‘ಜಿ 20 ಶೃಂಗಸಭೆಯ’ ಗಣ್ಯರಿಗೆ ಆಯೋಜಿಸಲಾಗಿದ್ದ ಔತಣಕೂಟಕ್ಕೆ ರಾಷ್ಟ್ರಪತಿ ಭವನದಿಂದ ನೀಡಲಾದ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಉಲ್ಲೇಖಗೊಂಡ ಬಳಿಕ ಉದ್ಭವಗೊಂಡ ದೇಶದ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ, ಸಂಸತ್ ವಿಶೇಷ ಅಧಿವೇಶನದಲ್ಲಿ ಕೇಂದ್ರಕ್ಕೆ ಹಿಂದಿಯಲ್ಲಿ ಕವನ ವಾಚಿಸುವ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಟಾಂಗ್ ನೀಡಿದ್ದಾರೆ.
बदलना है तो अब हालात बदलो
— Congress (@INCIndia) September 18, 2023
ऐसे नाम बदलने से क्या होता है?
देना है तो युवाओं को रोजगार दो
सबको बेरोजगार करके क्या होता है?
दिल को थोड़ा बड़ा करके देखो
लोगों को मारने से क्या होता है?
कुछ कर नहीं सकते तो कुर्सी छोड़ दो
बात-बात पर डराने से क्या होता है?
अपनी हुक्मरानी पर तुम्हें… pic.twitter.com/5V1aGggbfP
ಹಿಂದಿಯಲ್ಲಿ ಕವನ ವಾಚಿಸಿದ ಮಲ್ಲಿಕಾರ್ಜುನ ಖರ್ಗೆ, ಹೆಸರು ಬದಲಾವಣೆಯಲ್ಲದೆ ನಿರುದ್ಯೋಗ ಸಮಸ್ಯೆ, ದೇಶದಲ್ಲಿ ದ್ವೇಷ ಹೆಚ್ಚುತ್ತಿರುವ ಬಗ್ಗೆ, ಪ್ರಧಾನಿ ಮೋದಿಯವರ ಅಧಿಕಾರದ ಲಾಲಸೆ, ಬೆದರಿಕೆ ನೀಡುತ್ತಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಖರ್ಗೆಯವರ ಈ ಕವನಕ್ಕೆ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್‌ಕರ್ ಕೂಡ ಗಮನವಿಟ್ಟು ಕೇಳಿದ್ದು ವಿಶೇಷವಾದರೆ, ವಿಪಕ್ಷಗಳ ಸದಸ್ಯರು, ‘ವಾಹ್, ವಾಹ್’ ಎಂದು ಮೇಜು ಕುಟ್ಟಿ ಮೆಚ್ಚುಗೆ ಸೂಚಿಸಿದರು.
ಸಂಸತ್ತಿನ ವಿಶೇಷ ಅಧಿವೇಶನವು ಹಳೆಯ ಸಂಸತ್ ಕಟ್ಟಡದಲ್ಲಿ ಸೋಮವಾರ ಆರಂಭಗೊಂಡಿದೆ. ನಾಳೆಯಿಂದ(ಸೆ.19) ಹೊಸ ಸಂಸತ್ ಭವನದಲ್ಲಿ ಅಧಿವೇಶನ ಮುಂದುವರಿಯಲಿದೆ. ಸೆ.22ರವರೆಗೆ ವಿಶೇಷ ಅಧಿವೇಶನವು ನಡೆಯಲಿದೆ.
ಮಲ್ಲಿಕಾರ್ಜುನ ಖರ್ಗೆ ವಾಚಿಸಿದ ಹಿಂದಿ ಕವನದ ಕನ್ನಡಾನುವಾದ ಹೀಗಿದೆ
ಬದಲಾಯಿಸುವುದಾದರೆ ಈಗಿನ ಪರಿಸ್ಥಿತಿಯನ್ನು ಬದಲಾಯಿಸಿ,
ಹೀಗೆ ಹೆಸರು ಬದಲಾಯಿಸುವುದರಿಂದ ಏನು ಪ್ರಯೋಜನ?
ಕೊಡುವುದಾದರೆ ಯುವಕರಿಗೆ ಉದ್ಯೋಗ ಕೊಡಿ
ಎಲ್ಲರನ್ನೂ ನಿರುದ್ಯೋಗಿಗಳನ್ನಾಗಿ ಮಾಡುವುದರಿಂದ ಏನು ಪ್ರಯೋಜನ?
ಹೃದಯವನ್ನು ಸ್ವಲ್ಪ ವಿಶಾಲವಾಗಿಸಿ ನೋಡಿ,
ಜನರನ್ನು ಕೊಲ್ಲುವುದರಿಂದ ಏನು ಪ್ರಯೋಜನ?
ಏನೂ ಮಾಡಲು ಸಾಧ್ಯವಾಗದಿದ್ದರೆ, ಕುರ್ಚಿಯನ್ನು ಬಿಟ್ಟು ಬಿಡಿ,
ಮಾತು- ಮಾತಿಗೆ ಹೆದರುವುದರಿಂದ ಏನು ಪ್ರಯೋಜನ?
ನಿಮ್ಮ ಆಡಳಿತದ ಬಗ್ಗೆ ನಿಮಗೆ ಮಾತ್ರ ಹೆಮ್ಮೆ ಇದೆ,
ಜನರನ್ನು ಹೆದರಿಸಿ- ಬೆದರಿಸುವುದರಿಂದ ಏನು ಪ್ರಯೋಜನ?