ಕರ್ನಾಟಕದ ಜಯವನ್ನು ಮಧ್ಯಪ್ರದೇಶದಲ್ಲಿ ಪುನರಾವರ್ತಿಸಲಿದ್ದೇವೆ: ರಾಹುಲ್ ಗಾಂಧಿ

Date:

ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಹಿರಿಯ ನಾಯಕರು ಭಾಗವಹಿಸಿ ಒಗ್ಗಟ್ಟಿನ ಹೋರಾಟದ ಮುನ್ಸೂಚನೆ ನೀಡಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಭಾರಿಸಿ ಅಧಿಕಾರಕ್ಕೇರಿದ ನಂತರ ಕಾಂಗ್ರೆಸ್ ಮಧ್ಯಪ್ರದೇಶದ ಕಡೆಗೆ ಗಮನಹರಿಸಿದೆ. ಮಧ್ಯಪ್ರದೇಶ ಕಾಂಗ್ರೆಸ್ ಹಿರಿಯ ಮುಖಂಡರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚುನಾವಣಾ ಪೂರ್ವ ಯೋಜನೆಗಳನ್ನು ಚರ್ಚಿಸಿದ್ದಾರೆ.

“ದೀರ್ಘ ಚರ್ಚೆ ನಡೆಸಿದ್ದೇವೆ. ನಮ್ಮ ಆಂತರಿಕ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ 136 ಸ್ಥಾನಗಳನ್ನು ಪಡೆಯುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದೆವು. ಇದೀಗ ಮಧ್ಯಪ್ರದೇಶದಲ್ಲಿ ನಾವು 150 ಸ್ಥಾನಗಳನ್ನು ಗಳಿಸಲಿದ್ದೇವೆ. ಕರ್ನಾಟಕದಲ್ಲಿ ತಂದಿರುವ ಜಯವನ್ನು ಮಧ್ಯಪ್ರದೇಶದಲ್ಲಿ ಪುನರಾವರ್ತಿಸಲಿದ್ದೇವೆ” ಎಂದು ರಾಹುಲ್ ಗಾಂಧಿ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, “ಅವರು ಕನಸು ಕಾಣುತ್ತಿರಲಿ. ಬಿಜೆಪಿ ರಾಜ್ಯದಲ್ಲಿ 200ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಲಿದೆ” ಎಂದು ಹೇಳಿದ್ದಾರೆ.

ಚುನಾವಣಾ ಕಾರ್ಯತಂತ್ರ ಚರ್ಚೆ

ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಧ್ಯಪ್ರದೇಶದ ಬಹುತೇಕ ಎಲ್ಲಾ ಪ್ರಮುಖ ಕಾಂಗ್ರೆಸ್ ನಾಯಕರು ಭಾಗವಹಿಸಿ ಒಗ್ಗಟ್ಟಿನ ಹೋರಾಟದ ಮುನ್ಸೂಚನೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ್ ಮತ್ತು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಪಿ ಅಗರವಾಲ್ ಅವರು ಸಭೆಯಲ್ಲಿ ಭಾಗವಹಿಸಿದ್ದರು.

“ಎಲ್ಲಾ ನಾಯಕರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ರಾಜ್ಯದಲ್ಲಿ ಪಕ್ಷವನ್ನು ಗೆಲುವಿನ ದಡ ಸೇರಿಸಬೇಕು” ಎಂದು ಅಗರ್‌ವಾಲ್ ಸಭೆಯ ನಂತರ ಹೇಳಿದರು.

“ಕಾರ್ಯತಂತ್ರ ಮತ್ತು ಪಕ್ಷದ ಚುನಾವಣೆಯಲ್ಲಿ ಎತ್ತಬೇಕಾಗಿರುವ ವಿಷಯಗಳ ಬಗ್ಗೆ ನಾವೆಲ್ಲರೂ ಚರ್ಚಿಸಿದ್ದೇವೆ. ಎಲ್ಲರೂ ಒಗ್ಗಟ್ಟಿನಲ್ಲಿ ಚುನಾವಣೆ ಎದುರಿಸಬೇಕು ಎನ್ನುವ ಅಭಿಪ್ರಾಯ ಹೊಂದಿದ್ದೇವೆ. ನಾಲ್ಕು ತಿಂಗಳು ಬಾಕಿ ಇರುವಾಗ ಸಭೆಯಲ್ಲಿದ್ದ ಎಲ್ಲ ಹಿರಿಯ ನಾಯಕರಿಗೆ ಅತಿ ಅಗತ್ಯದ ಸಭೆಯಾಗಿತ್ತು” ಎಂದು ಕಮಲ್‌ನಾಥ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಬಡವರ ಗ್ಯಾರಂಟಿ ಮತ್ತು ಉಳ್ಳವರ-ಉಂಡವರ ವಿಕೃತಿ

ಮಧ್ಯಪ್ರದೇಶದಲ್ಲೂ ಚುನಾವಣಾ ಗ್ಯಾರಂಟಿ

ಮಧ್ಯಪ್ರದೇಶದಲ್ಲೂ ಕರ್ನಾಟಕ ಚುನಾವಣೆಯ ರೀತಿಯಲ್ಲಿ ಗ್ಯಾರಂಟಿಗಳನ್ನು ನೀಡುವ ಸಾಧ್ಯತೆಯನ್ನು ತಿಳಿಸಿದ ಅವರು, “ಈಗಾಗಲೇ ‘ನಾರಿ ಸಮ್ಮಾನ್’ ಯೋಜನೆಯನ್ನು ಮಧ್ಯಪ್ರದೇಶದಲ್ಲಿ ಒಂದು ವರ್ಷದ ಆಡಳಿತದಲ್ಲೇ ಕಾಂಗ್ರೆಸ್ ತಂದಿತ್ತು. ಕೆಲವು ಭರವಸೆ ಈಡೇರಿಸಿದ್ದೇವೆ. ಕೆಲವನ್ನು ಭವಿಷ್ಯದಲ್ಲಿ ಘೋಷಿಸುತ್ತೇವೆ. ಎಲ್ಲವನ್ನೂ ಒಮ್ಮೆಗೇ ತಿಳಿಸಲು ಸಾಧ್ಯವಿಲ್ಲ” ಎಂದು ವಿವರ ನೀಡಿದರು.

ಕರ್ನಾಟಕದ ಚುನಾವಣೆಯ ನಂತರ ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಮರಳಲು ಪ್ರಯತ್ನಿಸುತ್ತಿದೆ. ರಾಜ್ಯದ 230 ಕ್ಷೇತ್ರಗಳಿಗೆ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ. ಜ್ಯೋತಿರಾದಿತ್ಯ ಸಿಂಧಿಯಾ ಬಂಡಾಯವೆದ್ದು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿ ಬಿಜೆಪಿಗೆ ಹೋದ ನಂತರ ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮಧ್ಯಪ್ರದೇಶದಲ್ಲಿ ಬಹುಮತಕ್ಕೆ ಎರಡೇ ಸ್ಥಾನಗಳು ಕಡಿಮೆ, ಅಂದರೆ 114 ಸ್ಥಾನಗಳನ್ನು, ಗೆದ್ದಿತ್ತು. ಬಿಜೆಪಿ 109 ಸ್ಥಾನಗಳನ್ನು ಗಳಿಸಿತ್ತು. ಸ್ವತಂತ್ರ ಅಭ್ಯರ್ಥಿಗಳು, ಬಿಎಸ್‌ಪಿ, ಎಸ್‌ಪಿ ತಲಾ 4, 2 ಹಾಗೂ 1 ಸ್ಥಾನಗಳನ್ನು ಗೆದ್ದಿದ್ದವು. ಇತರೆ ಸ್ಥಾನಗಳನ್ನು ಬಳಸಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದರೆ, ಕೆಲವೇ ತಿಂಗಳಲ್ಲಿ ಜ್ಯೋತಿರಾದಿತ್ಯ ಸಿಂಧಿಯಾರ ಬಂಡಾಯದ ಲಾಭ ಪಡೆದ ಬಿಜೆಪಿ ಅಪರೇಶನ್ ಕಮಲದ ಮೂಲಕ ಕಾಂಗ್ರೆಸ್ ಶಾಸಕರನ್ನು ತೆಕ್ಕೆಗೆ ಹಾಕಿಕೊಂಡು ಅಧಿಕಾರಕ್ಕೇರಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಟುಕ, ಕಟಿಕ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ಸಿಎಂಗೆ ಮನವಿ

ರಾಜ್ಯ ಕಟಿಕ ಸಮಾಜದ ನಿಯೋಗವು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ...

ಅರಣ್ಯ ಇಲಾಖೆಯ 50 ಅಧಿಕಾರಿ ಮತ್ತಿ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ವಿತರಣೆ

ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ನಡೆಯುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನೀಡುವ...

ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಆದೇಶಿಸಿದ ಕಾವೇರಿ ಪ್ರಾಧಿಕಾರ

ತಮಿಳುನಾಡಿಗೆ ಅಕ್ಟೋಬರ್ 15ರವರೆಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು...

ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬರುತ್ತಿದೆ: ಬೊಮ್ಮಾಯಿ ಕಿಡಿ

ಪ್ರಾಮಾಣಿಕವಾಗಿ ಕಾನೂನು ಹೋರಾಟ ಮಾಡಲಿ ರಾಜ್ಯದ ವಿರುದ್ದ ಆದೇಶ ಬರದಂತೆ ನೋಡಿಕೊಳ್ಳಲಿ ಕಾವೇರಿ...