ಪೊಲೀಸರು ಹಣೆಗೆ ಕುಂಕುಮ ಇಡುವಂತಿಲ್ಲವೇ? ಗೃಹ ಸಚಿವರ ಸ್ಪಷ್ಟನೆ

Date:

ಕೋಮುವಾದ ತಡೆಗೆ ಪೊಲೀಸ್‌ ಇಲಾಖೆಯಲ್ಲಿ ವಿಭಾಗ ರಚಿಸುತ್ತೇವೆ ಎಂದು ಕಾಂಗ್ರೆಸ್‌ ಸರ್ಕಾರ ಹೇಳಿರುವ ಬೆನ್ನಲ್ಲೇ, ಹಲವಾರು ರೀತಿಯ ಚರ್ಚೆಗಳು ನಡೆಯುತ್ತಿವೆ. ಈ ನಡುವೆ, ಪೊಲೀಸರು ಹಣೆಗೆ ಕುಂಕುಮ ಇಡುವಂತಿಲ್ಲವೆಂದು ಸೂಚಿಸಲಾಗಿದೆ ಎಂಬ ಗಾಳಿಸುದ್ದಿಯೂ ಹರಿದಾಡುತ್ತಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಗೃಹ ಸಚಿವ ಜಿ ಪರಮೇಶ್ವರ್, “ಪೊಲೀಸರು ಹಣೆಗೆ ಕುಂಕುಮ ಇಡಬಾರದೆಂದು ಎಲ್ಲೂ ಹೇಳಿಲ್ಲ. ಬೊಟ್ಟು, ವಿಭೂತಿ ಏನು ಬೇಕಾದರೂ ಇಟ್ಟುಕೊಳ್ಳಬಹುದು” ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರವೇಶ್ವರ್, “ಪೊಲೀಸರು ಹಣೆಗೆ ತಿಲಕ ಇಡಬಾರದೆಂದು ಹೇಳಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ. ಪೊಲೀಸರಿಗೆ ತಮ್ಮದೇ ಆದ ನಿಯಮಗಳಿವೆ, ಸಮವಸ್ತ್ರ ಇರುತ್ತದೆ. ಅವುಗಳ ವ್ಯಾಪ್ತಿಯಲ್ಲಿ ಅವರು ಕೆಲಸ ಮಾಡಬೇಕು. ಅನಗತ್ಯವಾಗಿ ಗೊಂದಲ ಸೃಷ್ಟಿಸಬಾರದು” ಎಂದು ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೋಮುವಾದ ತಡೆಯ ಬಗ್ಗೆ ಮಾತನಾಡಿದ ಅವರು, “ಕೋಮುವಾದ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲ ಸಮುದಾಯಗಳಲ್ಲೂ ಕೋಮುವಾದವಿದೆ. ಅದನ್ನು ತಡೆಯಲು ಪೊಲೀಸ್‌ ಇಲಾಖೆಯಲ್ಲಿ ವಿಭಾಗವನ್ನು ರಚಿಸುತ್ತಿದ್ದೇವೆ. ಕೋಮು ಹಿಂಸಾಚಾರಕ್ಕೆ ಯಾರು ಪ್ರಚೋದನೆ ನೀಡುತ್ತಾರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸವನ್ನು ಆ ವಿಭಾಗ ಮಾಡುತ್ತದೆ” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಊರಿಗೆ ಹೊರಟ ಮತದಾರರು; ಸುಲಿಗೆಗಿಳಿದ ಖಾಸಗಿ ಬಸ್‌ಗಳು

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಏ.26ರಂದು ಮತದಾನ...

ಗದಗ | ಮನರೇಗಾ ಕೆಲಸದ ನಂತರ ಕಾರ್ಮಿಕರಿಗೆ ಕಬಡ್ಡಿ, ಖೋಖೋ ಕ್ರೀಡೆ

ಗದಗ ಜಿಲ್ಲೆಯ ಮುಂಡರಗಿ ತಾಲೂಕು ಪಂಚಾಯತಿಯು ವಿಶಿಷ್ಟವಾಗಿ ಮನರೇಗಾ ಯೋಜನೆಗೆ ಸಾಂಸ್ಕೃತಿಕ,...

ವಿಜಯಪುರ | ಬಿಜೆಪಿ ಅಧರ್ಮ ಸಾರುತ್ತದೆ, ಕಾಂಗ್ರೆಸ್ ಧರ್ಮ ಬಿತ್ತುತ್ತಿದೆ: ಶಾಸಕ ಅಶೋಕ್ ಮನಗೂಳಿ

ಇದು ಧರ್ಮ, ಅಧರ್ಮದ ಮದ್ಯ ನಡೆಯುತ್ತಿರುವ ಚುನಾವಣೆ, ಬಿಜೆಪಿ ಅಧರ್ಮವನ್ನು ಸಾರುತ್ತದೆ,...

ವಿಜಯಪುರ | ಕಾಂಗ್ರೆಸ್ ಮಾರುಕಟ್ಟೆ ವ್ಯಾಪಾರಿಗಳ ಪರವಾಗಿದೆ: ಎಂ.ಬಿ ಪಾಟೀಲ

ಕಾಂಗ್ರೆಸ್ ಯಾವತ್ತೂ ಆರ್ಥಿಕತೆ ಮೂಲವಾದ ವ್ಯಾಪಾರ-ವಹಿವಾಟಿನ ಪರವಿದೆ. ನಾವು ವ್ಯಾಪಾರಿಗಳ ಹಿತ...