‘ಶ್ರೀರಾಮ’ನ ತೊಡೆ ಏರಿ ನಿಂತ ‘ಸಲಗ’; ರಾಜ್ಯಾದ್ಯಂತ ವ್ಯಾಪಕ ಆಕ್ರೋಶ

Date:

  • ರಾಮನ ಹೆಸರೇಳಿ ಮತ ಕೇಳುವ ಬಿಜೆಪಿ ಶಾಸಕನಿಂದ ಉದ್ಧಟತನ
  • ‘ಶ್ರೀರಾಮನವಮಿ’ ದಿನದಂದು ರಾಮನನ್ನೇ ತುಳಿದ ಶರಣು ಸಲಗರ

ಶ್ರೀರಾಮನ ಹೆಸರು ಹೇಳಿಕೊಂಡು ಪ್ರತಿ ಚುನಾವಣೆಯಲ್ಲಿ ಮತ ಕೇಳುವ ಬಿಜೆಪಿ ಶಾಸಕರೊಬ್ಬರು ಶ್ರೀರಾಮ ನವಮಿ ದಿನದಂದೇ ಶ್ರೀರಾಮನನ್ನು ಕಾಲಿನಲ್ಲಿ ತುಳಿದು ಉದ್ಧಟತನ ಮೆರೆದಿರುವ ಘಟನೆ ಬಸವ ಕಲ್ಯಾಣದಲ್ಲಿ ನಡೆದಿದೆ.

ಬೀದರ್ ಜಿಲ್ಲೆ ಬಸವ ಕಲ್ಯಾಣದಲ್ಲಿ ಶ್ರೀರಾಮನವಮಿ ಹಾಗೂ ಶೋಭಾ ಯಾತ್ರೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಚಾಲನೆ ನೀಡಲು ಸ್ಥಳಕ್ಕೆ ಆಗಮಿಸಿದ್ದ ಸ್ಥಳೀಯ ಬಿಜೆಪಿ ಶಾಸಕ ಶರಣು ಸಲಗರ ಶ್ರೀರಾಮ ಮೂರ್ತಿಯ ತೊಡೆಯ ಮೇಲೆ ನಿಂತುಕೊಂಡು ಹೂವಿನ ಹಾರ ಹಾಕಿದ್ದಾರೆ.

ದೇಶಾದ್ಯಂತ ಮರ್ಯಾದಾ ಪುರುಷೋತ್ತಮನೆಂದು ಹೆಸರಾಗಿರುವ ಶ್ರೀರಾಮನಿಗೆ ತಮ್ಮ ಹುಟ್ಟಹಬ್ಬದಂದೇ ಬಿಜೆಪಿಗರೇ ಮರ್ಯಾದೆ ತೆಗೆದಿದ್ದಾರೆ. ಸಾಲದು ಎಂದು ಅದನ್ನು ಸ್ವತಃ ಶರಣು ಸಲಗರ ಅವರೇ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಶ್ರೀರಾಮನ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಶ್ರೀರಾಮನವಮಿ | ಬಂಗಾಳ, ಗುಜರಾತ್‌, ಮಹಾರಾಷ್ಟ್ರದಲ್ಲಿ ಗಲಭೆ

ಬಸವಕಲ್ಯಾಣದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ತಮ್ಮ ಫೇಸ್‌ಬುಕ್‌ನಲ್ಲಿ‌ ಪೋಸ್ಟ್ ಮಾಡಿ ‘ಇದು ಹಿಂದೂ ಸಂಸ್ಕೃತಿನಾ’ ಎಂದು ತರಾಟೆಗೆ ತೆಗೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.

ಸಾರ್ವಜನಿಕರು ಹಾಗೂ ಶ್ರೀರಾಮನ ಭಕ್ತರು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಲ್ಲದೇ, ಸಾಮಾಜಿಕ ಜಾಲಾತಾಣದಲ್ಲಿ ಶಾಸಕರ ವಿರುದ್ಧ ಕಿರಿ ಕಾರಿದ್ದಾರೆ.

ಪ್ರತಿ ಚುನಾವಣೆಯಲ್ಲಿ ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ ಪಕ್ಷವು ತಮ್ಮದೇ ಶಾಸಕನ ಉದ್ಧಟತನಕ್ಕೆ ಯಾವ ಕ್ರಮ ಕೈಗೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಿಎಸ್ಐ ನೇಮಕಾತಿ ಅಕ್ರಮ: ತನಿಖೆಗೆ ಸಜ್ಜಾದ ಸರ್ಕಾರ

ಬಿಜೆಪಿ ಅಕ್ರಮದ ಬೇಟೆ ಆರಂಭಿಸಿದ ಕಾಂಗ್ರೆಸ್ ಪಿಎಸ್ಐ ನೇಮಕ ಅಕ್ರಮ ತನಿಖೆಗೆ ಸಿದ್ಧತೆ ಪೊಲೀಸ್...

ಗ್ಯಾರಂಟಿ ಜಾರಿಗೆ ಅಭಿವೃದ್ಧಿ ಅನುದಾನಗಳಿಗೆ ಕತ್ತರಿ ಹಾಕಬೇಡಿ : ಮಾಜಿ ಸಿಎಂ ಬೊಮ್ಮಾಯಿ

ಹಿಂದಿನ ಸರ್ಕಾರದ ಜನಪರ ಯೋಜನೆ ಮುಂದುವರೆಸಲು ಸಿಎಂಗೆ ಮನವಿ ಸಿದ್ದರಾಮಯ್ಯಗೆ ಪತ್ರ ಮೂಲಕ...

ಮಳೆಹಾನಿ | ಪರಿಹಾರ ಕ್ರಮ ತ್ವರಿತವಾಗಿ ಕೈಗೊಳ್ಳಲು ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಸೂಚನೆ

67 ಮಂದಿ ಪ್ರಾಣಹಾನಿ ಆಗಿದ್ದು, 60 ಮಂದಿಯ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ 487...

ಕೇಂದ್ರ ಸರ್ಕಾರ ಅಕ್ಕಿ ನೀಡದಿದ್ದರೆ ನಾವೇ ಖರೀದಿಸುತ್ತೇವೆ: ಸಚಿವ ಮುನಿಯಪ್ಪ

ಘೋಷಿತ ಐದೂ ಗ್ಯಾರಂಟಿಗಳನ್ನು ಹಂತಹಂತವಾಗಿ ನೀಡುತ್ತೇವೆ ನಮ್ಮ ಮಾತಿಗೆ ನಾವು ಎಂದಿಗೂ ಬದ್ಧರಾಗಿರುತ್ತೇವೆ...