯವಾಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ನ್ಯಾಯಾಲಯಗಳಲ್ಲಿ ಪ್ರಕರಣಗಳ ಹೊರೆ ಅಧಿಕವಾಗುವುದು, ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಿದಂತೆಯೂ ಆಗುತ್ತದೆ.

ಇದಕ್ಕೆ ಮೊದಲು ಅಮೆರಿಕ ಮತ್ತು  ಬ್ರಿಟನ್‌ನಂತಹ ನ್ಯಾಯಾಲಯಗಳೂ ಫೋರಂ ಶಾಪಿಂಗ್ ಅಭ್ಯಾಸದ ಬಗ್ಗೆ ಟೀಕಿಸಿವೆ. ಆದರೆ, ಬಹುತೇಕ ದೇಶಗಳ ನ್ಯಾಯಾಲಯಗಳು ಪ್ರಕರಣಗಳು ಬಂದಾಗ ‘ನ್ಯಾಯಾಲಯದ ವ್ಯಾಪ್ತಿ’ಯನ್ನು ಮುಂದಿಟ್ಟು ಸ್ವೀಕರಿಸದೆ ಇರುವ ಮೂಲಕ ಫೋರಂ ಶಾಪಿಂಗ್ ತಡೆಯುತ್ತವೆ. ಉನ್ನತ ನ್ಯಾಯಾಲಯಗಳು ಪ್ರಕರಣವನ್ನು ಸೂಕ್ತ ನ್ಯಾಯಪೀಠಕ್ಕೆ ತಳ್ಳುವ ಮೂಲಕ ಫೋರಂ ಶಾಪಿಂಗ್ ಪ್ರಯತ್ನಕ್ಕೆ ತಡೆಯೊಡ್ಡುತ್ತಾರೆ.

ಫೋರಂ ಶಾಪಿಂಗ್ ಬಗ್ಗೆ ಸುಪ್ರೀಂ ಕೋರ್ಟ್ ಅಭಿಪ್ರಾಯವೇನು?

ಕಳೆದ ವರ್ಷ ಮಾರ್ಚ್ 22ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರು ‘ವಿಜಯ ಕುಮಾರ್ ಘೈ ವರ್ಸಸ್ ಪಶ್ಚಿಮ ಬಂಗಾಳ ಸರ್ಕಾರ’ ಪ್ರಕರಣದಲ್ಲಿ ಫೋರಂ ಶಾಪಿಂಗ್ ಅನ್ನು, “ಕಾನೂನಿನಲ್ಲಿ ಯಾವುದೇ ಅನುಮತಿ ಮತ್ತು ಪರಮಾಧಿಕಾರಿ ಹೊಂದಿರದ ನ್ಯಾಯಾಲಯಗಳಿಗೆ ಅಪಖ್ಯಾತಿ ತರುವ ಅಭ್ಯಾಸ” ಎಂದು ಜರೆದಿದೆ.

ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಕೇಜ್ರೀವಾಲ್ ಸರ್ಕಾರದ ವಿರುದ್ಧ ಮೋದಿ ಸೇಡಿನ ಕ್ರಮ

ಅರ್ಜಿದಾರರೊಬ್ಬರು ದೆಹಲಿಯಲ್ಲಿ ಎರಡು ಮತ್ತು ಕೋಲ್ಕತ್ತಾದಲ್ಲಿ ಒಂದು ಸೇರಿ ಒಟ್ಟು ಮೂರು ಅರ್ಜಿಗಳನ್ನು ಹಾಕಿದ್ದರು. ಇಂತಹ ಅಭ್ಯಾಸ ಪ್ರತಿವಾದಿಗಳನ್ನು ಬೆದರಿಸಿ ಹಣ ಖರ್ಚು ಮಾಡಿಸುವ ಪ್ರಯತ್ನ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಮಾರ್ಚ್ 28ರಂದು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್‌ನಲ್ಲಿ ‘ಖೇರ್ ಉನ್ ನಿಸಾ ಮತ್ತು ಇತರರು ವರ್ಸಸ್ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಮತ್ತು ಇತರರು’ ಪ್ರಕರಣದಲ್ಲೂ ನ್ಯಾಯಾಲಯ ಫೋರಂ ಶಾಪಿಂಗ್ ಉಲ್ಲೇಖಿಸಿ ಖಂಡಿಸಿತ್ತು. ನ್ಯಾಯಾಲಯದ ವಿವಿಧ ಶಾಖೆಗಳಲ್ಲಿ ವಿಭಿನ್ನ ಅರ್ಜಿಗಳನ್ನು ಸಲ್ಲಿಸಿರುವುದನ್ನು ಟೀಕಿಸಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಲಸೋರ್ ರೈಲು ಅವಘಡ | ಗಾಯಾಳು ಕನ್ನಡಿಗರ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದಲ್ಲಿ ಶುಕ್ರವಾರ ಸಂಭಿವಿಸಿದ  ಭೀಕರ...

ಕಡು ಬಡತನದಲ್ಲಿಯೂ 10ನೇ ತರಗತಿ ಪಾಸು ಮಾಡಿದ ಅಮ್ಮ-ಮಗ

ಮಾಂಜ್ರಿಯಲ್ಲಿನ ಬಿಸ್ಲೇರಿ ಬಾಟಲ್ ವಾಟರ್ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮೋನಿಕಾ 'ನನ್ನ...

ರೈಲುಗಳ ಸುರಕ್ಷಿತ ಯಾತ್ರೆಗೆ ʼಕವಚʼವಿಲ್ಲ! 300 ಪ್ರಯಾಣಿಕರ ಸಾವಿಗೆ ಯಾರು ಹೊಣೆ?

ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದಲ್ಲಿ ಶುಕ್ರವಾರ ಸಂಭವಿಸಿದ  ಭೀಕರ...

ಕುಜ ದೋಷ: ಅತ್ಯಾಚಾರ ಸಂತ್ರಸ್ತೆಯ ಜಾತಕ ಪರಿಶೀಲನೆಗೆ ಸೂಚಿಸಿದ ಅಲಹಾಬಾದ್ ಹೈಕೋರ್ಟ್‌ಗೆ ಸುಪ್ರೀಂ ತಡೆ

ಅತ್ಯಾಚಾರ ಸಂತ್ರಸ್ತೆಯ ಕುಜ ದೋಷ ಅಧ್ಯಯನ ಮಾಡಲು ಲಖನೌ ವಿಶ್ವವಿದ್ಯಾನಿಲಯದ ಜ್ಯೋತಿಷ್ಯ...