ವೊಡಾಫೋನ್‌ ಹೊಸ ಸಿಇಒ ಆಗಮಿಸಿದ ಬೆನ್ನಲ್ಲೇ 11 ಸಾವಿರ ಉದ್ಯೋಗ ಕಡಿತ!

Date:

  • ಜಾಗತಿಕವಾಗಿ ಉದ್ಯೋಗ ಕಡಿತ ಮಾಡಿರುವ ವೊಡಾಫೋನ್‌
  • ನಿರೀಕ್ಷಿತ ಆದಾಯ ಬರದ ಹಿನ್ನೆಲೆ ವೆಚ್ಚ ಕಡಿತಕ್ಕೆ ಪ್ರಯತ್ನ

ವೊಡಾಫೋನ್‌ ಐಡಿಯಾದ ಮಾತೃಸಂಸ್ಥೆ ವೊಡಾಫೋನ್‌ಗೆ ಇಟಲಿಯ ಮಾರ್ಗರೆಟಿ ಡೆಲ್ಲಾ ವ್ಯಾಲೆ ಅವರು ಸಿಇಒ ಆಗಿ ನೇಮಕವಾದ ಒಂದು ತಿಂಗಳ ನಂತರ ಜಾಗತಿಕ ಮಟ್ಟದಲ್ಲಿ 11 ಸಾವಿರ ಉದ್ಯೋಗ ಕಡಿತಕ್ಕೆ ಮುಂದಾಗಿದ್ದಾರೆ.

ಮಾರ್ಗರೆಟಿ ಡೆಲ್ಲಾ ವ್ಯಾಲೆ ಅವರು ಕಳೆದ ಏಪ್ರಿಲ್‌ ತಿಂಗಳಿನಲ್ಲಿ ಸಿಇಒ ಆಗಿ ನೇಮಕಗೊಂಡಿದ್ದರು. ನಿರೀಕ್ಷಿತ ಆದಾಯ ಬರದ ಹಿನ್ನೆಲೆ ವೆಚ್ಚ ಕಡಿತಗೊಳಿಸುವ ದೃಷ್ಟಿಯಿಂದ ಮುಂದಿನ ಮೂರು ವರ್ಷದಲ್ಲಿ 11 ಸಾವಿರ ಉದ್ಯೋಗಿಗಳನ್ನು ತೆಗೆದು ಹಾಕುವ ನಿರ್ಧಾರಕ್ಕೆ ಬಂದಿದ್ದಾರೆ.

ಲಂಡನ್​ನಲ್ಲಿ ಮುಖ್ಯಕಚೇರಿ ಹೊಂದಿರುವ ವೊಡಾಫೋನ್ ಸಂಸ್ಥೆಯಲ್ಲಿ ಸುಮಾರು 95,000 ಉದ್ಯೋಗಿಗಳಿದ್ದಾರೆ. ಅದರಲ್ಲಿ ಈಗ 11,000 ಸಿಬ್ಬಂದಿಗಳನ್ನು ಕಡಿತಗೊಳಿಸಲಾಗುತ್ತಿದೆ. ಅಂದರೆ, ಸಂಸ್ಥೆಯ ಶೇ. 10ಕ್ಕಿಂತಲೂ ಹೆಚ್ಚು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಭಾರತದಲ್ಲಿ 500 ಉದ್ಯೋಗಿಗಳನ್ನು ಮನೆಗೆ ಕಳಿಸಿದ ಅಮೆಜಾನ್

ಜರ್ಮನಿ ವೊಡಾಫೋನ್​ ಸಂಸ್ಥೆಯ ಅತಿದೊಡ್ಡ ಮಾರುಕಟ್ಟೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ಲಾಭಕ್ಕೆ ಹೊಡೆತ ಬಿದ್ದಿದೆ. ಈ ಹಿನ್ನಲೆಯಲ್ಲಿ ಅಲ್ಲಿಯೇ ಹೆಚ್ಚು ಉದ್ಯೋಗ ಕಡಿತವಾಗುವ ಸಾಧ್ಯತೆಯಿದೆ. ವರದಿಯ ಪ್ರಕಾರ ಜರ್ಮನಿಯಲ್ಲಿ 1,300 ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಕೆಲ ತಿಂಗಳ ಹಿಂದೆ ಇಟಲಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ವೊಡಾಫೋನ್‌ ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿತ್ತು.

ಸಂತಸದ ಸುದ್ದಿ ಏನೆಂದರೆ ಭಾರತದಲ್ಲಿರುವ ವೊಡಾಫೋನ್ ಐಡಿಯಾ ಸಂಸ್ಥೆಯಲ್ಲಿ ಉದ್ಯೋಗ ಕಡಿತಗೊಳ್ಳುವುದಿಲ್ಲ. ವೊಡಾಫೋನ್​ನ ಉದ್ಯೋಗಕಡಿತ ಪ್ರಕ್ರಿಯೆ ಯೂರೋಪಿಯನ್ ಮಾರುಕಟ್ಟೆಗೆ ಮಾತ್ರ ಸೀಮಿತವಾಗಬಹುದು.

“ನಮ್ಮ ಸಾಧನೆ ಉತ್ತಮವಾಗಿಲ್ಲ. ಗ್ರಾಹಕರಿಗೆ ಸರಳ ವ್ಯವಸ್ಥೆ ಮತ್ತು ಸಂಸ್ಥೆಯ ಪ್ರಗತಿ ಇವು ನಮ್ಮ ಆದ್ಯತೆಗಳು. ನಮ್ಮ ಸಂಸ್ಥೆಯ ಸಂಕೀರ್ಣತೆ ನೀಗಿಸಿ ಸರಳಗೊಳಿಸಿ ಸ್ಪರ್ಧಾತ್ಮಕವಾಗಿ ರೂಪುಗೊಳ್ಳುತ್ತೇವೆ” ಎಂದು ಹೊಸ ಸಿಇಒ ಮಾರ್ಗರೆಟಿ ಡೆಲ್ಲಾ ವ್ಯಾಲೆ ತಿಳಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಷ್ಟ್ರೀಯ ಭದ್ರತೆ ಹಿನ್ನೆಲೆ; ಟ್ವಿಟರ್ ಸ್ಥಗಿತಗೊಳಿಸಿದ ಪಾಕಿಸ್ತಾನ

ಪಾಕಿಸ್ತಾನ ಆಂತರಿಕ ಸಚಿವಾಲಯವು ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಸಾಮಾಜಿಕ ಮಾಧ್ಯಮ ಎಕ್ಸ್(ಹಳೆಯ...

ಇಸ್ರೇಲ್‌ ಜೊತೆ ಗೂಗಲ್ ಒಪ್ಪಂದ ವಿರೋಧಿಸಿ ಪ್ರತಿಭಟನೆ; ಗೂಗಲ್‌ ಉದ್ಯೋಗಿಗಳ ಬಂಧನ

ಇಸ್ರೇಲ್‌ ಸರ್ಕಾರದೊಂದಿಗೆ ಕೆಲಸ ಮಾಡಲು ಒಪ್ಪಂದ ಮಾಡಿಕೊಂಡಿದ್ದ ಗೂಗಲ್ ಸಂಸ್ಥೆಯ ನಡೆ...

ದುಬೈ ಪ್ರವಾಹ| ಭಾರೀ ಮಳೆ, ಬಿರುಗಾಳಿಯಿಂದ ಸಂಚಾರ ಅಸ್ತವ್ಯಸ್ತ; 28 ಭಾರತದ ವಿಮಾನಗಳು ರದ್ದು

ಮಧ್ಯಪ್ರಾಚ್ಯದ ಆರ್ಥಿಕ ಕೇಂದ್ರವಾದ ದುಬೈನಲ್ಲಿ ಭಾರೀ ಮಳೆ ಮತ್ತು ಚಂಡಮಾರುತ ಕಾಣಿಸಿಕೊಂಡಿದ್ದು...

ಮರುಭೂಮಿ ದೇಶ ದುಬೈನಲ್ಲಿ ಭಾರೀ ಮಳೆಯಿಂದ ಪ್ರವಾಹ; ಒಮಾನ್​ನಲ್ಲಿ 18 ಮಂದಿ ಸಾವು

ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ)ನಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಗೆ ದುಬೈ...