ಭಾರತ–ಆಸ್ಟ್ರೇಲಿಯ ಏಕದಿನ ಸರಣಿ | ಆಸೀಸ್‌ಗೆ ಸುಲಭ ತುತ್ತಾದ ಟೀಂ ಇಂಡಿಯಾ; ಸರಣಿ ಸಮಬಲ

Date:

  • 117 ರನ್‌ಗಳಿಗೆ ಆಲೌಟ್ ಆದ ಟೀಂ ಇಂಡಿಯಾ ಆಟಗಾರರು
  • ಆಸ್ಟ್ರೇಲಿಯ ಪರ ಮಹತ್ವದ 5 ವಿಕೆಟ್ ಪಟೆದ ಮಿಷೆಲ್ ಸ್ಟಾರ್ಕ್

ಆಸ್ಟ್ರೇಲಿಯ ತಂಡ ಭಾರತದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವುದರ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-1 ರೊಂದಿಗೆ ಸಮಬಲ ಸಾಧಿಸಿದೆ.

ವಿಶಾಖಪಟ್ಟಣಂನ ಡಾ ವೈ ಎಸ್ ರಾಜಶೇಖರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ ಅತ್ಯಲ್ಪ 117 ರನ್ನುಗಳ ಸವಾಲನ್ನು ಸ್ಟೀವನ್ ಸ್ಮಿತ್ ನೇತೃತ್ವದ ಆಸೀಸ್ ತಂಡ ಕೇವಲ 11 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟಿತು.

ಸ್ಫೋಟಕ ಆಟವಾಡಿದ ಆರಂಭಿಕ ಆಟಗಾರರಾದ ಮಿಷೆಲ್ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮಿಷಲ್ ಮಾರ್ಷ್ ಕೇವಲ 36 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 66 ರನ್ ಬಾರಿಸಿದರು. ಮಾರ್ಷ್‌ಗೆ ಜೊತೆಯಾದ ಟ್ರಾವೀಸ್ ಹೆಡ್ 30 ಚೆಂಡುಗಳಲ್ಲಿ 10 ಬೌಂಡರಿಗಳೊಂದಿಗೆ 51 ಗಳಿಸುವುದರ ಮೂಲಕ ಅಜೇಯರಾಗಿ ಉಳಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಆಸೀಸ್‌ನ ವೇಗದ ಬೌಲಿಂಗ್ ದಾಳಿಗೆ ಸಿಲುಕಿ 26 ಓವರ್‌ಗಳಲ್ಲಿ 117 ರನ್‌ಗಳಿಗೆ ಆಲೌಟ್ ಆಯಿತು.

ಅಕ್ಷರ್ ಪಟೇಲ್ ಅಜೇಯ 29 ಹಾಗೂ ವಿರಾಟ್ ಕೊಹ್ಲಿ 31 ರನ್ ಕಲೆ ಹಾಕಿದ್ದು ಬಿಟ್ಟರೆ ಉಳಿದ ಆಟಗಾರರು ಯಾರೂ 20ರ ಗಡಿ ದಾಟಲಿಲ್ಲ. ಸೂರ್ಯ ಕುಮಾರ್ ಯಾದವ್ ಎರಡನೇ ಪಂದ್ಯದಲ್ಲೂ ಶೂನ್ಯಕ್ಕೆ ನಿರ್ಗಮಿಸಿದರು. ಹಾರ್ದಿಕ್ ಪಾಂಡ್ಯ 1, ಶುಭ್ಮನ್ ಗಿಲ್ 0, ರಾಹುಲ್ 9, ರೋಹಿತ್ 13, ರವೀಂದ್ರ ಜಡೇಜಾ 16 ಹೀಗೆ ಪ್ರಮುಖ ಆಟಗಾರರು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಕಡೆ ಪರೇಡ್ ನಡೆಸಿದರು.

5 ವಿಕೆಟ್ ಪಡೆದ ಮಿಷೆಲ್ ಸ್ಟಾರ್ಕ್, ಸಿಯಾನ್ ಅಬ್ಬೋಟ್ 23/3 ಹಾಗೂ ಆಡಂ ಝಂಪಾ 13/2 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಆಟಗಾರರರಿಗೆ ಮುಳುವಾದರು.

ಸರಣಿಯ ಮೂರನೇ ಹಾಗೂ ಮಹತ್ವದ ಅಂತಿಮ ಪಂದ್ಯ ಮಾರ್ಚ್ 22ರಂದು ಚೆನ್ನೈನಲ್ಲಿ ನಡೆಯಲಿದೆ.

Suprabha
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು ಟ್ಯಾಕ್ಸಿ ಚಾಲಕನ ಸಲಹೆಗೆ ಕೃತಜ್ಞತೆ ಸಲ್ಲಿಸಿದ ಕ್ರಿಕೆಟಿಗ ಜಾಂಟಿ ರೋಡ್ಸ್

1990 -2000ರ ದಶಕದಲ್ಲಿ ಅತ್ಯುತ್ತಮ ಕ್ಷೇತ್ರ ರಕ್ಷಣೆ ಮೂಲಕ ವಿಶ್ವ ಕ್ರಿಕೆಟ್...

ಆಸ್ಟ್ರೇಲಿಯಾ ವಿಶ್ವಕಪ್ ಗೆಲುವಿನ ಹಿಂದಿದೆ ಮಂಗಳೂರು ಯುವತಿಯ ಪಾತ್ರ

ಆರನೇ ಬಾರಿ ಏಕದಿನ ವಿಶ್ವಕಪ್‌ ಕ್ರಿಕೆಟ್ ಚಾಂಪಿಯನ್‌ ಆಗಿರುವ ಆಸ್ಟ್ರೇಲಿಯಾ ತಂಡದ...

ಕ್ರಿಕೆಟ್‌ನಲ್ಲಿ ಮೀಸಲಾತಿ ಪ್ರಶ್ನೆ ಮತ್ತೆ ಮುನ್ನೆಲೆಗೆ

ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ತಂಡ...