ತೈವಾನ್‌ ಅಧ್ಯಕ್ಷೆ ತ್ಸೈ ಭೇಟಿ ಮಾಡದಂತೆ ಅಮೆರಿಕ ಸ್ಪೀಕರ್‌ಗೆ ಚೀನಾ ಎಚ್ಚರಿಕೆ

Date:

  • ಪ್ರವಾಸದ ವೇಳೆ ತೈವಾನ್ ಅಧ್ಯಕ್ಷೆ ತ್ಸೈ ಅಮೆರಿಕ ಭೇಟಿ
  • ಪ್ರವಾಸದ ಕೊನೆಯಲ್ಲಿ ಅಮೆರಿಕಗೆ ತೆರಳಲಿರುವ ತ್ಸೈ

ಅಮೆರಿಕ ಸ್ಪೀಕರ್‌ ಕೆವಿನ್‌ ಮೆಕಾರ್ಥಿ ಅವರು ದ್ವೀಪ ರಾಷ್ಟ್ರ ತೈವಾನ್‌ ಅಧ್ಯಕ್ಷೆ ತ್ಸೈ ಇಂಗ್‌-ವೆನ್‌ ಅವರನ್ನು ಭೇಟಿ ಮಾಡಿದರೆ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಚೀನಾ ಬುಧವಾರ (ಮಾರ್ಚ್‌ 29) ಬೆದರಿಕೆ ಹಾಕಿದೆ.

ತೈವಾನ್‌ ಅಧ್ಯಕ್ಷೆ ತ್ಸೈ ಅವರು ಗ್ವಾಟೆಮಾಲಾ ಮತ್ತು ಬೆಲೀಜ್‌ಗೆ ಪ್ರವಾಸ ಮಾಡಲಿರುವ ಹಿನ್ನೆಲೆಯಲ್ಲಿ ಚೀನಾ ಈ ಎಚ್ಚರಿಕೆ ನೀಡಿದೆ. ತ್ಸೈ ಅವರು ಅಮೆರಿಕದ ನ್ಯೂಯಾರ್ಕ್‌ ಮತ್ತು ಕ್ಯಾಲಿಫೋರ್ನಿಯಾ ಮೂಲಕ ಹಾದು ಹೋಗಲಿದ್ದಾರೆ.

ತೈವಾನ್‌ನ ತ್ಸೈ ಅವರು ಅಮೆರಿಕದ ಸಭಾಧ್ಯಕ್ಷರ ಭೇಟಿ ಮಾಡಲಿದ್ದಾರೆ ಎಂದು ಅಮೆರಿಕ ಅಧಿಕೃತವಾಗಿ ದೃಢೀಕರಿಸಿಲ್ಲ. ಆದರೆ ತ್ಸೈ ಅವರು ತಮ್ಮ 10 ದಿನದ ಪ್ರವಾಸದ ಕೊನೆಯಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಅಮೆರಿಕ ಸ್ಪೀಕರ್‌ ಕೆವಿನ್ ಮೆಕಾರ್ಥಿಯನ್ನು ಭೇಟಿಯಾಗುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಜಾಸತ್ತಾತ್ಮಕವಾಗಿ ಆಳ್ವಿಕೆ ನಡೆಸುತ್ತಿರುವ ತೈವಾನ್ ಅನ್ನು ತನ್ನ ಸ್ವಂತ ಭೂಪ್ರದೇಶವೆಂದು ಹೇಳಿಕೊಳ್ಳುವ ಚೀನಾ, ತ್ಸೈ ಅವರನ್ನು ಭೇಟಿಯಾಗದಂತೆ ಅಮೆರಿಕ ಅಧಿಕಾರಿಗಳಿಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದೆ.

ಕಳೆದ ಆಗಸ್ಟ್‌ನಲ್ಲಿ ಆಗಿನ ಅಮೆರಿಕ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈಪೆಗೆ ಭೇಟಿ ನೀಡಿದಾಗ ಚೀನಾದ ಬೀಜಿಂಗ್ ತೈವಾನ್ ಸುತ್ತಲೂ ಯುದ್ಧದ ಅಭ್ಯಾಸಗಳನ್ನು ನಡೆಸಿತ್ತು. ತ್ಸೈ ಅವರು ವಿದೇಶದಲ್ಲಿರುವಾಗ ಚೀನಾದ ನಡೆಗಳ ಬಗ್ಗೆ ನಿಗಾ ಇಡುವುದಾಗಿ ತೈವಾನ್‌ನ ಸಶಸ್ತ್ರ ಪಡೆಗಳು ಹೇಳಿವೆ.

“ತ್ಸೈ ಅವರು ಅಮೆರಿಕಕ್ಕೆ ಭೇಟಿ ನೀಡಿದಾಗ ವಿಮಾನ ನಿಲ್ದಾಣ ಅಥವಾ ಹೋಟೆಲ್‌ನಲ್ಲಿ ಮಾತ್ರ ಉಳಿಯುವುದಿಲ್ಲ. ಅವರು ಅಮೆರಿಕದ ಅಧಿಕಾರಿಗಳು ಮತ್ತು ಶಾಸಕರನ್ನು ಭೇಟಿಯಾಗಲಿದ್ದಾರೆ” ಎಂದು ಚೀನಾದ ತೈವಾನ್ ವ್ಯವಹಾರಗಳ ಕಚೇರಿಯ ವಕ್ತಾರೆ ಝು ಫೆಂಗ್ಲಿಯನ್ ಬೀಜಿಂಗ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

“ತ್ಸೈ ಅವರು ಅಮೆರಿಕದ ಸ್ಪೀಕರ್ ಮೆಕಾರ್ಥಿ ಅವರನ್ನು ಭೇಟಿಯಾಗುವುದು ಚೀನಾದ ಏಕತಾ ಸಿದ್ಧಾಂತವನ್ನು ಉಲ್ಲಂಘಿಸುವ ಮತ್ತೊಂದು ಗಂಭೀರ ಪ್ರಯತ್ನ. ಇದರಿಂದ ಚೀನಾದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆಯಾಗುತ್ತದೆ. ತೈವಾನ್‌ನ ಜಲಸಂಧಿಯಲ್ಲಿ ಇರುವ ಶಾಂತಿ ಮತ್ತು ಸ್ಥಿರತೆ ನಾಶವಾಗಲಿದೆ” ಎಂದು ಝು ಪೆಂಗ್ಲಿಯನ್‌ ತಿಳಿಸಿದ್ದಾರೆ.

“ನಾವು ತ್ಸೈ ಅವರು ಅಮೆರಿಕ ಸ್ಪೀಕರ್‌ ಅವರ ಭೇಟಿಯನ್ನು ದೃಢವಾಗಿ ವಿರೋಧಿಸುತ್ತೇವೆ. ಪ್ರತಿರೋಧಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ” ಎಂದು ಝು ಹೇಳಿದರು.

ಈ ಸುದ್ದಿ ಓದಿದ್ದೀರಾ? ಫ್ರಾನ್ಸ್ | ಸರ್ಕಾರದ ಪಿಂಚಣಿ ನೀತಿ ವಿರುದ್ಧ ಕಾರ್ಮಿಕರ ಆಕ್ರೋಶ

“ತೈವಾನ್ ಅಧ್ಯಕ್ಷರ ಅಮೆರಿಕ ಭೇಟಿ ಅವರ ನಿಗದಿತ ವಿದೇಶಿ ವ್ಯವಹಾರಗಳ ಭಾಗವವಾಗಿದೆ. ತೈವಾನ್ ವಿರುದ್ಧ ಯಾವುದೇ ಆಕ್ರಮಣಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ಚೀನಾ ತ್ಸೈ ಅವರ ಪ್ರವಾಸವನ್ನು ಬಳಸಿಕೊಳ್ಳಬಾರದು” ಎಂದು ಅಮೆರಿಕ ಹೇಳಿದೆ.

ಲ್ಯಾಟಿನ್ ಅಮೆರಿಕ, ಕೆರಿಬಿಯನ್ ಮತ್ತು ಪೆಸಿಫಿಕ್‌ ವಲಯದ ಮಿತ್ರರಾಷ್ಟ್ರಗಳಿಗೆ ತ್ಸೈ ಅವರು ರಾಜತಾಂತ್ರಿಕ ಭೇಟಿ ನೀಡುವಾಗ ವಾಡಿಕೆಯಂತೆ ಅಮೆರಿಕ ಮೂಲಕ ಹಾದು ಹೋಗುತ್ತಾರೆ. ಅಧಿಕೃತ ಭೇಟಿಗೆ ಅಲ್ಲದಿದ್ದರೂ ಉನ್ನತ ಮಟ್ಟದ ಸಭೆಗಳಿಗೆ ಎರಡೂ ರಾಷ್ಟ್ರಗಳು ಈ ಪದ್ಧತಿ ಅನುಸರಿಸುತ್ತವೆ.

ಈ ದಿನ ಡೆಸ್ಕ್‌
Website | + posts

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಜನಪ್ರಿಯ

ಈ ರೀತಿಯ ಹೆಚ್ಚು
Related

ವೃತ್ತಿಯಲ್ಲಿ ಭಿಕ್ಷುಕನಾದರೂ ಪತ್ನಿ ಸಲಹುವುದು ಪತಿ ಕರ್ತವ್ಯ ಎಂದ ಪಂಜಾಬ್-ಹರಿಯಾಣ ಹೈಕೋರ್ಟ್

ಪಂಜಾಬ್‌- ಹರಿಯಾಣ ಹೈಕೋರ್ಟ್ ಮೂಲಕ ಮೇಲ್ಮನವಿ ಸಲ್ಲಿಸಿದ್ದ ಪತಿ ಪತ್ನಿಗೆ ಪ್ರತಿ ತಿಂಗಳು...

ಕೋಮು ಉದ್ವಿಗ್ನತೆ ಹಿನ್ನೆಲೆ ಅಮಿತ್‌ ಶಾ ಬಿಹಾರ ಭೇಟಿ ರದ್ದು; ಜನ ಬಾರದ ಕಾರಣ ವಾಪಸ್‌ ಎಂದ ಜೆಡಿಯು

ಏಪ್ರಿಲ್‌ 2ರಂದು ನಳಂದ ಜಿಲ್ಲೆಯ ಸಸರಾಮ್‌ನಲ್ಲಿ ಕಾರ್ಯಕ್ರಮ ನಿಗದಿ ನಳಂದ ಜಿಲ್ಲೆಯಲ್ಲಿ ಬಿಜೆಪಿಗೆ...

ತುಮಕೂರು | ಕೊಳಗೇರಿ ಪ್ರದೇಶಗಳಲ್ಲಿ ಬೀದಿ ಸಭೆಗಳ ಮೂಲಕ ಮತದಾನ ಜಾಗೃತಿಗೆ ನಿರ್ಣಯ

ಕೊಳಗೇರಿ ಜನರ ಮತ, ವಸತಿ ಮತ್ತು ಉದ್ಯೋಗ ಖಾತ್ರಿಗಾಗಿ ಜಾಗೃತಿ ಅಭಿಯಾನ ಕೊಳಗೇರಿ...

ರಾಮನಗರ | ಜಾನುವಾರು ಸಾಗಿಸುತ್ತಿದ್ದ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ; ಪುನೀತ್‌ ಕೆರೆಹಳ್ಳಿ ಬಂಧನಕ್ಕೆ ಆಗ್ರಹ‌

ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಹಿಂದೂ ಕಾರ್ಯಕರ್ತರ ದಾಳಿ ಜಾನುವಾರು ರಕ್ಷಣೆ ಸಂಬಂಧ...