ಪಿಎಸ್ಐ ನೇಮಕಾತಿ ಹಗರಣ | ಮತ್ತೋರ್ವ ಪಿಎಸ್ಐ ಬಂಧನ

Date:

  • ತಲೆಮರೆಸಿಕೊಂಡಿದ್ದ ಪಿಎಸ್ಐ ನವೀನ್ ಪ್ರಸಾದ್‌ನನ್ನು ಬಂಧಿಸಿದ ಸಿಐಡಿ ಪೊಲೀಸರು
  • ಹಲವು ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದ ಆರೋಪಿ ಅಧಿಕಾರಿ

ಕಳೆದ ವರ್ಷ ನಡೆದಿದ್ದ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್ಐ) ನೇಮಕಾತಿಯಲ್ಲಿ ಅಕ್ರಮ ಎಸಗಲು ನೆರವಾಗಿದ್ದ ಆರೋಪದ ಮೇಲೆ ಮತ್ತೋರ್ವ ಪೊಲೀಸ್ ಸಬ್ ಇನ್ಸ್ಪೆಕ್ಟರ್‌ನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಆರೋಪಿಯ ಹೆಸರು ಕೇಳಿಬರುತ್ತಿದ್ದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ನವೀನ್ ಪ್ರಸಾದ್ ಹಲವು ತಿಂಗಳಿನಿಂದ ನಾಪತ್ತೆಯಾಗಿದ್ದರು.

ಈ ಸುದ್ದಿ ಓದಿದ್ದೀರಾ?: ಉತ್ತರ ಕನ್ನಡ | ಪಿಎಸ್ಐ ಹಗರಣದ ಆರೋಪಿ ಆತ್ಮಹತ್ಯೆ

ಇದೇ ಪೊಲೀಸ್‌ ಠಾಣೆಯ ಪಿಎಸ್ಐ ಆಗಿದ್ದ ಹರೀಶ್ ಎಂಬುವವರನ್ನು ಈ ಹಿಂದೆ ಸಿಐಡಿ ಪೊಲೀಸರು ಬಂಧಿಸಿದ್ದರು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ, ‘ಅಕ್ರಮ ಎಸಗಲು ತನ್ನೊಂದಿಗೆ ನವೀನ್‌ ಕೈಜೋಡಿಸಿದ್ದರು. ಹಲವು ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರು’ ಎಂದು ಹೇಳಿದ್ದರು.

ಈ ಸುದ್ದಿ ತಿಳಿಯುತ್ತಿದ್ದಂತೆ ನವೀನ್‌ ಪ್ರಸಾದ್‌ ನಾಪತ್ತೆಯಾಗಿದ್ದರು. ಅವರನ್ನು ಪತ್ತೆ ಹಚ್ಚಲು ಸಿಐಡಿ ಪೊಲೀಸರು ಹಲವು ತಂಡಗಳನ್ನು ರಚಿಸಿತ್ತು. ಇದೀಗ, ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಾಮರಾಜನಗರ | ಫ್ಯಾನ್‌ ಜೊತೆಗೆ ಆಸ್ಪತ್ರೆಗೆ ದಾಖಲಾಗುತ್ತಿರುವ ಗರ್ಭಿಣಿಯರು!

ಆಸ್ಪತ್ರೆಯಲ್ಲಿರುವ ಫ್ಯಾನ್‌ಗಳು ಕೆಟ್ಟು ನಿಂತಿರುವ ಕಾರಣದಿಂದ ಬಿಸಿಲ ತಾಪ ತಾಳಲಾರದೆ ಆಸ್ಪತ್ರೆಗೆ...

ಖಾತೆ ಕ್ಯಾತೆ | ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದರಾ ರಾಮಲಿಂಗಾರೆಡ್ಡಿ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಪೂರ್ತಿ ಭರ್ತಿಯಾಗಿದ್ದು, ಸಿಎಂ, ಡಿಸಿಎಂ...

ಚುನಾವಣೆಯಲ್ಲಿ ಗೆದ್ದು ಮಂತ್ರಿಗಳಾಗಬೇಕಿದ್ದವರು ಸೋಲಿನ ಗಾಯ ಕೆರೆಯುತ್ತಾ ಕೂತಾಗ..

ರಾಜ್ಯದಲ್ಲಿ ಕಾಂಗ್ರೆಸ್ ಅಲೆಯ ನಡುವೆ ಕೂಡ ಶಿವಶಂಕರ ರೆಡ್ಡಿ ಮತ್ತು ರಮೇಶ್‌ಕುಮಾರ್...