ಕುಸ್ತಿಪಟುಗಳ ಹೋರಾಟ | ಮೋದಿಗೆ 2 ವರ್ಷದ ಹಿಂದೆಯೇ ಗೊತ್ತಿತ್ತು ಬ್ರಿಜ್‌ ಭೂಷಣ್‌ ಹಕೀಕತ್ತು

Date:

ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ ಭೂಷಣ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ರೈತ ಮತ್ತು ಜನಪರ ಸಂಘಟನೆಗಳು ಕೂಡ ಹೋರಾಟ ನಿರತ ಕುಸ್ತಿಪಟುಗಳಿಗೆ ಬೆಂಬಲ ಘೋಷಿಸಿವೆ. ಇದೇ ಹೊತ್ತಿನಲ್ಲಿ ಆರೋಪಿ ಬ್ರಿಜ್‌ ಭೂಷಣ್‌ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಪ್ರತಿಗಳು ʼದಿ ಟ್ರಿಬ್ಯೂನ್‌ʼ ಪತ್ರಿಕೆಗೆ ಲಭ್ಯವಾಗಿದ್ದು, ಈ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಎರಡು ವರ್ಷಗಳ ಹಿಂದೆಯೇ ಮಾಹಿತಿ ಇತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಬ್ರಿಜ್‌ ಭೂಷಣ್‌, ತಮಗೆ ಮತ್ತು ತಮ್ಮ ಜೊತೆಗಿರುವ ಮಹಿಳಾ ಕುಸ್ತಿಪಟುಗಳಿಗೆ ಹಲವು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಎರಡು ವರ್ಷಗಳ ಹಿಂದಯೇ

“2021ರಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಗೌರವಿಸುವ ಸಮಾರಂಭವೊಂದರಲ್ಲಿ ಪ್ರಧಾನಿ ಮೋದಿ ಅವರನ್ನು ವ್ಯಕ್ತಿಗತವಾಗಿ ಭೇಟಿಯಾಗಿದ್ದೆ. ಬ್ರಿಜ್‌ ಭೂಷಣ್‌ ಮತ್ತು ಅವರ ಸಹಚರರು ನನಗೆ ಮತ್ತು ನನ್ನ ಜೊತೆಗಿರುವ ಮಹಿಳಾ ಕುಸ್ತಿಪಟುಗಳಿಗೆ ಹಲವು ವರ್ಷಗಳಿಂದ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂಬುದನ್ನು ವಿವರಿಸಿದ್ದೆ. ಆಗ, ಕ್ರೀಡಾ ಸಚಿವಾಲಯ ಈ ವಿಚಾರದ ಬಗ್ಗೆ ಕ್ರಮ ಕೈಗೊಳ್ಳುತ್ತದೆ. ಸದ್ಯದಲ್ಲೇ ನಿಮಗೆ ಸಚಿವಾಲಯದ ಕಡೆಯಿಂದ ಕರೆ ಬರುತ್ತದೆ ಮೋದಿ ಭರವಸೆ ನೀಡಿದ್ದರು. ಆತ್ಮಹತ್ಯೆಯ ಯೋಚನೆಯಲ್ಲಿದ್ದ ನನಗೆ ಅವರ ಭರವಸೆಯ ಮಾತುಗಳು ನೆರವಾದವು. ಸ್ವಲ್ಪ ದಿನಗಳ ಮಟ್ಟಿಗೆ ಕಿರುಕುಳ ಕೂಡ ಕಡಿಮೆಯಾಗಿತ್ತು. ಆದರೆ, ಕೆಲವೇ ದಿನಕ್ಕೆ ಬ್ರಿಜ್‌ ಭೂಷಣ್‌ ಮತ್ತೆ ಸಹಚರರಿಂದ ಮತ್ತೆ ಕಿರುಕುಳ ಶುರುವಾಯ್ತು” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೋದಿ ಅವರಿಗೆ ಎರಡು ವರ್ಷಗಳ ಹಿಂದೆಯೇ ಈ ವಿಚಾರ ಗೊತ್ತಿದ್ದರೂ ಗಂಭೀರ ಆರೋಪ ಎದುರಿಸುತ್ತಿರುವ ಬ್ರಿಜ್‌ ಭೂಷಣ್‌ ಅವರ ಮೇಲೆ ಕ್ರಮ ಕೈಗೊಳ್ಳದೇ, ರಕ್ಷಿಸುತ್ತಿರುವುದು ಯಾಕೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ.

ಪೋಟೋ ಕ್ಲಿಕ್ಕಿಸಿಕೊಳ್ಳುವ ನೆಪದಲ್ಲಿ ಬ್ರಿಜ್‌ ಭೂಷಣ್‌ ನನ್ನ ಪೃಷ್ಠ ಮತ್ತು ಭುಜವನ್ನು ಬಲವಂತವಾಗಿ ಹಿಡಿದಿದ್ದರು ಎಂದು ಓರ್ವ ಕುಸ್ತಿ ಪಟು ಆರೋಪಿಸಿದ್ದಾರೆ. ಒಬ್ಬಳೆ ಕುಸ್ತಿ ಅಭ್ಯಾಸ ಮಾಡುತ್ತಿದ್ದಾಗ ನನ್ನ ಎದೆ ಬಡಿತ ಪರೀಕ್ಷಿಸುವುದಾಗಿ ಎದೆ ಮತ್ತು ಹೊಟ್ಟೆಯ ಭಾಗವನ್ನು ಸ್ಪರ್ಶಿಸಿ, ಬ್ರಿಜ್‌ ಭೂಷಣ್‌ ಅನುಚಿತವಾಗಿ ವರ್ತಿಸಿದರು ಎಂದು ಮತ್ತೋರ್ವ ಕುಸ್ತಿಪಟು ತಿಳಿಸಿದ್ದಾರೆ. ಲೈಂಗಿಕವಾಗಿ ಸಹಕರಿಸಿದೆ ಕುಸ್ತಿ ಆಡಲು ಬೇಕಾಗುವ ಪೌಷ್ಟಿಕಾಂಶಗಳನ್ನು ಕೊಡಿಸುವುದಾಗಿ ಆಮಿಷವೊಡ್ಡಿದ್ದರು ಎಂದು ಇನ್ನೋರ್ವ ಕುಸ್ತಿಪಟು ಆರೋಪಿಸಿದ್ದಾರೆ.

ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಸಂದರ್ಭದಲ್ಲಿ ಅಭಿನಂದನೆ ತಿಳಿಸಲು ನನ್ನನ್ನು ಅವರ ಕೊಠಡಿಗೆ ಆಹ್ವಾನಿಸಿದ್ದ ಬ್ರಿಜ್‌ ಭೂಷಣ್‌, ನನ್ನ ಬಳಿ ಫೋನ್‌ ಇಲ್ಲದ ಕಾರಣ ಪೋಷಕರ ಜೊತೆಗೆ ಮಾತನಾಡಲು ಕರೆ ಮಾಡಿಕೊಟ್ಟಿದ್ದರು. ಮನೆಯವರ ಜೊತೆಗೆ ಮಾತನಾಡಿಯಾದ ಬಳಿಕ ನನ್ನನ್ನು ತಮ್ಮ ಹಾಸಿಗೆಯ ಬಳಿ ಕರೆದು ತಬ್ಬಿಕೊಳ್ಳಲು ಯತ್ನಿಸಿದ್ದರು ಎಂದು ಉಲ್ಲೇಖಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಒಡಿಶಾ ರೈಲು ದುರಂತ : ಘಟನಾ ಸ್ಥಳದ ಪಕ್ಕದಲ್ಲಿರುವುದು ಮಸೀದಿಯಲ್ಲ, ಮಂದಿರ

ಕುಸ್ತಿಪಟುಗಳ ನಿರಂತರ ಹೋರಾಟದ ಬಳಿಕ ಏಪ್ರಿಲ್‌ 28ರಂದು ದೆಹಲಿ ಪೊಲೀಸರು ಬ್ರಿಜ್‌ ಭೂಷಣ್‌ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. 6 ಮಂದಿ ಮಹಿಳಾ ಕುಸ್ತಿಪಟುಗಳು ಸೇರಿ ಸೆಕ್ಷನ್‌ 354 (ಮಹಿಳೆಯ ಘನತೆಗೆ ಧಕ್ಕೆ), 354A (ಲೈಂಗಿಕ ಕಿರುಕುಳ), 354D (ಮಹಿಳೆಯರನ್ನು ಹಿಂಬಾಲಿಸುವುದು) ಮತ್ತು 34ರ ಅಡಿಯಲ್ಲಿ ಬ್ರಿಜ್‌ ಭೂಷಣ್‌ ವಿರುದ್ಧ ಪ್ರಕರಣ ದಾಖಲಿಸಿದ್ದರು. ಓರ್ವ ಬಾಲಕಿಯ (ಕುಸ್ತಿ ಪಟು) ತಂದೆ ಕೂಡ ಬ್ರಿಜ್‌ ಭೂಷಣ್‌ ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ʼಪೋಕ್ಸೋʼ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾರ್ವಜನಿಕ ಕಾರ್ಯಕ್ರಮದಲ್ಲಿ ಶಾಸಕಿಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ ಬಿಜೆಪಿ ಸಂಸದ ಸತೀಶ್ ಗೌತಮ್

ಉತ್ತರ ಪ್ರದೇಶದ ಬಿಜೆಪಿ ಸಂಸದ ಸತೀಶ್ ಗೌತಮ್ ಸಾರ್ವಜನಿಕ ಕಾರ್ಯಕ್ರಮವೊಂದರ ವೇದಿಕೆಯಲ್ಲೇ...

ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದ ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ...

ಕರ್ನಾಟಕಕ್ಕೆ ನೀಡಲು ‘ಇಲ್ಲ’ ಎಂದಿದ್ದ ‘ಅಕ್ಕಿ’ ಸಿಂಗಾಪುರಕ್ಕೆ ರಫ್ತು ಮಾಡಲು ಹೊರಟ ಕೇಂದ್ರ ಸರ್ಕಾರ!

ಕರ್ನಾಟಕ ಸರ್ಕಾರವು ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡುವಂತೆ ಕೇಳಿದಾಗ 'ನಿಮಗೆ...