ವಿಶ್ವ ವಿದ್ಯಾಲಯಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕು: ಸಿಎಂ ಸಿದ್ದರಾಮಯ್ಯ

Date:

ವಿಶ್ವ ವಿದ್ಯಾಲಯಗಳು ಸಾಮಾಜಿಕ ಚಿಂತನೆ ಅಳವಡಿಸಿಕೊಳ್ಳದೆ ಸಮಾಜವನ್ನು ವಿಭಜಿಸುವ ರೀತಿಯಲ್ಲಿ ವರ್ತಿಸಬಾರದು. ವಿಶ್ವವಿದ್ಯಾಲಯಗಳು ನಡೆಸುವ ಸಂಶೋಧನೆಗಳು, ಅಧ್ಯಯನಗಳು ಜ‌ನಮುಖಿಯಾಗಿರಬೇಕು. ವಿದ್ಯಾರ್ಥಿಗಳ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ನೂತನ ವಿಶ್ವವಿದ್ಯಾಲಯಗಳ ಕುಲಪತಿಗಳ ನಿಯೋಗವು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು. ನಿಯೋದೊಂದಿಗೆ ಚರ್ಚೆ ನಡೆಸಿ, ಅವರು ಮಾತನಾಡಿದರು.

“ಸಾಮಾಜಿಕ ಮೌಲ್ಯ, ಸಾಮಾಜಿಕ ನ್ಯಾಯಕ್ಕಾಗಿ ವಿವಿಗಳು ತುಡಿಯಬೇಕು. ದೇಶದ ಭವಿಷ್ಯವನ್ನು ಹೆಚ್ಚು ವೈಜ್ಞಾನಿಕವಾಗಿ ರೂಪಿಸುವ ಶಕ್ತಿ ವಿವಿಗಳಿಗೆ ಇದೆ. ಆದರೆ, ತಮ್ಮ ನಿಜವಾದ ಉದ್ದೇಶಗಳಿಂದ ವಿವಿಗಳು ವಿಮುಖವಾಗಿ ಪ್ರತಿಗಾಮಿ ಆದರೆ ವಿದ್ಯಾರ್ಥಿಗಳ ಮತ್ತು ದೇಶದ ಭವಿಷ್ಯವೂ ಕರಾಳ ಆಗುತ್ತದೆ. ನಮ್ಮ ಸರ್ಕಾರ ಉನ್ನತ ಶಿಕ್ಷಣವನ್ನು ವೈಜ್ಞಾನಿಕ ತಳಹದಿಯಲ್ಲಿ ಬಲಪಡಿಸಲು ಬದ್ದವಾಗಿದೆ. ಇದಕ್ಕೆ ಹೊರತಾದದ್ದನ್ನು ಒಪ್ಪಿಕೊಳ್ಳುವುದಿಲ್ಲ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಿಯೋಗದಲ್ಲಿ ಮಡಿಕೇರಿ ವಿವಿಯ ಪ್ರೊ. ಅಶೋಕ್ ಆಲೂರು, ಕೊಪ್ಪಳ ವಿವಿಯ ಡಾ.ಬಿ.ಕೆ.ರವಿ, ಬಾಗಲಕೋಟೆ ವಿವಿಯ ಪ್ರೊ.ದೇಶಪಾಂಡೆ, ಹಾವೇರಿ ವಿವಿಯ ಡಾ.ಜಂಗಮಶೆಟ್ಟಿ, ಬೀದರ್ ವಿವಿಯ ಪ್ರೊ.ಬಿರಾದಾರ್, ಹಾಸನ ವಿವಿಯ ಪ್ರೊ.ತಾರಾನಾಥ್ , ಚಾಮರಾಜನಗರ ವಿವಿಯ ಕುಲಪತಿ ಪ್ರೊ.ಗಂಗಾಧರ್ ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ಭ್ರಷ್ಟಾಚಾರ ಲೀಗಲೈಜ್ ಮಾಡಿದ್ದೇ ಬಿಜೆಪಿ: ಕಂದಾಯ ಸಚಿವ ಕೃಷ್ಣ ಭೈರೇಗೌಡ ಕಿಡಿ

ಭ್ರಷ್ಟಾಚಾರವನ್ನು ಲೀಗಲೈಜ್ ಮಾಡಿದ್ದು, ಬಿಜೆಪಿಯವರು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ...

ತುಮಕೂರು | ಪ್ರಧಾನಿ ಆಗಲು ಯೋಗ್ಯರಾದ ಸಾಕಷ್ಟು ಮುಖಂಡರು ಕಾಂಗ್ರೆಸ್‌ನಲ್ಲಿ ಇದ್ದಾರೆ: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ನಲ್ಲಿ ಪ್ರಧಾನಿಯಾಗಲು ಯಾರಿದ್ದಾರೆ? ನರೇಂದ್ರಮೋದಿ ಬಿಟ್ಟರೆ ಪ್ರಧಾನಿ ಆಗುವ ಅರ್ಹತೆ ಯಾರಿಗೂ...

ಹಾಸನ ಯುವ ನಾಯಕನ ಕಾಮಕೃತ್ಯದ ಪೆನ್‌ಡ್ರೈವ್ ಆರೋಪ; ಮೌನ ಮುರಿಯದ ಮಾಜಿ ಪ್ರಧಾನಿ

ಕಳೆದ ನಾಲ್ಕೈದು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಪೆನ್‌ಡ್ರೈವ್ ಭಾರೀ ಸುದ್ದಿ ಮಾಡ್ತಾ...

ಕಾಂಗ್ರೆಸ್ ಪಕ್ಷ ಬೆಂಬಲಿಸಲು ಪಿಟಿಸಿಎಲ್ ಹೋರಾಟ ಸಮಿತಿ ನಿರ್ಧಾರ

ಬೆಂಗಳೂರು: ದಲಿತರು, ಸಂವಿಧಾನ ವಿರೋಧಿ, ಸಾಂವಿಧಾನಿಕ ಸಂಸ್ಥೆಗಳ ಮೇಲೆ ಪ್ರಭಾವ ಬೀರಿ...