ಧಾರವಾಡ | ಕಮ್ಯೂನಿಸ್ಟ್ ಪಕ್ಷವು ಅಧಿಕಾರ ದಾಹದಿಂದ ಚುನಾವಣೆ ಎದುರಿಸುವುದಿಲ್ಲ: ರಾಮಾಂಜನಪ್ಪ ಆಲ್ದಳ್ಳಿ

Date:

  • ಎಸ್‌ಯುಸಿಐ (ಕಮ್ಯೂನಿಸ್ಟ್) ಪಕ್ಷದ 75ನೇ ಸಂಸ್ಥಾಪನಾ ದಿನಚರಣೆ
  • ವೈಚಾರಿಕ, ಸೈದ್ಧಾಂತಿಕ ಹಿನ್ನೆಲೆಯಲ್ಲಿ ಚುನಾವಣೆ ಎದುರಿಸಲು ಕರೆ

ಎಸ್‌ಯುಸಿಐ (ಕಮ್ಯೂನಿಸ್ಟ್) ಪಕ್ಷವು ಅಧಿಕಾರ, ಸಂಪತ್ತಿನ ದಾಹದಿಂದ ಚುನಾವಣೆಯನ್ನು ಎದುರಿಸುವುದಿಲ್ಲ. ಪಕ್ಷದ ವೈಚಾರಿಕತೆ ಹಾಗೂ ಸಿದ್ಧಾಂತವನ್ನು ಜನಸಮುದಾಯದ ಮಧ್ಯೆ ಕೊಂಡೊಯ್ಯುವ ನಿಟ್ಟಿನಲ್ಲಿ ಚುನಾವಣೆಯಲ್ಲಿ ಭಾಗವಹಿಸುತ್ತೇವೆ ಎಂದು ಎಸ್‌ಯುಸಿಐ (ಸಿ) ಪಕ್ಷದ ರಾಜ್ಯ ಕಾರ್ಯಕಾರಿ ಸದಸ್ಯ ಕಾಮ್ರೇಡ್ ರಾಮಾಂಜನಪ್ಪ ಆಲ್ದಳ್ಳಿ ಹೇಳಿದರು.

ಧಾರವಾಡ ಜಿಲ್ಲೆಯ ಮುಗಳಿ ಗ್ರಾಮದಲ್ಲಿ ನಡೆದ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ 75ನೇ ಸಂಸ್ಥಾಪನಾ ದಿನ ಸಮಾರಂಭದಲ್ಲಿ ಅವರು ಮಾತನಾಡಿದರು.

“ಪ್ರಸಕ್ತ ವರ್ಷ ಎಸ್‌ಯುಸಿಐ ಪಕ್ಷದ ಸಂಸ್ಥಾಪಕ ಕಾಮ್ರೇಡ್ ಶಿವದಾಸ್ ಘೋಷ್ ಜನ್ಮ ಶತಾಬ್ಧಿ ವರ್ಷ ಕೂಡ ಆಗಿದೆ. ಜನಹೋರಾಟ, ಸಮಾಜವಾದಿ ಕ್ರಾಂತಿಯಲ್ಲಿ ನಂಬಿಕೆಯಿಟ್ಟ ನಾವು 5 ವರ್ಷಕ್ಕೊಮ್ಮೆ ಬಂದು ಮತ ಕೇಳುವವರಲ್ಲ. ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧದ ಹೋರಾಟದ ಮೂಲಕ ಜನತೆಯ ನಡುವೆಯೇ ಸದಾ ಇರುತ್ತೇವೆ. ಇದುವರೆಗೂ ಆಡಳಿತ ನಡೆಸಿದ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳ ಸ್ವಾರ್ಥ ರಾಜಕೀಯದಿಂದಾಗಿ ಭ್ರಷ್ಟಾಚಾರ, ನಿರುದ್ಯೋಗ, ಶಿಕ್ಷಣದ ವ್ಯಾಪಾರೀಕರಣ ಹೆಚ್ಚಾಗಿ ಜನರ ಜೀವನ ಅಧೋಗತಿಗೆ ಇಳಿದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳ ಆಸ್ತಿ ಕಳೆದ ಬಾರಿಗಿಂತ 10% ರಿಂದ 20% ಹೆಚ್ಚಳವಾಗಿದೆ. ಜನರು ಈ ಪಕ್ಷಗಳ ಆಡಳಿತದಿಂದ ಭ್ರಮನಿರಸನಗೊಂಡು, ಹೋರಾಟದ ಹಾದಿ ತುಳಿದಿದ್ದಾರೆ. ಕಾಮ್ರೇಡ್ ಶಿವದಾಸ್ ಘೋಷ್ ಅವರ ಚಿಂತನೆಗಳ ಆಧಾರದ ಮೇಲೆ ನಾವು ದೇಶದಲ್ಲಿ ಜನ ಹೋರಾಟಗಳನ್ನು ಕಟ್ಟುತ್ತಿದ್ದೇವೆ” ಕಿಡಿ ಕಾರಿದರು.

ಈ ಸುದ್ದಿ ಓದಿದ್ದೀರಾ? : ಸಿದ್ದರಾಮಯ್ಯ ಸೋಲಿಸಲು ರಾಹು-ಕೇತು-ಶನಿ ಒಂದಾಗಿದ್ದಾರೆ: ಶಾಸಕ ಯತೀಂದ್ರ

ಚುನಾವಣೆ ಸಂದರ್ಭದಲ್ಲಿ ಅದಾನಿ, ಅಂಬಾನಿ ಹಾಗೂ ಇತರ ಕಾರ್ಪೋರೇಟ್ ಮನೆತನಗಳು ಪಕ್ಷಗಳಿಗೆ ಹಣಬಲ ಒದಗಿಸುವ ಮೂಲಕ ಅಧಿಕಾರದ ಗದ್ದುಗೆ ಏರಲು ಸಹಕರಿಸುತ್ತವೆ. ನಂತರ ತಮಗೆ ಅನುಕೂಲಕರವಾದ ನೀತಿಗಳನ್ನು ಅನುಷ್ಠಾನಗೊಳಿಸಿಕೊಳ್ಳುತ್ತವೆ. ಇದೇ 75 ವರ್ಷಗಳಿಂದ ಪುನರಾವರ್ತನೆಯಾಗಿದೆ. ಈ ಕೊಳೆತ ಬಂಡವಾಳಶಾಹಿ ವ್ಯವಸ್ಥೆ ಬುಡಮೇಲು ಮಾಡಿ, ದುಡಿಯುವ ಜನರು ಸಮರಶೀಲ ಚಳವಳಿಗಳನ್ನು ಬೆಳೆಸುವ, ಸಮಾಜವಾದಿ ವ್ಯವಸ್ಥೆ ಸ್ಥಾಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ಅಭಿಪ್ರಾಯಪಟ್ಟರು.

ಸರ್ಕಾರಿ ಕಾಲೇಜಿನ ಉಪನ್ಯಾಸಕ ಹುದ್ದೆಗೆ ರಾಜೀನಾಮೆ ನೀಡಿ, ಹೋರಾಟದ ಹಾದಿ ತುಳಿದು ಎಸ್‌ಯುಸಿಐ (ಸಿ) ಅಭ್ಯರ್ಥಿಯಾದ ಕಾಮ್ರೇಡ್ ಮಧುಲತಾ ಗೌಡರ ಮಾತನಾಡಿ, “ಕ್ಷೇತ್ರದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ನಡೆದ ಹಲವಾರು ಹೋರಾಟಗಳಲ್ಲಿ ನಾನು ಭಾಗವಹಿಸಿದ್ದೇನೆ. ನನ್ನನ್ನು ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದರೆ ಈ ಹೋರಾಟಗಳನ್ನು ಇನ್ನೂ ಉನ್ನತಮಟ್ಟಕ್ಕೆ ಕೊಂಡೊಯ್ಯುತ್ತೇನೆ. ಧಾರವಾಡ ಜನರ ಧ್ವನಿಯನ್ನು ವಿಧಾನಸೌಧದಲ್ಲಿ ಮೊಳಗಿಸಲು ತಾವೆಲ್ಲ ನನ್ನನ್ನು ಬೆಂಬಲಿಸಬೇಕು” ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗನ್ನವರ, ಪಕ್ಷದ ಸ್ಥಳೀಯ ಸಮಿತಿ ಸದಸ್ಯ ಮಂಜು ಜೋಡಳ್ಳಿ, ಗೋವಿಂದ ಕೃಷ್ಣಪ್ಪ, ಮಾರುತಿ ಪೂಜಾರ, ಜಗದೀಶ ಪೂಜಾರ, ಹನುಮೇಶ ಹುಡೇದ, ಶಶಿಕಲಾ ಮೇಟಿ ಸೇರಿದಂತೆ ಹಲವು ಜನ ಇದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ಭಾಷಣ | ರಾಮಮಂದಿರದ ಉಲ್ಲೇಖ, ಸಿಖ್ಖರ ಓಲೈಕೆ; ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದ ಚು. ಆಯೋಗ

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ರ್‍ಯಾಲಿಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ...

ನೇಹಾ ಕೊಲೆ ಪ್ರಕರಣ | ಮತಾಂತರ ಆಯಾಮದಿಂದಲೇ ತನಿಖೆಯಾಗಬೇಕು: ಪ್ರಲ್ಹಾದ್‌ ಜೋಶಿ ಆಗ್ರಹ

"ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕೊಲೆಯಾಗಿರುವ ನೇಹಾ ಹಿರೇಮಠ ಅವರನ್ನು ಮತಾಂತರ ಮಾಡಲು ಕೊಲೆ...

ಮುಸ್ಲಿಂ ಮೀಸಲಾತಿ ಕುರಿತ ಮೋದಿ ಹೇಳಿಕೆ ಅವರ ಸೋಲಿನ ಭೀತಿ, ಹತಾಶೆಯ ಪ್ರತೀಕ: ಸಿ ಎಂ ಸಿದ್ದರಾಮಯ್ಯ ತಿರುಗೇಟು

"ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್...

ಪಂಜಾಬ್‌| ಜೈಲಿನಲ್ಲಿರುವ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಲೋಕಸಭೆ ಚುನಾವಣೆಗೆ ಸ್ಪರ್ಧೆ

ಪ್ರಸ್ತುತ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅಸ್ಸಾಂನ ಜೈಲಿನಲ್ಲಿರುವ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್,...