ಮುಂಬೈ ದಾಳಿ ಆರೋಪಿ ತಹಾವ್ವುರ್‌ ರಾಣಾ ಹಸ್ತಾಂತರಕ್ಕೆ ಅಮೆರಿಕ ಒಪ್ಪಿಗೆ

Date:

  • ತಹಾವ್ವುರ್‌ ಆರೋಪಿಯನ್ನು ಕರೆತರಲು ಸಜ್ಜಾಗಿರುವುದಾಗಿ ಹೇಳಿದ್ದ ಎನ್‌ಐಎ
  • 2008ರಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 166 ಮಂದಿ ಸಾವು

ಮುಂಬೈ ದಾಳಿಗೆ ಕಾರಣವಾಗಿದ್ದ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹಾವ್ವುರ್‌ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಸ್ಥಳೀಯ ನ್ಯಾಯಾಲಯ ಸಮ್ಮತಿಸಿದೆ ಎಂದು ಮಾಧ್ಯಮಗಳು ಗುರುವಾರ (ಮೇ 18) ವರದಿ ಮಾಡಿವೆ.

ಮುಂಬೈ ದಾಳಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರಾಣಾನನ್ನು ತಮಗೆ ಹಸ್ತಾಂತರಿಸಬೇಕು ಎಂದು ಭಾರತ ಅಮೆರಿಕಕ್ಕೆ ಮನವಿ ಮಾಡಿತ್ತು. ತಹಾವ್ವುರ್‌ ರಾಣಾ ಆರೋಪಿಯನ್ನು ಮುಂಬೈ ದಾಳಿ ಪ್ರಕರಣದಲ್ಲಿ ಕಳೆದ ವರ್ಷ ಜೂನ್‌ 10 ರಂದು ಬಂಧಿಸಲಾಗಿತ್ತು. ಆದರೆ ರಾಣಾ ತಲೆಮರೆಸಿಕೊಂಡಿದ್ದಾನೆ ಎಂದು ಭಾರತ ಘೋಷಿಸಿತ್ತು.

ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿರುವ ಡಿಸ್ಟ್ರಿಕ್ಟ್‌ ಕೋರ್ಟ್‌ನಲ್ಲಿ 2021ರ ಜೂನ್‌ನಲ್ಲಿ ಕಡೆಯದಾಗಿ ಈ ಪ್ರಕರಣದ ವಿಚಾರಣೆ ನಡೆದಿತ್ತು. ರಾಣಾನನ್ನು ಭಾರತಕ್ಕೆ ನೀಡಬೇಕು ಎಂದು ಅಮೆರಿಕ ಸರ್ಕಾರ ಮನವಿ ಮಾಡಿತ್ತು. ಕೋರ್ಟ್‌ ಈ ಸಂಬಂಧ ವಿಚಾರಣೆ ನಡೆಸಿ ತನ್ನ ಆದೇಶವನ್ನು ಕಾಯ್ದಿರಿಸಿತ್ತು. ತಹಾವ್ವುರ್‌ ಆರೋಪಿಯನ್ನು ಈಗ ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿ ಕೋರ್ಟ್‌ ಆದೇಶ ನೀಡಿದೆ.

ಲಾಸ್‌ ಏಂಜಲೀಸ್‌ನ ದಕ್ಷಿಣ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಜಾಕ್ವೆಲಿನ್‌ ಚೂಲಿಜಿಯನ್‌ ಅವರು 62 ವರ್ಷದ ರಾಣಾನನ್ನು ಭಾರತ ಹಸ್ತಾಂತರಕ್ಕೆ ಅನುಮತಿ ನೀಡಿ ಮೇ 16ಕ್ಕೆ ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ. ರಾಣಾ ಪರ ವಕೀಲರು ಭಾರತಕ್ಕೆ ಹಸ್ತಾಂತರಿಸುವುದನ್ನು ವಿರೋಧಿಸಿದರು.

2008ರ ನವೆಂಬರ್‌ 26 ರಂದು ಮುಂಬೈನಲ್ಲಿ ಲಷ್ಕರ್‌-ಎ-ತಯ್ಯಬಾ ಭಯೋತ್ಪಾದಕ ಸಂಘಟನೆಯ 10 ಮಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಅಮೆರಿಕದ ಆರು ಮಂದಿ ಸೇರಿ 166 ಜನ ಮೃತಪಟ್ಟಿದ್ದರು. ಈ ವೇಳೆ ಮುಂಬೈನ ತಾಜ್‌ ಹೋಟೆಲ್‌ಗೆ ಭಯೋತ್ಪಾದಕರು ಮುತ್ತಿಗೆ 60 ಗಂಟೆಗಳಿಗೂ ಹೆಚ್ಚು ಕಾಲ ವಶಪಡಿಸಿಕೊಂಡಿದ್ದರು.

ಈ ಸುದ್ದಿ ಓದಿದ್ದೀರಾ? ಲೇಡಿ ಸಿಂಘಂ ಖ್ಯಾತಿಯ ಪೊಲೀಸ್ ಅಧಿಕಾರಿ ಅಪಘಾತದಲ್ಲಿ ಸಾವು

ಈ ದಾಳಿ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ನಡೆಸುತ್ತಿತ್ತು. ಭಯೋತ್ಪಾದಕ ದಾಳಿಗೆ ನಡೆದ ಚರ್ಚೆಗಳು, ನಡೆಸಿದ ಪಿತೂರಿಗಳಲ್ಲಿ ರಾಣಾ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ ಎಂದು ಎನ್‌ಐಎ ಹೇಳಿತ್ತು.

ತಹಾವ್ವುರ್‌ ರಾಣಾ ಆರೋಪಿಯನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತಕ್ಕೆ ಕರೆತರಲು ಸಿದ್ಧವಾಗಿರುವುದಾಗಿ ಎನ್‌ಐಎ ಹೇಳಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಿಟಿಐ ಅಧ್ಯಕ್ಷರಾಗಿ ‘ಪ್ರಜಾವಾಣಿ’ಯ ನಿರ್ದೇಶಕ ಕೆ ಎನ್ ಶಾಂತಕುಮಾರ್ ಆಯ್ಕೆ

ದೇಶದ ಖ್ಯಾತ ಸುದ್ದಿ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ(ಪಿಟಿಐ)ದ...

ಪಾಕಿಸ್ತಾನ | ಮಸೀದಿ ಬಳಿ ಆತ್ಮಹತ್ಯಾ ಬಾಂಬ್ ದಾಳಿ; 52 ಮಂದಿ ಬಲಿ, 130ಕ್ಕೂ ಹೆಚ್ಚು ಜನ ಗಂಭೀರ

ಪಾಕಿಸ್ತಾನದ ಪ್ರಕ್ಷುಬ್ಧ ಪ್ರದೇಶವಾದ ಬಲೂಚಿಸ್ತಾನ್ ಪ್ರಾಂತ್ಯದ ಮಸೀದಿಯೊಂದರ ಬಳಿ ಶುಕ್ರವಾರ ಪ್ರವಾದಿ...

ಗುಜರಾತ್ | ಕಡಲ ಕಿನಾರೆಯಲ್ಲಿ ಅನಾಥವಾಗಿ ಬಿದ್ದಿದ್ದ 800 ಕೋಟಿ ಮೌಲ್ಯದ ಕೊಕೇನ್ ವಶಕ್ಕೆ

ಗಾಂಧಿಧಾಮ್‌ನಿಂದ 30 ಕಿಮೀ ದೂರದಲ್ಲಿರುವ ಮಿಥಿ ರೋಹರ್ ಗ್ರಾಮದಲ್ಲಿ ಬಿದ್ದಿದ್ದ 80...

ಲಕ್ನೋ | ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಎರಡು ತಿಂಗಳ ಮಗು ಸಹಿತ ಇಬ್ಬರ ಮೃತ್ಯು; 14 ಮಂದಿಗೆ ಗಾಯ

ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ನೆಲಮಾಳಿಗೆಯ ಮಹಡಿ ಕುಸಿದ ಪರಿಣಾಮ ನಿದ್ರೆಯಲ್ಲಿದ್ದ ಎರಡು...