230 ಅಡಿ ಆಳದ ಗುಹೆಯಲ್ಲಿ 500 ದಿನ ಕಳೆದ ಸ್ಪೇನ್‌ ಮಹಿಳೆ

Date:

  • ಮಹಿಳೆಯು ಸ್ಪೇನ್‌ನ ಮ್ಯಾಡ್ರಿಡ್ ಬಳಿಯ ಗ್ರವಾಡಾದ ಗುಹೆಯಲ್ಲಿ ವಾಸ
  • ಗಣಿಯಲ್ಲಿ ಚಿಲಿ ಬೊಲಿವಿಯಾದ ಗಣಿಗಾರರು 66 ದಿನ ಕಳೆದಿದ್ದು ಇದುವರೆಗಿನ ದಾಖಲೆ

ಸುಮಾರು 500 ದಿನವನ್ನು ಒಬ್ಬಂಟಿಯಾಗಿ ಸ್ಪೇನ್ ಮಹಿಳೆ ಸುಮಾರು 230 ಅಡಿ ಆಳದ ಗುಹೆಯಲ್ಲಿ ಕಳೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಬಿಟ್ರೀಜ್ ಫ್ಲಾಮಿನಿ ಎಂಬ 50 ವರ್ಷದ ಪರ್ವತಾರೋಹಿ ಈ ಸಾಧನೆ ಮಾಡಿದ್ದಾರೆ. ಬಿಟ್ರೀಜ್ ಅವರು ಮ್ಯಾಡ್ರಿಡ್ ಬಳಿಯ ಗ್ರವಾಡಾದ ಗುಹೆಯಲ್ಲಿ ತಂಗಿದ್ದರು.

ಬಹಳ ದಿನ ಆಧುನಿಕ ಮಾನವ ಗುಹೆಯಲ್ಲಿ ಇದ್ದು ಯಶಸ್ವಿಯಾಗಿ ಹೊರ ಬಂದಿದ್ದು ಇದೇ ಮೊದಲು. ಇದೊಂದು ವಿಶ್ವದಾಖಲೆ ಎಂದು ರಾಯಿಟರ್ಸ್ ಶನಿವಾರ (ಏಪ್ರಿಲ್ 15) ವರದಿ ಮಾಡಿದೆ.

ಸ್ಪೇನ್ ಮಹಿಳೆ ಬಿಟ್ರೀಜ್ ಫ್ಲಾಮಿನಿ ಗುಹೆಯಿಂದ ಯಶಸ್ವಿಯಾಗಿ ಹೊರಬಂದಿದ್ದು ಅವರನ್ನು ಇತರೆ ಪರ್ವತಾರೋಹಿಗಳು, ಸ್ನೇಹಿತರು ಹಾಗೂ ವಿಜ್ಞಾನಿಗಳು ಶುಕ್ರವಾರ (ಏಪ್ರಿಲ್ 14) ಗ್ರವಾಡಾದಲ್ಲಿ ಸ್ವಾಗತಿಸಿದರು.

ಬಿಟ್ರೀಜ್ ಅವರು ಗುಹೆಯಲ್ಲಿದ್ದ ವೇಳೆ ತಮ್ಮೊಡನೆಯೇ ಮಾತನಾಡಿಕೊಳ್ಳುತ್ತಿದ್ದರು. ಅದು ಅನಿವಾರ್ಯವಾಗಿತ್ತು.ಬಿಟ್ರೀಜ್ ಅವರು ಗುಹೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅಧ್ಯಯನ ಮಾಡಲು ಸುಮಾರು 60 ಪುಸ್ತಕಗಳನ್ನು ತಮ್ಮೊಡನೆ ಕೊಂಡೊಯ್ದಿದ್ದರು.

ತಮ್ಮ ಗುಹೆಯ ವಾಸದ ಕುರಿತು ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಸಹಕಾರಿಯಾಗಲು ಎರಡು ಕ್ಯಾಮರಾಗಳನ್ನು ತಮ್ಮೊಡನೆ ಬಿಟ್ರೀಜ್ ಕೊಂಡೊಯ್ದಿದ್ದರು.

ಗುಹೆಯ ವಾಸ ಬಿಟ್ರೀಜ್ ಅವರಿಗೆ ಮೊದಲು ಅಹಿತಕರವಾಗಿತ್ತು. ತಮ್ಮ ಸಂಚಾರಕ್ಕೆ ಅನುಕೂಲವಾಗಲು ತಲೆಯ ಮೇಲೆ ಲೈಟ್ ಧರಿಸಿದ್ದರು. ಬಿಟ್ರೀಜ್ ಅವರು ಹಲವು ಸವಾಲು ಎದುರಿಸಿ ತಮ್ಮ ಗುಹೆಯ ವಾಸ ಪೂರೈಸಿದ್ದಾರೆ.

2021ರ ನವೆಂಬರ್ 20 ರಂದು ಸ್ಪೇನ್‌ ಮಹಿಳೆ ಬಿಟ್ರಿಜ್ ಫ್ಲಾಮಿನಿ ಅವರು ಗುಹೆ ಪ್ರವೇಶ ಮಾಡಿದ್ದರು.

ಆಗ ಅವರಿಗೆ 48 ವರ್ಷ ವಯಸ್ಸಾಗಿತ್ತು. ತಮ್ಮ ಎರಡು ಜನ್ಮದಿನಗಳನ್ನು ಗುಹೆಯಲ್ಲೇ ಏಕಾಂಗಿಯಾಗಿ ಸ್ಪೇನ್‌ ಮಹಿಳೆ ಬಿಟ್ರೀಜ್ ಅವರು ಆಚರಿಸಿಕೊಂಡಿದ್ದಾರೆ.

ಪುಸ್ತಕ ಬರೆಯಲು ಹಾಗೂ ಗುಹೆಯಲ್ಲಿನ ಮನುಷ್ಯರ ಮನೋವೈಜ್ಞಾನಿಕ ಬದಲಾವಣೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ಎಂದು ಅಧ್ಯಯನ ಮಾಡಲು ಸ್ಪೇನ್ ಮಹಿಳೆ ಬಿಟ್ರೀಜ್ ಅವರು ಈ ಸಾಹಸ ಕೈಗೊಂಡಿದ್ದರು.

ಗುಹೆಯ ಹೊರಗಡೆ ಬಿಟ್ರೀಜ್ ಅವರ ತಂಡದ ಸದಸ್ಯರು ತುರ್ತು ಸಹಾಯಕ್ಕೆ ಮಾತ್ರ ನೆರವು ನೀಡುವ ಸೌಲಭ್ಯ ಕಲ್ಪಿಸಲಾಗಿತ್ತು.

ಬಿಟ್ರೀಜ್ ಅವರು ತಮ್ಮ ಸಾಹಸದಲ್ಲಿ ಕಳೆದ ಎರಡು ತಿಂಗಳಿಂದ ಅವರು ಸಂಪೂರ್ಣವಾಗಿ ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿದ್ದರು ಎಂದು ತಂಡದ ಸದಸ್ಯರು ಹೇಳಿದ್ದಾರೆ.

“ಗುಹೆಯಲ್ಲಿ ಇದ್ದ 500 ದಿನಗಳಲ್ಲಿ ಹೊರಜಗತ್ತಿನಲ್ಲಿ ಏನೆಲ್ಲ ನಡೆದಿದೆ ಎಂಬ ಯಾವುದೇ ಮಾಹಿತಿ ನನಗೆ ತಿಳಿದಿಲ್ಲ” ಎಂದು ಬಿಟ್ರೀಜ್ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

“ವಾಸ್ತವವಾಗಿ ನಾನು ಗುಹೆಯಿಂದ ಹೊರಗೆ ಬರಲು ಯೋಚಿಸಿರಲಿಲ್ಲ. ಆದರೆ ಅಧ್ಯಯನಕ್ಕೆ ಸಹಕರಿಸುವುದು ನನ್ನ ಉದ್ದೇಶವಾಗಿತ್ತು” ಎಂದು ಸ್ಪೇನ್ ಮಹಿಳೆ ಬಿಟ್ರೀಜ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಇಂಧನ ಉತ್ಪಾದನೆ ಕಡಿತದ ಸೌದಿ ಅರೆಬಿಯ ನಿರ್ಧಾರ ಭಾರತಕ್ಕೆ ಹೊರೆ: ಇಂಧನ ಸಂಸ್ಥೆ

ಬಿಟ್ರೀಜ್ ಅವರ ಕುರಿತು ಸ್ಪೇನ್‌ ವಿಜ್ಞಾನಿಗಳು ಅಧ್ಯಯನ ಮಾಡಲಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಹೇಳಿದೆ.

ಚಿಲಿ ಬೊಲಿವಿಯಾದ ಗಣಿಗಾರರು 2,257 ಅಡಿಯ ಆಳದ ಗಣಿಯಲ್ಲಿ 66 ದಿನ ಸಿಲುಕಿ ಹೊರ ಬಂದಿದ್ದು ಇದುವರೆಗಿನ ದಾಖಲೆಯಾಗಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಆತ ನನ್ನ ಮಗನೇ ಇರಬಹುದು, ಆತನನ್ನು ಗಲ್ಲಿಗೇರಿಸಿ’: ಅತ್ಯಾಚಾರ ಆರೋಪಿಯ ತಂದೆ

ಆತ ನನ್ನ ಮಗನಾಗಿರಬಹುದು. ಆದರೆ, ಆತ ಅಪರಾಧಿ. ಆತನನ್ನು ಗಲ್ಲಿಗೇರಿಸಿ ಎಂದು...

ರಾಜಸ್ಥಾನ | ಬೈಕ್ ಅಪಘಾತ : ಮುಸ್ಲಿಂ ಎನ್ನುವ ಕಾರಣಕ್ಕೆ ಯುವಕನನ್ನು ಬಡಿದುಕೊಂದ ಗುಂಪು

ಎರಡು ಬೈಕ್ ಪರಸ್ಪರ ಅಪಘಾತವಾದ ಬಳಿಕ ಮುಸ್ಲಿಂ ಯುವಕನೋರ್ವನನ್ನು ಗುಂಪೊಂದು ದೊಣ್ಣೆ...

ಮಧ್ಯಪ್ರದೇಶ | ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟಂಬಕ್ಕೊಂದು ಉದ್ಯೋಗ: ಸಿಎಂ ಚೌಹಾಣ್

ಈ ವರ್ಷದ ಅಂತ್ಯದಲ್ಲಿ ಮಧ್ಯಪ್ರದೇಶ ಚುನಾವಣೆ ನಡೆಯಲಿದೆ. ಅಲ್ಲಿ ಅಪರೇಷನ್ ಕಮಲಕ್ಕೆ...

ಬ್ರಿಟನ್‌ | ಗುರುದ್ವಾರ ಪ್ರವೇಶಿಸದಂತೆ ಭಾರತೀಯ ರಾಜತಾಂತ್ರಿಕ ಅಧಿಕಾರಿಯನ್ನು ತಡೆದ ಖಲಿಸ್ತಾನಿ ಬೆಂಬಲಿಗರು

ಬ್ರಿಟನ್‌ನಲ್ಲಿರುವ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರನ್ನು ಖಲಿಸ್ತಾನಿ ಬೆಂಬಲಿಗರು ಸ್ಕಾಟ್ಲೆಂಡ್‌ನ...