ಫ್ರಾನ್ಸ್‌ | ಟಿಕ್‌ಟಾಕ್, ಟ್ವಿಟರ್, ಇನ್‌ಸ್ಟಾಗ್ರಾಮ್‌ ಬಳಕೆಗೆ ನಿಷೇಧ

Date:

ಸರ್ಕಾರಿ ಅಧಿಕಾರಿಗಳು ಟಿಕ್‌ಟಾಕ್, ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಮ್‌ ಸೇರಿದಂತೆ ‘ಮನರಂಜನಾ ಅಪ್ಲಿಕೇಶನ್‌ಗಳನ್ನು’ ಬಳಸುವುದಕ್ಕೆ ಫ್ರಾನ್ಸ್‌ ಸರ್ಕಾರ ನಿಷೇಧ ಹೇರಿದೆ.

ದೇಶದ ಭದ್ರತೆ, ಗೌಪ್ಯತೆ ಹಾಗೂ ಡೇಟಾ ಸುರಕ್ಷತೆಯ ಕುರಿತ ಕಳವಳಗಳ ಕಾರಣದಿಂದಾಗಿ ಈ ಅಪ್ಲಿಕೇಶನ್‌ಗಳನ್ನು ಸಾರ್ವಜಕನಿಕ ಸೇವೆಯಲ್ಲಿರುವ ಸರ್ಕಾರಿ ನೌಕರರು ತಮ್ಮ ಪೋನ್‌ಗಳಲ್ಲಿ ಬಳಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ತಕ್ಷಣದಿಂದಲೇ ಈ ಆದೇಶ ಜಾರಿಯಾಗಿದೆ ಎಂದು ಅಲ್‌ ಜಝೀರಾ ವರದಿ ಮಾಡಿದೆ.

ಈ ಕುರಿತು ಮಾಹಿತಿ ನೀಡಿರುವ ಫ್ರಾನ್ಸ್‌ನ ಸಾರ್ವಜನಿಕ ಸೇವಾ ಸಚಿವ ಸ್ಟಾನಿಸ್ಲಾಸ್ ಗೆರಿನಿ, “ಆಡಳಿತ ಮತ್ತು ನಾಗರಿಕ ಸೇವೆಯಲ್ಲಿರುವವರ ಸೈಬರ್ ಸುರಕ್ಷತೆಯನ್ನು ಖಾತರಿಪಡಿಸುವ ಸಲುವಾಗಿ, ಸರ್ಕಾರಿ ಉದ್ಯೋಗಿಗಳ ಫೋನ್‌ಗಳಲ್ಲಿ ಟಿಕ್‌ಟಾಕ್‌ನಂತಹ ಮನರಂಜನಾ ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ಸರ್ಕಾರ ನಿರ್ಧರಿಸಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಈ ಮನರಂಜನಾ ಅಪ್ಲಿಕೇಶನ್‌ಗಳು  ದೊಡ್ಡ ಮಟ್ಟದ ಸೈಬರ್‌ ಸುರಕ್ಷತೆ ಮತ್ತು ಡೇಟಾ ರಕ್ಷಣೆಯನ್ನು ಹೊಂದಿಲ್ಲ. ಹೀಗಾಗಿ ಅಧಿಕಾರಿಗಳ ಫೋನ್‌ಗಳಲ್ಲಿನ ಡೇಟಾಗಳು ಸೋರಿಕೆಯಾಗಲೂ ಬಹುದು ಎಂದು  ಸಚಿವರು ಹೇಳಿದ್ದಾರೆ.

ಮೂಲಗಳ ಪ್ರಕಾರ ಟಿಕ್‌ಟಾಕ್‌ ಜೊತೆಗೆ ಟಿಕ್‌ಟಾಕ್, ಟ್ವಿಟರ್ ಇನ್‌ಸ್ಟಾಗ್ರಾಮ್‌ , ನೆಟ್‌ಫ್ಲಿಕ್ಸ್‌ ಜೊತೆಗೆ ಗೇಮಿಂಗ್‌ ಮತ್ತು ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಕೂಡ ನಿಷೇಧಿಸಲಾಗಿದೆ ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸುರಕ್ಷತೆಯ ಕಾರಣ ನೀಡಿ ಮಾರ್ಚ್‌ 17ರಂದು ನ್ಯೂಜಿಲೆಂಡ್‌ನ ಸಂಸದರ ಫೋನ್‌ಗಳಲ್ಲಿ ಟಿಕ್‌ ಟಾಕ್‌ಗೆ ನಿಷೇಧ ಹೇರಲಾಗಿದೆ. ಇದಕ್ಕೂ ಮೊದಲು ಅಮೆರಿಕ, ಬ್ರಿಟನ್‌, ಯುರೋಪಿಯನ್ ಯೂನಿಯನ್‌ಗಳು ಡೇಟಾ ಸೋರಿಕೆಯ ಕಾರಣ ನೀಡಿ ಮೇಲೆ ಸರ್ಕಾರಿ ಅಧಿಕಾರಿಗಳ ಫೋನ್‌ಗಳಲ್ಲಿ ಟಿಕ್‌ಟಾಕ್‌ಗೆ ನಿಷೇಧ ಹೇರಿದೆ.

ತನ್ನ ಬಳಕೆದಾರರ ಮಾಹಿತಿಗಳನ್ನು ಚೀನಾ ಸರ್ಕಾರದೊಂದಿಗೆ ಹಂಚಿಕೊಳ್ಳುತ್ತದೆ ಎಂಬ ಆರೋಪ ಟಿಕ್‌ಟಾಕ್‌ ಅಪ್ಲಿಕೇಶನ್‌ನ ಮಾತೃಸಂಸ್ಥೆಯಾದ ಯುನಿಕಾರ್ನ್ ಬೈಟ್ ಡ್ಯಾನ್ಸ್ ಲಿಮಿಟೆಡ್ ಮೇಲಿದೆ.   ಇದೇ ಕಾರಣದಿಂದಾಗಿಟಿಕ್‌ ಟಾಕ್‌ ಸೇರಿದಂತೆ  ಚೀನಾ ಮೂಲದ 100ಕ್ಕೂ ಅಧಿಕ ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ಈಗಾಗಲೇ ನಿಷೇಧಿಸಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆನಡಾದಲ್ಲಿ ಇನ್ನು ಮುಂದೆ ಪ್ರತಿ ಸಿಗರೇಟಿನ ಮೇಲೂ ಹಾನಿ ಎಚ್ಚರಿಕೆ ಸಂದೇಶ

ಕೆನಡಾ ದೇಶವು 2035 ರ ವೇಳೆಗೆ ರಾಷ್ಟ್ರ ವ್ಯಾಪಿ ತಂಬಾಕು ಸೇವನೆ...

ಮರಳಿ ವಿಶ್ವದ ನಂ.1 ಶ್ರೀಮಂತ ಪಟ್ಟಕ್ಕೇರಿದ ಎಲಾನ್ ಮಸ್ಕ್; ಮತ್ತೆ ಕುಸಿತ ಕಂಡ ಅಂಬಾನಿ, ಅದಾನಿ

ಟೆಸ್ಲಾ, ಸ್ಪೇಸ್ ಎಕ್ಸ್ ಸಿಇಒ ಹಾಗೂ ಟ್ವಟರ್ ಮುಖ್ಯಸ್ಥ ಎಲಾನ್ ಮಸ್ಕ್...

ತೆಲಂಗಾಣ | ಸರ್ಕಾರಿ ಉದ್ಯೋಗ ಪರೀಕ್ಷೆಯಲ್ಲಿ ಚಾಟ್‌ಜಿಪಿಟಿ ಬಳಸಿ ವಂಚನೆ

ಕೃತಕ ಬುದ್ಧಿಮತ್ತೆ ಚಾಟ್‌ಜಿಪಿಟಿ ಬಳಸಿ ಬ್ಲೂಟೂತ್ ಮೂಲಕ ಉತ್ತರ ರವಾನೆ ಪ್ರತಿಯೊಬ್ಬ ಅಭ್ಯರ್ಥಿಗಳಿಂದ...

ನವ್‌ಐಸಿ ಉಪಗ್ರಹ | ಪ್ರಾದೇಶಿಕ ನೇವಿಗೇಶನ್ ವ್ಯವಸ್ಥೆ ಪ್ರಬಲಗೊಳಿಸಿದ ಇಸ್ರೋ

ನವ್ಐಸಿ ಉಪಗ್ರಹ ಸಂಕೇತಗಳು 90 ಡಿಗ್ರಿ ಕೋನದಲ್ಲಿ ಬರುವ ಕಾರಣ ನಿಬಿಡ...