ಸುಡಾನ್‌ | ಸೇನೆ-ಅರೆಸೇನಾ ಪಡೆ ಸಂಘರ್ಷದಲ್ಲಿ ಭಾರತೀಯ ಮೂಲದ ವ್ಯಕ್ತಿ ಸಾವು

Date:

  • ಸುಡಾನ್ ದೇಶದಲ್ಲಿ ‘ದಾಲ್ ಗ್ರೂಪ್’ ಎಂಬ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ
  • ಸೇನೆ, ಅರೆ ಸೇನಾಪಡೆ ನಡುವಿನ ಸಂಘರ್ಷದಲ್ಲಿ 56 ನಾಗರಿಕರು ಸಾವು ಎಂದು ಮಾಧ್ಯಮಗಳು ವರದಿ

ಒಂದು ದಿನದ ಹಿಂದೆ ಸುಡಾನ್ ದೇಶದಲ್ಲಿ ಸೇನೆ ಮತ್ತು ಅರೆಸೇನಾ ಪಡೆ ನಡುವೆ ಸಂಘರ್ಷ ನಡೆಯುತ್ತಿದೆ. ಇದರಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಗುಂಡೇಟಿನಿಂದ ಮೃತಪಟ್ಟಿದ್ದಾರೆ ಎಂದು ಭಾನುವಾರ (ಏಪ್ರಿಲ್ 16) ಮಾಧ್ಯಮಗಳು ವರದಿ ಮಾಡಿವೆ.

ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ವ್ಯಕ್ತಿ ಮೃತಪಟ್ಟಿರುವ ಸುದ್ದಿ ದೃಢಪಡಿಸಿದೆ. ಮೃತ ವ್ಯಕ್ತಿಯನ್ನು ಆಲ್ಬರ್ಟ್ ಆಗಸ್ಟಿನ್ ಎಂದು ಗುರುತಿಸಲಾಗಿದೆ.

“ಆಗಸ್ಟಿನ್ ಅವರು ‘ದಾಲ್ ಗ್ರೂಪ್’ ಎಂಬ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ (ಏಪ್ರಿಲ್ 15) ಆರಂಭವಾದ ಸಂಘರ್ಷದಲ್ಲಿ ಅವರಿಗೆ ಗುಂಡು ತಗುಲಿತ್ತು. ಆಗಸ್ಟಿನ್ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ” ಎಂದು ರಾಯಭಾರ ಕಚೇರಿ ತಿಳಿಸಿದೆ.

“ಮುಂದಿನ ವಿಧಿ ವಿಧಾನಗಳನ್ನು ನೆರವೇರಿಸಲು ಮೃತರ ಕುಟುಂಬ ಮತ್ತು ವೈದ್ಯಕೀಯ ಪ್ರಾಧಿಕಾರಗಳೊಂದಿಗೆ ಕಚೇರಿಯು ನಿರಂತರ ಸಂಪರ್ಕದಲ್ಲಿದೆ” ಎಂದು ರಾಯಭಾರ ಕಚೇರಿಯು ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಮಾಹಿತಿ ನೀಡಿದೆ.

56 ಸಾವು, 500 ಜನರಿಗೆ ಗಾಯ

ದೇಶದ ಖಾರ್ಟೂನ್ ನಗರದಲ್ಲಿ ಸೇನೆ ಹಾಗೂ ಅರೆಸೇನಾ ಪಡೆ ನಡುವೆ ನಡೆದ ಸಂಘರ್ಷದಿಂದ ಕನಿಷ್ಠ 56 ಮಂದಿ ಮೃತಪಟ್ಟಿದ್ದಾರೆ ಎಂದು ಸುಡಾನ್ ಕೇಂದ್ರ ವೈದ್ಯಕೀಯ ಮಂಡಳಿ ಭಾನುವಾರ ತಿಳಿಸಿದೆ.

ಘರ್ಷಣೆಯಲ್ಲಿ 500ಕ್ಕೂ ಹೆಚ್ಚಿನವರಿಗೆ ಗಂಭೀರ ಗಾಯಗಳಾಗಿವೆ. ಘರ್ಷಣೆ ಇನ್ನೂ ಮುಂದುವರಿದಿದ್ದು ಗಾಯಾಳುಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸುಡಾನ್‌ ಮಾಧ್ಯಮಗಳು ತಿಳಿಸಿವೆ.

ರಾಜಧಾನಿಯಾದ ಖಾರ್ಟೂಮ್ ಪ್ರದೇಶದ ನಾನಾಕಡೆ ಸುಡಾನ್‌ ದೇಶದ ಸಶಸ್ತ್ರ ಸೇನೆ ಮತ್ತು ಅರೆಸೈನಿಕ ಪಡೆ ನಡುವೆ ನಡೆಯುತ್ತಿರುವ ಸಮರ ರಾಜಕೀಯ ಸಂಘರ್ಷವಾಗಿದೆ ಎಂದು ಹೇಳಲಾಗಿದೆ.

ಶನಿವಾರ ಬೆಳಿಗ್ಗೆ ಪ್ರಾರಂಭವಾದ ಸಂಘರ್ಷ ಆರಂಭದಲ್ಲಿ ಅಲ್ಲಲ್ಲಿ ಸ್ವಲ್ಪಮಟ್ಟಿಗೆ ನಡೆಯುತ್ತಿತ್ತು. ಆದರೆ ಕಾಲ ಕಳೆದಂತೆ ಸೈನಿಕರ ಸಂಘರ್ಷ ಬರಬರುತ್ತ ತೀವ್ರ ಸ್ವರೂಪ ಪಡೆದುಕೊಂಡಿತು ಎಂದು ಸುಡಾನ್‌ ಮಾಧ್ಯಮಗಳು ವರದಿ ಮಾಡಿವೆ.

ಸಂಘರ್ಷದ ವೇಳೆ ಸಂಭವಿಸಿದ ಗುಂಡಿನ ಚಕಮಕಿಯಲ್ಲಿ ಅನೇಕರು ಮೃತಪಟ್ಟಿದ್ದಾರೆ. ಅದರಲ್ಲಿ ನಾಗರಿಕರ ಸಂಖ್ಯೆ ಮಾತ್ರ ಪ್ರಕಟವಾಗಿದೆ.

ಈ ಸುದ್ದಿ ಓದಿದ್ದೀರಾ? ಜಪಾನ್ | ಭಾಷಣದ ವೇಳೆ ಬಾಂಬ್ ಸ್ಫೋಟ; ಪಾರಾದ ಪ್ರಧಾನಿ ಫ್ಯೂಮಿಯೋ, ಶಂಕಿತನ ಬಂಧನ

ದೇಶದ ಮಿಲಿಟರಿ ಆಡಳಿತದ ವಿರುದ್ಧ ಅರೆ ಸೇನಾಪಡೆ ದಂಗೆ ಎದ್ದಿದೆ. ಖಾರ್ಟೂಮ್‌ನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಅಧ್ಯಕ್ಷರ ನಿವಾಸವನ್ನು ವಶಕ್ಕೆ ಪಡೆಯಲು ಯತ್ನಿಸಲಾಗಿದೆ.

ಈ ಸಂದರ್ಭ ಸುಡಾನ್ ಮಿಲಿಟರಿ ಪ್ರತಿರೋಧ ಒಡ್ಡಿದೆ. ಆಗ ಅರೆ ಸೇನಾಪಡೆ ಮುನ್ನುಗ್ಗಲು ಯತ್ನಿಸಿದ ಕಾರಣ ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆದಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಂಜಾ ಮಾರಾಟ ಆರೋಪ; ಮಾಜಿ ಸಚಿವ ಮುನಿರತ್ನ ವಿರುದ್ಧ ದೂರು

ಬೆಂಗಳೂರಿನ ಆರ್‌ಆರ್‌ ನಗರದಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಆರ್‌ಆರ್‌ ನಗರದ...

ಕೋಲಾರ | ಅನರ್ಹರಿಗೆ ಭೂಮಿ ಮಂಜೂರು ಪ್ರಕರಣ; ಕಾಂಗ್ರೆಸ್‌ ಶಾಸಕನ ವಿರುದ್ಧ ತನಿಖೆಗೆ ಆದೇಶ

ಸರ್ಕಾರಿ ಭೂಮಿಯನ್ನು ಮೃತರೂ ಸೇರಿದಂತೆ ಅನರ್ಹರಿಗೆ ಮಂಜೂರು ಮಾಡಿದ್ದ ಮಾಲೂರು ಕಾಂಗ್ರೆಸ್‌...

ಜೆಡಿಎಸ್-ಬಿಜೆಪಿ ಮೈತ್ರಿ: ಬೇಸರಗೊಂಡ ಹಲವರು ಸಂಪರ್ಕದಲ್ಲಿದ್ದಾರೆ ಎಂದ ಸಚಿವ

ಜೆಡಿಎಸ್‌–ಬಿಜೆಪಿ ಮೈತ್ರಿಯಿಂದಾಗಿ ಎರಡೂ ಪಕ್ಷಗಳಲ್ಲಿ ಹಲವರು ಅಸಮಾಧಾನ ಹೊಂದಿದ್ದಾರೆ. ಅವರಲ್ಲಿ ಕೆಲವರು...