ರಾಹುಲ್‌ ಗಾಂಧಿ ಅನರ್ಹತೆಗೊಳಿಸಿ ಸ್ವತಃ ಗೋಲು ಹೊಡೆದುಕೊಂಡ ಬಿಜೆಪಿ; ಶಶಿ ತರೂರ್

Date:

  • ರಾಹುಲ್‌ ಗಾಂಧಿ ಅನರ್ಹಗೊಳಿಸಿದ ಲೋಕಸಭೆ ಕಾರ್ಯಾಲಯ
  • 2019ರ ಪ್ರಕರಣದಲ್ಲಿ ರಾಹುಲ್‌ ತಪ್ಪಿತಸ್ಥ ಎಂದ ಸೂರತ್‌ ಕೋರ್ಟ್‌

ಲೋಕಸಭೆ ಸದಸ್ಯತ್ವದಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಅನರ್ಹತೆ ಬಗ್ಗೆ ಹಿರಿಯ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಕಿಡಿಕಾರಿದ್ದಾರೆ.

ರಾಹುಲ್‌ ಗಾಂಧಿ ಅವರ ಅನರ್ಹತೆ ವಿಚಾರ ಬಿಜೆಪಿಯು ಸ್ವತಃ ತಾನೇ ಗೋಲು ಹೊಡೆದುಕೊಂಡಂತಿದೆ ಎಂದು ಶಶಿ ತರೂರ್‌ ಅಣಕವಾಡಿದ್ದಾರೆ.

ತಿರುವನಂತಪುರದಲ್ಲಿ ಸುದ್ದಿಸಂಸ್ಥೆ ಜೊತೆ ಮಾತನಾಡಿದ ತರೂರ್‌, “ಲೋಕಸಭೆ ಕಾರ್ಯಾಲಯದ ಕ್ರಮ ಸರಿಯಿಲ್ಲ. ಅಂತಿಮವಾಗಿ ರಾಹುಲ್‌ ಗಾಂಧಿ ಹಾಗೂ ಪ್ರತಿಪಕ್ಷಗಳಿಗೆ ಇದರಿಂದ ಪ್ರಯೋಜನವಾಗಲಿದೆ” ಎಂದು ತಿಳಿಸಿದರು.

“ಇದು ಜಾಗತಿಕವಾಗಿ ಭಾರತದ ಪ್ರಜಾಪ್ರಭುತ್ವವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಲಿದೆ. ಇದರಿಂದ ಬಿಜೆಪಿ ಮೇಲೆ ಕೆಲವು ಅನಪೇಕ್ಷಿತ ಪರಿಣಾಮಗಳು ಉಂಟಾಗಲಿವೆ” ಎಂದು ಶಶಿ ತರೂರ್‌ ಹೇಳಿದರು.

“ಪ್ರತಿಯೊಂದು ರಾಜಧಾನಿಯಲ್ಲೂ ರಾಹುಲ್ ಗಾಂಧಿ ಅವರಿಗೆ ಏನಾಯಿತು ಎಂಬ ಚರ್ಚೆಯ ಸುದ್ದಿ ಹರಿದಾಡುತ್ತಿವೆ. ಅಲ್ಲದೆ ಇದರಿಂದ ಪ್ರತಿಪಕ್ಷಗಳ ನಡುವೆ ಈ ಹಿಂದೆಂದೂ ಕಾಣದಂತ ಒಗ್ಗಟ್ಟು ಸೃಷ್ಟಿಯಾಗಿದೆ” ಎಂದು ಅವರು ಹೇಳಿದರು.

“ತಮ್ಮ ರಾಜ್ಯಗಳಲ್ಲಿ ಕಾಂಗ್ರೆಸ್‌ಅನ್ನು ವಿರೋಧಿಸುವ ಪ್ರಾದೇಶಿಕ ಪಕ್ಷಗಳು ಈಗ ರಾಹುಲ್ ಪರವಾಗಿ ನಿಂತಿವೆ. ಪ್ರಜಾಪ್ರಭುತ್ವದ ಮೇಲಿನ ಈ ದಾಳಿಯನ್ನು ಖಂಡಿಸಿವೆ” ಎಂದು ಶಶಿ ತರೂರ್‌ ಉಲ್ಲೇಖಿಸಿದರು.   

ಮಾನಹಾನಿ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಸೂರತ್ ನ್ಯಾಯಾಲಯದ ತೀರ್ಪನ್ನು ಶಶಿ ತರೂರ್ ಪ್ರಶ್ನಿಸಿದ್ದಾರೆ.

ಇದನ್ನು ಓದಿದ್ದೀರಾ? ಸಂಸತ್ತು ಅಧಿವೇಶನ | ಪ್ರತಿಪಕ್ಷಗಳ ಗದ್ದಲಕ್ಕೆ ಮತ್ತೆ ಲೋಕಸಭೆ, ರಾಜ್ಯಸಭೆ ಕಲಾಪ ಮುಂದೂಡಿಕೆ

“ರಾಹುಲ್‌ ಗಾಂಧಿ ಅವರ ಅನರ್ಹತೆ ಅವಾಸ್ತವಿಕವಾಗಿದೆ. ಸಂವಿಧಾನದ ಪ್ರಕಾರ ಜನಪ್ರತಿನಿಧಿಯೊಬ್ಬರ ಅನರ್ಹತೆಯ ಬಗ್ಗೆ ಭಾರತದ ರಾಷ್ಟ್ರಪತಿಗಳು ತೀರ್ಮಾನಿಸುತ್ತಾರೆ. ನಂತರದಲ್ಲಿ ಆ ಆದೇಶ ಪತ್ರಕ್ಕೆ ಲೋಕಸಭೆ ಕಾರ್ಯದರ್ಶಿ ಸಹಿ ಹಾಕುತ್ತಾರೆ. ಆದರೆ ಇಲ್ಲಿ ರಾಹುಲ್‌ ಅವರ ಅನರ್ಹತೆ ವಿಚಾರವಾಗಿ ರಾಷ್ಟ್ರಪತಿ ಭವನವನ್ನು ಸಂಪರ್ಕಿಸಿರುವ ಯಾವ ಸೂಚನೆಯೂ ಇಲ್ಲ” ತರೂರ್‌ ತಿಳಿಸಿದ್ದಾರೆ.  

“ರಾಹುಲ್‌ ಅವರ ಶಿಕ್ಷೆಯನ್ನು ನ್ಯಾಯಾಲಯ ಅಮಾನತುಗೊಳಿಸಿ, ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗ ರಾಹುಲ್‌ ಅವರನ್ನು ಅನರ್ಹಗೊಳಿಸಲು ಲೋಕಸಭೆ ಕಾರ್ಯದರ್ಶಿ ನಡೆಯಲ್ಲಿನ ಅಸಹಜ ವೇಗ ಕಂಡು ನಾನು ದಿಗ್ಭ್ರಮೆಗೊಂಡಿದ್ದೇನೆ” ಎಂದು ಶಶಿ ತರೂರ್‌ ಕುಟುಕಿದರು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2022ರ ವಿಶ್ವ ಡಿಜಿಟಲ್ ಪಾವತಿ ವಹಿವಾಟಿನಲ್ಲಿ ಭಾರತಕ್ಕೆ ಮೊದಲ ಸ್ಥಾನ | ಕೇಂದ್ರದ ದತ್ತಾಂಶ

ಭಾರತ 2022ರಲ್ಲಿ 8.95 ಲಕ್ಷ ಡಿಜಿಟಲ್ ಪಾವತಿ ವಹಿವಾಟು ನಡೆಸಿದೆ 9 ವರ್ಷದಲ್ಲಿ...

3 ತಿಂಗಳೊಳಗೆ ಎಲ್ಲ ಮಹಿಳೆಯರಿಗೂ ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ವಿತರಣೆ : ರಾಮಲಿಂಗಾರೆಡ್ಡಿ

ಭಾನುವಾರ ಅಧಿಕೃತ ಚಾಲನೆ ಪಡೆದುಕೊಳ್ಳಲಿರುವ ಶಕ್ತಿ ಯೋಜನೆ ನಾಳೆ ಸಾಂಕೇತಿಕವಾಗಿ ಕೆಲವರಿಗೆ ಸ್ಮಾರ್ಟ್...

ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಗೊಂದಲಗಳಿಲ್ಲ: ಸಿಎಂ ಸಿದ್ದರಾಮಯ್ಯ

ಸರ್ಕಾರದ ಘೋಷಿತ ಗ್ಯಾರಂಟಿಗಳು ಹಂತಹಂತವಾಗಿ ಜಾರಿಯಾಗಲಿವೆ ಪ್ರಣಾಳಿಕೆಯ ಘೋಷಣೆಯಂತೆ ನಾವು ಗ್ಯಾರಂಟಿ ಅನುಷ್ಠಾನ...

ಮುಂದಿನ 24 ಗಂಟೆಗಳಲ್ಲಿ ತೀವ್ರಗೊಳ್ಳಲಿರುವ ಬಿಪೊರ್‌ಜಾಯ್‌ | 3 ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ

ಬಿಪೊರ್‌ಜಾಯ್‌ ಚಂಡಮಾರುತ ಹಿನ್ನೆಲೆ ಕೇರಳದ 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಬಂಗಾಳಿ ಭಾಷೆಯಲ್ಲಿ...