ಎದುರಾಳಿಗಳ ವ್ಯೂಹ ಬೇಧಿಸಿ ಗೆಲುವಿನ ʼಶಿಕಾರಿʼ ದಕ್ಕಿಸಿಕೊಳ್ಳುವರೇ ವಿಜಯೇಂದ್ರ?

Date:

ಮೇಲ್ನೋಟಕ್ಕೆ ವಿಜಯೇಂದ್ರರದ್ದೇ ಕ್ಷೇತ್ರ ಎನ್ನುವ ಮಾತಿದ್ದರೂ ಶಿಕಾರಿಪುರ ವಶಮಾಡಿಕೊಳ್ಳಲು ವಿಜಯೇಂದ್ರ ಎದುರಾಳಿಗಳ ವ್ಯೂಹ ಬೇಧಿಸಿ ಗೆಲುವಿನ ಶಿಕಾರಿ ಮಾಡಬೇಕಿದೆ. ಅಪ್ಪನ ಆಡಳಿತ ಅನುಭವ,ಅಣ್ಣನ ಹೊಂದಾಣಿಕೆ ರಾಜಕಾರಣದ ಸಹಕಾರ ಮತ್ತು ಸಹಾಯವಿದ್ದರೂ ಕ್ಷೇತ್ರ ಧಕ್ಕಿಸಿಕೊಳ್ಳುವುದು ವಿಜಯೇಂದ್ರರಿಗೆ ಅಷ್ಟು ಸರಳವಿಲ್ಲ.

ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಎರಡನೇ ತಲೆಮಾರಿನ ನಾಯಕ.

ಮಗನ ರಾಜಕೀಯ ಭವಿಷ್ಯ ಭದ್ರ ಮಾಡಲು ತಮಗೆ ರಾಜಕೀಯ ನೆಲೆ ಒದಗಿಸಿದ್ದ ಕ್ಷೇತ್ರವನ್ನೇ ಯಡಿಯೂರಪ್ಪ ತ್ಯಾಗ ಮಾಡಿದ್ದಾರೆ. ಶಿಕಾರಿಪುರದ ಮುಂದಿನ ಉತ್ತರಾಧಿಕಾರಿ ಎಂದೇ ಬಿ ವೈ ವಿಜಯೇಂದ್ರ ಈಗ ಬಿಂಬಿತವಾಗಿದ್ದಾರೆ.

ರಾಜ್ಯ ರಾಜಕಾರಣದ ಪ್ರಭಾವಿ ನಾಯಕ ಯಡಿಯೂರಪ್ಪ ಹಾಗೂ ಶಿವಮೊಗ್ಗ ಜಿಲ್ಲೆಗೆ ಅಭಿವೃದ್ದಿ ಪರ್ವದ ದರ್ಶನ ಮಾಡಿಸಿರುವ ಅಣ್ಣ, ಸಂಸದ ಬಿ ವೈ ರಾಘವೇಂದ್ರರಂತಹ ಘಟಾನುಘಟಿ ನಾಯಕರನ್ನು ಬೆನ್ನಿಗಿಟ್ಟುಕೊಂಡು ವಿಜಯೇಂದ್ರ ಶಿಕಾರಿಪುರದ ಅಖಾಡಕ್ಕಿಳಿದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೇಲ್ನೋಟಕ್ಕೆ ವಿಜಯೇಂದ್ರರದ್ದೇ ಕ್ಷೇತ್ರ ಎನ್ನುವ ಮಾತಿದ್ದರೂ ಶಿಕಾರಿಪುರವನ್ನು ವಶಮಾಡಿಕೊಳ್ಳಲು ವಿಜಯೇಂದ್ರ ಎದುರಾಳಿಗಳ ವ್ಯೂಹ ಬೇಧಿಸಿ ಗೆಲುವಿನ ಶಿಕಾರಿ ಮಾಡಬೇಕಿದೆ.

ಅಪ್ಪನ ಆಡಳಿತದ ಅನುಭವ,ಅಣ್ಣನ ಹೊಂದಾಣಿಕೆ ರಾಜಕಾರಣದ ಸಹಕಾರ ಮತ್ತು ಸಹಾಯವಿದ್ದರೂ ಕ್ಷೇತ್ರ ಧಕ್ಕಿಸಿಕೊಳ್ಳುವುದು ವಿಜಯೇಂದ್ರನಿಗೆ ಅಷ್ಟು ಸರಳವಿಲ್ಲ.

ವಿಜಯೇಂದ್ರರ ಮೊದಲ ಗೆಲುವಿಗೆ ಅಡ್ಡಿಯಾಗಿರುವವರು ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ನಾಗರಾಜ್ ಗೌಡ. ಪಕ್ಷದ ಅಧಿಕೃತ ಅಭ್ಯರ್ಥಿ ಮಾಲತೇಶ್‌ಗಿಂತಲೂ (ಗೋಣಿ ಮಾಲತೇಶ್) ಪ್ರಭಾವಿ ಎನಿಸಿಕೊಂಡಿರುವ ನಾಗರಾಜ್ ಜನಮನ್ನಣೆ ಪಡೆದ ನಾಯಕ.

ಮಾಲತೇಶ್‌ಗೂ ಮೊದಲೇ ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿಸಲಾಗಿದ್ದ ನಾಗರಾಜ್‌ಗೆ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿರಲಿಲ್ಲ. ಹೀಗಾಗಿ ಪಕ್ಷದ ವಿರುದ್ಧ ಮುನಿಸಿಕೊಂಡಿದ್ದ ನಾಗರಾಜ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

2018ರ ಚುನಾವಣೆಯಲ್ಲಿ ಯಡಿಯೂರಪ್ಪ ಎದುರು 35 ಸಾವಿರ ಮತಗಳಿಂದ ಸೋತಿದ್ದ ಮಾಲತೇಶ್‌ಗೆ ಈ ಬಾರಿ ಟಿಕೆಟ್ ಕೈ ತಪ್ಪಬಹದು ಎಂದೇ ಭಾವಿಸಲಾಗಿತ್ತು. ಆದರೆ ಈ ಎಲ್ಲ ಲೆಕ್ಕಾಚಾರಗಳನ್ನು ಮೀರಿ ಮಾಲತೇಶ್ ಟಿಕೆಟ್ ಪಡೆದಿದ್ದಾರೆ.

ಜಾತಿ ಲೆಕ್ಕಾಚಾರ

ಬಿಎಸ್‌ವೈ ಮೀಸಲು ಕ್ಷೇತ್ರವೇ ಎನ್ನುವಂತಿರುವ ಶಿಕಾರಿಪುರದ ಮತರಾಜಕಾರಣ ಲೆಕ್ಕಾಚಾರ ಬಲು ವಿಭಿನ್ನ. ಜನಪರ ಕಾರ್ಯಗಳಿಂದಲೇ ಕ್ಷೇತ್ರದ ಮನೆಮಗನಾಗಿ ಗುರುತಿಸಿಕೊಂಡಿದ್ದವರು ಯಡಿಯೂರಪ್ಪ.

ಅತ್ಯಲ್ಪ ಮತಹೊಂದಿರುವ ಗಾಣಿಗ ಲಿಂಗಾಯತ ಸಮುದಾಯದ ಬಿಎಸ್‌ವೈ, ಈವರೆಗೆ ಕ್ಷೇತ್ರದ ಅತಿದೊಡ್ಡ ಮತಶಕ್ತಿಯಾದ ಸಾದರ ಲಿಂಗಾಯತರು, ಲಂಬಾಣಿ ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡ, ಮುಸ್ಲಿಮರು, ಈಡಿಗರು, ಕುರುಬರು, ವಾಲ್ಮೀಕಿ ಜನಾಂಗದ ಮತದಾರಿಂದಲೇ ಗೆಲುವು ಕಂಡವರು.

ಒಟ್ಟು 1,99,955 ಮತದಾರರನ್ನು ಈ ಕ್ಷೇತ್ರ ಹೊಂದಿದೆ. ಇವರಲ್ಲಿ 57 ಸಾವಿರ ಲಿಂಗಾಯತರು, 26 ಸಾವಿರ ಲಂಬಾಣಿಗಳು, ಮುಸ್ಲಿಮರು 21 ಸಾವಿರ, ಕುರುಬರು 19 ಸಾವಿರ, ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡದವರು 16 ಸಾವಿರ, ವಾಲ್ಮೀಕಿ ಸಮುದಾಯದವರು 15 ಸಾವಿರ, ಈಡಿಗರು 12 ಸಾವಿರ, ಒಕ್ಕಲಿಗರು 5 ಸಾವಿರ ಹಾಗೂ ಬ್ರಾಹ್ಮಣರು 3 ಸಾವಿರ ಹಾಗೂ ಇತರರು 10 ಸಾವಿರ ಇದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಸಾದರ ಲಿಂಗಾಯತ ಪಂಗಡದ ನಾಗರಾಜ್ ಗೌಡ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಇದು ಬಿವೈವಿ ನಿದ್ದೆಗೆಡಿಸಿದೆ.ವಿಜಯೇಂದ್ರ

ಅಭ್ಯರ್ಥಿಗಳ ಪ್ಲಸ್ ಮೈನಸ್

ಈ ಬಾರಿ ಚುನಾವಣೆಯಲ್ಲಿ ಗೆಲುವು ವಿಜಯೇಂದ್ರರದ್ದೇ ಆದರೂ ಅದು ಯಡಿಯೂರಪ್ಪನವರ ಗೆಲುವಿನಂತೆ ಭಾರೀ ಮತಗಳ ಅಂತರದ್ದಲ್ಲ, ಎನ್ನುವುದು ಕ್ಷೇತ್ರವನ್ನು ಬಹಳ ಹತ್ತಿರದಿಂದ ಕಂಡವರು ಮಾತು.

ಸಿಎಂ ಅವಧಿಯಲ್ಲಿ ಕ್ಷೇತ್ರದಲ್ಲಿ ಯಡಿಯೂರಪ್ಪ ನೀರಾವರಿ, ವಿದ್ಯುತ್, ಶಾಲಾ, ಕಾಲೇಜು, ರಸ್ತೆ, ಎಲ್ಲ ಜಾತಿ ಜನಾಂಗಗಳಿಗೆ ಪ್ರತ್ಯೇಕ ಸಮುದಾಯ ಭವನ ಮೂಲಕ ಸಹಸ್ರಾರು ಕೋಟಿ ಅನುದಾನ ತಂದಿದ್ದಾರೆ. ಇದೂ ಪುತ್ರನ ರಾಜಕೀಯ ಪ್ರವೇಶಕ್ಕೆ ಪ್ಲಸ್ ಪಾಯಿಂಟ್.

ಆದರೆ, ದಲಿತರ ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಬಂಜಾರ ಸಮುದಾಯ ಬಿಜೆಪಿ-ಬಿಎಸ್‌ವೈ ವಿರುದ್ಧ ತಿರುಗಿ ಬಿದ್ದಿರುವುದು, ವಿಜಯೇಂದ್ರ ಪಾಲಿಗೆ ಹಿನ್ನಡೆ. ಈ ಲಾಭ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಪಾಲಾಗಬಹುದೆನ್ನುವುದೇ ಇವರ ಮೈನಸ್ ಪಾಯಿಂಟ್.

ವಿಜಯೇಂದ್ರರ ಗೆಲುವಿಗೆ ತಡೆಯಾಗಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವವರು ಕಾಂಗ್ರೆಸ್ ಬಂಡಾಯ ಉಮೇದುವಾರ ನಾಗರಾಜಗೌಡ. 3 ಬಾರಿ ಪುರಸಭಾ ಸದಸ್ಯನಾಗಿ ಕಳೆದ ನಾಲ್ಕೈದು ವರ್ಷಗಳಿಂದ ಚುನಾವಣಾ ಕಣಕ್ಕೆ ಧುಮುಕಲು ಸಕಲ ಪ್ರಯತ್ನಗಳನ್ನು ಮಾಡುತ್ತಲೇ ಬಂದವರು ನಾಗರಾಜ್ ಗೌಡ.

ಕ್ಷೇತ್ರದಲ್ಲಿ ಪ್ರಬಲವಾಗಿರುವ ಸಾಧು ವೀರಶೈವ ಸಮುದಾಯಕ್ಕೆ ಸೇರಿರುವ ನಾಗರಾಜಗೌಡ ಈಗ ಅದೇ ಸಮುದಾಯದ ಬಲದೊಂದಿಗೆ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಇವರು ಇಲ್ಲಿನ ಗ್ರಾಮೀಣ ಭಾಗದ ಮತದಾರರ ಪಾಲಿನ ನೆಚ್ಚಿನ ವ್ಯಕ್ತಿ ಕೂಡ. ಇವೆಲ್ಲದರ ಜೊತೆಗೆ ಬಹುತೇಕ ಬಿಜೆಪಿ ವಿರೋಧಿ ಮುಖಂಡರೆಲ್ಲ ನಾಗರಾಜಗೌಡರ ಬೆಂಬಲಕ್ಕೆ ಟೊಂಕ ಕಟ್ಟಿ ನಿಂತಿರುವುದು ಇವರ ಪಾಲಿಗೆ ಬಲ ತುಂಬಿದೆ.

ನಿರಂತರವಾಗಿ ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತಿದ್ದ ದಲಿತ ಹಾಗೂ ಅಲ್ಪ ಸಂಖ್ಯಾತ ಸಮುದಾಯವನ್ನೇ ಓಲೈಸುತ್ತಾ ಟಾರ್ಗೆಟ್ ಮಾಡಿರುವ ನಾಗರಾಜ್, ಇವರ ಬಲದಲ್ಲೇ ಅಖಾಡವನ್ನು ತಮ್ಮತ್ತ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಈ ಸುದ್ದಿ ಓದಿದ್ದೀರಾ ?:ವಿಜಯಪುರ ಕ್ಷೇತ್ರ | ಕಾಂಗ್ರೆಸ್‌ಗೆ ಜೆಡಿಎಸ್​ ಅಭ್ಯರ್ಥಿ ಬೆಂಬಲ; ಯತ್ನಾಳ್‌ ರಾಜಕೀಯ ಮೇಲೆ ಪ್ರಶ್ನಾರ್ಥಕ ಚಿಹ್ನೆ

ಕಳೆದ ಬಾರಿ ಪರಾಭವಗೊಂಡಿದ್ದ ಗೋಣಿ ಮಾಲತೇಶ್ ಪುನಃ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಈ ಬಾರಿ ಅವರು ಪಡೆಯುವ ಮತಗಳು ನಿರ್ಣಾಯಕ ಸಾಧ್ಯತೆ ಹೆಚ್ಚಿದೆ. ಕುರುಬ ಸಮುದಾಯದವರಾದ ಇವರು ತಮ್ಮ ಸಾಂಪ್ರದಾಯಿಕ ಮತಗಳನ್ನು ಪಡೆದುಕೊಂಡಿದ್ದೇ ಆದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿನ ಹಾದಿ ಕಠಿಣವಾಗಲಿದೆ. ಮಾಲತೇಶ್ ಪಡೆಯುವ ಮತಗಳು ಪಕ್ಷೇತರ ಅಭ್ಯರ್ಥಿ ನಾಗರಾಜ ಗೌಡರಿಗೆ ಅನುಕೂಲವಾಗಲಿದೆ.

ಹೀಗೆ ಮೊದಲ ಬಾರಿ ಪಕ್ಷೇತರ ಅಭ್ಯರ್ಥಿಯಿಂದ ನೇರ ಹಣಾಹಣಿ ಎದುರಿಸುತ್ತಿರುವ ಬಿಜೆಪಿ ಈ ಕ್ಷೇತ್ರವನ್ನು ಉಳಿಸಿಕೊಳ್ಳುವುದೇ? ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಜೊತೆಗೆ ತ್ರಿಕೋಣ ಹಣಾಹಣಿ ಹೊಂದಿರುವ ಶಿಕಾರಿಪುರವನ್ನು ಉಳಿಸಿಕೊಂಡು ವಿಜಯೇಂದ್ರ ತಂದೆಯ ಪಾರಮ್ಯ ಮುಂದುವರೆಸಿಕೊಂಡು ಹೋಗುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆಯೀಗ ಎಲ್ಲರನ್ನೂ ಕಾಡುತ್ತಿದೆ.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಐಗೆ ವಕೀಲರ ಪತ್ರ: ಪ್ರಧಾನಿಯದು ಬರೀ ʼಬೂಟಾಟಿಕೆʼ ಎಂದು ಕಾಂಗ್ರೆಸ್ ತಿರುಗೇಟು

ಪಟ್ಟಭದ್ರ ಹಿತಾಸಕ್ತಿ ಗುಂಪಿನ ವಿರುದ್ಧ ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿಗೆ ಬರೆದ...

ಕೋಲಾರ ಟಿಕೆಟ್‌ | ಬಣ ಬಡಿದಾಟಕ್ಕೆ ಪೂರ್ಣವಿರಾಮವಿಟ್ಟ ಸಿಎಂ, ಡಿಸಿಎಂ; ಅಭ್ಯರ್ಥಿ ಯಾರು?

ಕೋಲಾರ ಟಿಕೆಟ್‌ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್ ಪಾಳಯದಲ್ಲಿ ಉಂಟಾಗಿದ್ದ ಬಣಗಳ ಬಡಿದಾಟವನ್ನು...

ಕಂಗನಾ ರಣಾವತ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ

ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಖ್ಯಾತ ನಟಿ ಕಂಗನಾ ರಣಾವತ್...