ಸಿಂಗಾಪುರ | ವಿಶ್ವದ ಪ್ರಮುಖ ಗುಪ್ತಚರ ಸಂಸ್ಥೆಗಳ ಮುಖ್ಯಸ್ಥರ ರಹಸ್ಯ ಸಮಾವೇಶ ; ವರದಿ

Date:

  • ಸಿಂಗಾಪುರ ದೇಶದಲ್ಲಿ ಶಾಂಗ್ರಿ-ಲಾ ಭದ್ರತಾ ಸಂಸ್ಥೆಗಳ ಸಂವಾದ ಸಭೆ ನಂತರ ಸಮಾವೇಶ
  • ರಹಸ್ಯ ಸಮಾವೇಶದ ಬಗ್ಗೆ ಮಾಹಿತಿ ಇಲ್ಲ ಎಂದ ಅಮೆರಿಕ ರಾಯಭಾರ ಕಚೇರಿ

ಸಿಂಗಾಪುರ ದೇಶದಲ್ಲಿ ಭಾನುವಾರ (ಜೂನ್‌ 4) ಶಾಂಗ್ರಿ-ಲಾ ಭದ್ರತಾ ಸಂಸ್ಥೆಗಳ ಸಂವಾದ ಸಭೆಯ ನಂತರ ಪ್ರತ್ಯೇಕ ಸ್ಥಳದಲ್ಲಿ ವಿಶ್ವದ ಪ್ರಮುಖ ಗುಪ್ತಚರ ಸಂಸ್ಥೆಗಳ ಸುಮಾರು 20ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ರಹಸ್ಯ ಸಮಾವೇಶ ನಡೆಸಿದ್ದಾರೆ ಎಂದು ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ಇಂತಹ ರಹಸ್ಯ ಸಭೆಗಳನ್ನು ಸರ್ಕಾರ ಆಯೋಜಿಸಿದೆ. ಹಲವಾರು ವರ್ಷಗಳಿಂದ ಭದ್ರತಾ ಶೃಂಗಸಭೆಯ ಜೊತೆಗೆ ಪ್ರತ್ಯೇಕ ಸ್ಥಳದಲ್ಲಿ ಇಂತಹ ರಹಸ್ಯ ಸಮಾವೇಶ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದರೆ ಈ ಹಿಂದೆ ರಹಸ್ಯ ಸಭೆಗಳು ವರದಿಯಾಗಿಲ್ಲ ಎಂದು ಹೇಳಲಾಗಿದೆ.

ಅಮೆರಿಕ ದೇಶದ ಪರವಾಗಿ ಅಲ್ಲಿಯ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಅವ್ರಿಲ್ ಹೈನ್ಸ್ ಸಿಂಗಾಪುರ ದೇಶದಲ್ಲಿನ ಗುಪ್ತಚರ ಮುಖ್ಯಸ್ಥರ ರಹಸ್ಯ ಸಮಾವೇಶದಲ್ಲಿ ಭಾಗವಹಿಸಿದ್ದರು. ಉದ್ವಿಗ್ನತೆಯ ಹೊರತಾಗಿಯೂ ಚೀನಾದ ಗುಪ್ತಚರ ನಿರ್ದೇಶಕರು ಉಪಸ್ಥಿತರಿದ್ದರು.

ಸಂಶೋಧನೆ ಮತ್ತು ವಿಶ್ಲೇಷಣಾ ಘಟಕವಾದ ಭಾರತದ ಸಾಗರೋತ್ತರ ಗುಪ್ತಚರ ಸಂಗ್ರಹಣಾ ಸಂಸ್ಥೆಯ ಮುಖ್ಯಸ್ಥ ಸಮಂತ್ ಗೋಯೆಲ್ ಕೂಡ ಭಾಗವಹಿಸಿದ್ದರು ಎಂದು ಭಾರತೀಯ ಮಾಧ್ಯಮಗಳು ವರದಿ ಮಾಡಿವೆ.

ಸಿಂಗಾಪುರ ದೇಶದ ಅಮೆರಿಕ ರಾಯಭಾರ ಕಚೇರಿಯು ಗುಪ್ತಚರ ಅಧಿಕಾರಿಗಳ ರಹಸ್ಯ ಭೇಟಿಯ ಬಗ್ಗೆ ಯಾವುದೇ ಮಾಹಿತಿ ಹೊಂದಿಲ್ಲ ಎಂದು ಹೇಳಿದೆ.

ಈ ಸುದ್ದಿ ಓದಿದ್ದೀರಾ? ರೈಲು ದುರಂತ : ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಒಡಿಶಾ ಸರ್ಕಾರ

ಈ ಬಗ್ಗೆ ಚೀನಾ ಮತ್ತು ಭಾರತ ಸರ್ಕಾರಗಳು ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

“ಗುಪ್ತಚರ ಸಮಾವೇಶವು ಅಂತಾರಾಷ್ಟ್ರೀಯ ಕಾರ್ಯಸೂಚಿಯ ಒಂದು ಪ್ರಮುಖ ಭಾಗವಾಗಿದೆ” ಎಂದು ಗುಪ್ತಚರ ಸಭೆಯ ಆಯೋಜನೆಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

“ರಹಸ್ಯ ಸಮಾವೇಶದಲ್ಲಿ ಗುಪ್ತಚರ ಸಂಸ್ಥೆ ಅಧಿಕಾರಿಗಳು ಕೆಲವು ಸಂಕೇತಗಳ ಮೂಲಕ ಚರ್ಚೆ ನಡೆಸಿದರು. ಇದು ಔಪಚಾರಿಕ ಮತ್ತು ಮುಕ್ತ ರಾಜತಾಂತ್ರಿಕತೆ ಕಠಿಣವಾಗುವ ಸಂದರ್ಭದಲ್ಲಿ ಅನುಕೂಲವಾಗುತ್ತದೆ” ಎಂದು ಅಧಿಕಾರಿಯೊಬ್ಬರು ಹೇಳಿದರು.

ಯಾವ ವಿಷಯದ ಕುರಿತು ಚರ್ಚೆ ನಡೆಸಲಾಯಿತು ಎಂದು ಬಹಿರಂಗಪಡಿಸಲು ಅಧಿಕಾರಿ ನಿರಾಕರಿಸಿದರು ಎಂದು ವರದಿಯಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

28 ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರಾಗಿ ಸಚಿವರ ನೇಮಕ; ಎಂ ಬಿ ಪಾಟೀಲ್‌, ಜಾರ್ಜ್‌ಗಿಲ್ಲ ಜವಾಬ್ದಾರಿ

ಸಚಿವರ ತವರು ಜಿಲ್ಲೆ ಹೊರತುಪಡಿಸಿ ಬೇರೆ ಬೇರೆ ಜಿಲ್ಲೆಗಳಿಗೆ ನೇಮಕ ಸಂಭಾವ್ಯ ಅಭ್ಯರ್ಥಿಗಳ...

ವಿಪಕ್ಷಗಳಿಂದ ನೀರಿನ ರಾಜಕಾರಣ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಕಾವೇರಿ ನೀರಿನ ವಿಚಾರದಲ್ಲಿ ವಿಪಕ್ಷಗಳ ಮುಖಂಡರಾದ ಬಿಎಸ್​ವೈ, ಬೊಮ್ಮಾಯಿ, ಹೆಚ್​ಡಿ ಕುಮಾರಸ್ವಾಮಿಯವರು...

ತಮಿಳುನಾಡಿಗೆ ನೀರು ಬಿಟ್ಟಿದ್ದೇ ಆದರೆ ನಮ್ಮ ನಡೆ ಬೇರೆ ಇರಲಿದೆ: ಕುಮಾರಸ್ವಾಮಿ ಎಚ್ಚರಿಕೆ

ತಮಿಳುನಾಡು ಕೇಳುವ ಮೊದಲೇ ನೀರು ಬಿಟ್ಟ ಸರ್ಕಾರ ತಮಿಳುನಾಡಿನವರು ಎರಡು ಬೆಳೆ ಬೆಳೆಯುತ್ತಾರೆ:...

ಹೊಸ ಸಂಸತ್ ಕಟ್ಟಡವನ್ನು ‘ಮೋದಿ ಮಲ್ಟಿಪ್ಲೆಕ್ಸ್’ ಎನ್ನಬೇಕು: ಜೈರಾಮ್ ರಮೇಶ್

ಹೊಸ ಸಂಸತ್ ಭವನದ ರಚನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್...