ಸುಡಾನ್‌ ಸಂಘರ್ಷ; ಆಹಾರ ಸಿಗದೆ ಅನಾಥಾಲಯದಲ್ಲಿ 60 ಮಕ್ಕಳು ಸಾವು

Date:

ಸಂಘರ್ಷ ಪೀಡಿತ ಸುಡಾನ್‌ ರಾಜಧಾನಿ ಖಾರ್ಟೂಮ್‌ನಲ್ಲಿರುವ ಅನಾಥಾಲಯವೊಂದರಲ್ಲಿ ಆಹಾರ, ಹಾಲು ಸಿಗದೆ ಹಸುಗೂಸುಗಳು ಸೇರಿದಂತೆ 60ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರುವುದಾಗಿ ಅಸೋಸಿಯೇಟೆಡ್‌ ಪ್ರೆಸ್‌ (ಎಪಿ) ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಸಂಘರ್ಷದಿಂದ ಸುಡಾನ್‌ ದೇಶದ ಹಲವು ನಗರಗಳಲ್ಲಿ ಗುಂಡಿನ ದಾಳಿ ಸೇರಿದಂತೆ ಭೀಕರ ಆಂತರಿಕ ಯುದ್ಧ ನಡೆಯುತ್ತಿದೆ. ಈ ನಡುವೆ ರಾಜಧಾನಿ ಖಾರ್ಟೂಮ್‌ನಲ್ಲಿರುವ ಅಲ್ ಮೈಖೋಮಾ ಅನಾಥಾಶ್ರಮದಲ್ಲಿ ಕಳೆದ ಆರು ವಾರಗಳಲ್ಲಿ, ಮೂರು ತಿಂಗಳು ಪ್ರಾಯದ ಹಸುಗೂಸು, ಪುಟ್ಟ ಮಕ್ಕಳು ಸೇರಿದಂತೆ 60ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.

ಎರಡು ದಿನಗಳ ಅಂತರದಲ್ಲಿ ಇಪ್ಪತ್ತಾರು ಮಕ್ಕಳು ಮೃತಪಟ್ಟಿದ್ದು, ಇವರಲ್ಲಿ ಹೆಚ್ಚಿನವರು ಆಹಾರದ ಕೊರತೆ ಮತ್ತು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಆಶ್ರಮದ ಹೊರಭಾಗದಲ್ಲಿ ಭಾರಿ ಸಂಘರ್ಷ ನಡೆಯುತ್ತಿದ್ದ ಕಾರಣ ಹೊರಗಿನಿಂದ ಯಾವುದೇ ವಸ್ತುಗಳನ್ನು ತರಲು ಸಾಧ್ಯವಾಗಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಎಪಿಗೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಖ್ಯಾತ ಗಾಯಕಿ ಟೀನಾ ಟರ್ನರ್‌ ನಿಧನ | ಒಬಾಮಾ, ಜೋ ಬೈಡನ್‌ ಸಂತಾಪ

ಮೃತ ಮಕ್ಕಳ ಮೃತದೇಹಗಳನ್ನು ಬಿಳಿ ಬಟ್ಟೆಯಲ್ಲಿ ಮುಚ್ಚಲಾಗಿರುವ ಮತ್ತು ಕೆಲ ಮಕ್ಕಳು  ಕೇವಲ ಡೈಪರ್‌ ಧರಿಸಿ ಅಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ ಮೈಖೋಮಾ ಅನಾಥಾಶ್ರಮದಲ್ಲಿ ಹತ್ತಕ್ಕೂ ಹೆಚ್ಚು ವೈದ್ಯರು, ಸ್ವಯಂಸೇವಕರು, ಆರೋಗ್ಯ ಅಧಿಕಾರಿಗಳು ಹಾಗೂ ನೌಕರರು ಇದ್ದರೂ ಸಹ ಆಹಾರದ ಕೊರತೆಯಿಂದಾಗಿ ಮಕ್ಕಳ ಸಾವಿನ ಪ್ರಮಾಣ ಹೆಚ್ಚಾಗಿದೆ ಎನ್ನಲಾಗಿದೆ.

ಘಟನೆ ಬೆಳಕಿಗೆ ಬರುತ್ತಿದ್ಧಂತೆಯೇ ಯುನಿಸೆಫ್ ಮತ್ತು ರೆಡ್‌ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿಯ ಸಹಾಯದಿಂದ ಅನಾಥಾಶ್ರಮಕ್ಕೆ ಆಹಾರ, ಔಷಧಗಳನ್ನು ತಲುಪಿಸಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹದಗೆಟ್ಟ ರಾಜತಾಂತ್ರಿಕ ಸಂಬಂಧ; ಕೆನಡಾದಲ್ಲಿರುವ ಭಾರತೀಯ ನಾಗರಿಕರಿಗೆ ಸಲಹಾ ಸೂಚಿ ಜಾರಿ

ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದ್ದಿರುವ...

ಮಣಿಪುರ ವಿದ್ಯಾರ್ಥಿಗಳಿಗೆ ಕಣ್ಣೂರು ವಿವಿ ಸಹಾಯಾಸ್ತ

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಉನ್ನತ ಶಿಕ್ಷಣದಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಸಹಾಯಾಸ್ತ ನೀಡಲು...

ಮಹಿಳಾ ಮೀಸಲಾತಿ | ‘ಇಂಡಿಯಾ’ ಬೆಂಬಲ; ಎರಡು ಟೀಕೆಗಳನ್ನು ಮುಂದಿಟ್ಟ ಒಕ್ಕೂಟ

ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸರುವ ಮಹಿಳಾ ಮೀಸಲಾತಿ ಮಸೂದೆಯು ವಿಪಕ್ಷಗಳ 'ಇಂಡಿಯಾ'...

‘ಗೌಪ್ಯವಾಗಿ ತರಲಾಗಿದೆ’: ಮಹಿಳಾ ಮೀಸಲಾತಿ ಮಸೂದೆ ಕುರಿತು ಕೇಂದ್ರದ ವಿರುದ್ಧ ಕನಿಮೊಳಿ ಕಿಡಿ

ಮಹಿಳಾ ಮೀಸಲಾತಿ ಮಸೂದೆಯನ್ನು ಗೌಪ್ಯವಾಗಿ ತರಲಾಗಿದೆ. ಪಕ್ಷಗಳೊಂದಿಗೆ ಚರ್ಚೆ ನಡೆಸಿಲ್ಲ, ವಿಶ್ವಾಸಕ್ಕೆ...