ದಕ್ಷಿಣ ಅಮೆರಿಕದ ಪನಾಮದ ಪೆಸಿಫಿಕ್ ಕರಾವಳಿಯಲ್ಲಿ ಫುಟ್‌ಬಾಲ್ ಪಂದ್ಯ ನಡೆಯುತ್ತಿರುವ ನಡುವೆಯೇ ಭೂಮಿ ಬಲವಾಗಿ ಕಂಪಿಸಿದ ಘಟನೆ ನಡೆದಿದೆ.
ಚೆಂಡಿನತ್ತ ಓಡುತ್ತಿದ್ದ ಓರ್ವ ಆಟಗಾರ ಇದ್ದಕಿದ್ದಂತೆ ನೆಲಕ್ಕೆ ಉರುಳಿ ಬಿದ್ದಿದ್ದು, ಕ್ರೀಡಾಂಗಣದ ಸುತ್ತಲೂ ಅಳವಡಿಸಲಾಗಿದ್ದ ಫ್ಲಡ್‌ಲೈಟ್ ಕಂಬಗಳು ಜೋರಾಗಿ ಅಲುಗಾಡಿರುವುದರ ವಿಡಿಯೋಗಳು ವೈರಲ್ ಆಗಿದೆ. ತಕ್ಷಣವೇ ಮಧ್ಯ ಪ್ರವೇಶಿಸಿದ ರೆಫ್ರಿ ಪಂದ್ಯವನ್ನು ಅರ್ಧಕ್ಕೇ ನಿಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಐಪಿಎಲ್ 2023 | ಗುವಾಹಟಿಯಲ್ಲಿಂದು ಚೊಚ್ಚಲ ಐಪಿಎಲ್ ಪಂದ್ಯ
ರಿಕ್ಷರ್ ಮಾಪಕದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ದೃಢಪಡಿಸಿದೆ. ಆದರೆ ಯಾವುದೇ ಹಾನಿಗಳಾದ ಕುರಿತು ವರದಿಯಾಗಿಲ್ಲ ಎಂದು ರಾಷ್ಟ್ರೀಯ ತುರ್ತು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಚಿರಿಕಿ ಪ್ರಾಂತ್ಯದ ಬೊಕಾ ಚಿಕಾದಿಂದ 72 ಕಿಲೋಮೀಟರ್ ದಕ್ಷಿಣದಲ್ಲಿ ಭೂಕಂಪನದ ಕೇಂದ್ರಬಿಂದು ಎಂದು ಹೇಳಲಾಗಿದೆ.
ಪಂದ್ಯದ ನಡುವೆಯೇ ಭೂಮಿ ಕಂಪಿಸಿದ ಪರಿಣಾಮ ಮೈದಾನದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು