ವಿಶ್ವಕಪ್ | ಶಕೀಬ್, ಶಾಂಟೋ ಆಟಕ್ಕೆ ಒಲಿದ ಜಯ; ಶ್ರೀಲಂಕಾ ಸೆಮಿ ಕನಸು ಬಾಂಗ್ಲಾದಿಂದ ಭಗ್ನ

Date:

ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯಲ್ಲಿ ಶ್ರೀಲಂಕಾ ತಂಡದ ಸೆಮಿಫೈನಲ್‌ ಕನಸು ಭಗ್ನವಾಗಿದೆ. ಟೂರ್ನಿಯ 8ನೇ ಪಂದ್ಯವಾಡಿದ ಲಂಕಾ ಪಡೆ ಬಾಂಗ್ಲಾದೇಶದ ಎದುರು 3 ವಿಕೆಟ್‌ಗಳ ಅಂತರದಿಂದ ಸೋಲು ಅನುಭವಿಸಿದೆ.

ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ 38ನೇ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 280 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಹೊಸೈನ್ ಶಾಂಟೊ ಹಾಗೂ ನಾಯಕ ಶಕೀಬ್‌ ಅಲ್‌ ಹಸನ್ ಅವರ ಸ್ಫೋಟಕ ಆಟದ ನೆರವಿನಿಂದ 41.1 ಓವರ್‌ಗಳಲ್ಲಿ ಜಯವನ್ನು ತನ್ನದಾಗಿಸಿಕೊಂಡಿತು.

ಈಗಾಗಲೇ ಸೆಮಿಫೈನಲ್‌ ಸುತ್ತಿನಿಂದ ಹೊರಬಿದ್ದಿರುವ ಬಾಂಗ್ಲಾ ಟೂರ್ನಿಯ ತನ್ನ ಎರಡನೇ ಗೆಲುವಿನೊಂದಿಗೆ ಶ್ರೀಲಂಕಾದ ಅಳುದುಳಿದ ಆಸೆಯನ್ನು ನುಚ್ಚುನೂರು ಮಾಡಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತಂಜಿದ್‌ ಹಸನ್‌(9) ಹಾಗೂ ಲಿಟ್ಟನ್‌ ದಾಸ್‌ (23) ಪೆವಿಲಿಯನ್‌ಗೆ ತೆರಳಿದ ನಂತರ ಮೂರನೇ ವಿಕೆಟ್‌ಗೆ 169 ರನ್‌ಗಳ ಜೊತೆಯಾಟವಾಡಿದ ಹೊಸೈನ್ ಶಾಂಟೊ ಹಾಗೂ ನಾಯಕ ಶಕೀಬ್‌ ಅಲ್‌ ಹಸನ್‌ ಗೆಲುವಿನ ರೂವಾರಿಯಾದರು.

ಈ ಸುದ್ದಿ ಓದಿದ್ದೀರಾ? ಒಂದೇ ಬಾಲ್‌ಗೆ ಎರಡು ವಿಕೆಟ್: ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ‘ಟೈಮ್ಡ್ ಔಟ್’ಗೆ ಮ್ಯಾಥ್ಯೂಸ್ ಔಟ್

10 ರನ್ನುಗಳಿಂದ ಶತಕ ತಪ್ಪಿಸಿಕೊಂಡ ಹೊಸೈನ್ ಶಾಂಟೊ 101 ಎಸೆತಗಳಲ್ಲಿ 12 ಆಕರ್ಷಕ ಬೌಂಡರಿಗಳೊಂದಿಗೆ 90 ರನ್‌ ಬಾರಿಸಿದರು. ಶಾಂಟೋಗೆ ಉತ್ತಮ ಜೊತೆಯಾಟವಾಡಿದ ಶಕೀಬ್‌ ಅಲ್‌ ಹಸನ್‌ ಕೇವಲ 65 ಚೆಂಡುಗಳಲ್ಲಿ 12 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್‌ನೊಂದಿಗೆ 82 ರನ್‌ ಚಚ್ಚಿದರು.

ಶ್ರೀಲಂಕಾ ಪರ ಏಂಜೆಲೊ ಮ್ಯಾಥ್ಯೂಸ್ 39/2 ಹಾಗೂ ದಿಲ್ಶನ್ ಮಧುಶಂಕ 69/3 ವಿಕೆಟ್ ಪಡೆದರು. ಉಭಯ ತಂಡಗಳಿಗೆ ಟೂರ್ನಿಯಲ್ಲಿ ತಲಾ ಒಂದೊಂದು ಪಂದ್ಯವಿದೆ.

ಚರಿತ್ ಅಸಲಂಕಾ ಶತಕ ವ್ಯರ್ಥ

ಈ ಮೊದಲು ಟಾಸ್‌ ಗೆದ್ದ ಬಾಂಗ್ಲಾದೇಶದ ನಾಯಕ ಶಕೀಬ್‌ ಅಲ್‌ ಹಸನ್‌ ಶ್ರೀಲಂಕಾ ತಂಡವನ್ನು ಬ್ಯಾಟಿಂಗ್‌ ಆಹ್ವಾನಿಸಿದರು. ಬಾಂಗ್ಲಾದೇಶ ಬೌಲರ್​​​ಗಳು ನೀಡಿದ ಸಂಘಟಿತ ಪ್ರದರ್ಶನದ ಹೊರತಾಗಿಯೂ ಲಂಕಾ 49.3 ಓವರ್‌ಗಳಲ್ಲಿ 280 ರನ್​ಗಳನ್ನು ಕಲೆ ಹಾಕಿತು.

5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಎಡಗೈ ಆಟಗಾರ ಚರಿತ್ ಅಸಲಂಕಾ, ಏಕಾಂಗಿ ಹೋರಾಟ ನಡೆಸಿದರು. ಬಾಂಗ್ಲಾ ಬೌಲರ್​​ಗಳನ್ನು ಕಾಡಿದ ಅಸಲಂಕಾ, ಅಮೋಘ ಶತಕ ಸಿಡಿಸಿ ಮಿಂಚಿದರು. 105 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್​ ಸಹಿತ 108 ರನ್​ ಬಾರಿಸಿ ತಂಡ 280 ಕಲೆ ಹಾಕಲು ನೆರವಾದರು. ಅಸಲಂಕಾ ಹೊರತುಪಡಿಸಿದರೆ ಸದೀರ ಸಮರವಿಕ್ರಮ(41), ಧನಂಜಯ ಡಿ ಸಿಲ್ವ(34) ಹಾಗೂ ಪಾತುಂ ನಿಸ್ಸಾಂಕ (41) ರನ್‌ ಗಳನ್ನು ಕೊಡುಗೆ ನೀಡಿದರು.

ಬಾಂಗ್ಲಾ ಪರ ತಂಝಿಮ್ ಹಸನ್ ಸಾಕಿಬ್ 80/3, ಶಕೀಬ್ ಅಲ್ ಹಸನ್ 57/2 ಹಾಗೂ ಶೋರಿಫುಲ್ ಇಸ್ಲಾಂ 51/2 ವಿಕೆಟ್ ಪಡೆದರು.

ಟೈಮ್ಡ್‌ ಔಟಾದ ಏಂಜೆಲೊ ಮ್ಯಾಥ್ಯೂಸ್

146 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಶ್ರೀಲಂಕಾ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಮೊದಲ ಬಾರಿಗೆ ‘ ಟೈಮ್ಡ್‌ ಔಟ್‌ ’ ಮೂಲಕ ಔಟಾದರು. 24.2 ಓವರ್‌ನಲ್ಲಿ ತಂಡದ ಮೊತ್ತ 135/4 ಇದ್ದಾಗ ಸದೀರ ಸಮರವಿಕ್ರಮ ಔಟಾದ ನಂತರ ಆಗಮಿಸಿದ ಏಂಜೆಲೊ ಮ್ಯಾಥ್ಯೂಸ್ ಹೆಲ್ಮೆಟ್‌ ಸಮಸ್ಯೆಯಿಂದಾಗಿ ಡಗೌಟ್‌ನಲ್ಲಿ ಕುಳಿತಿದ್ದ ಸಹ ಆಟಗಾರರಿಗೆ ಸಿಗ್ನಲ್ ಮಾಡಿದರು. ಅಂದ ಹಾಗೆ ಮ್ಯಾಥ್ಯೂಸ್‌ ಅವರ ಹೆಲ್ಮೆಟ್‌ನಲ್ಲಿ ಸ್ಟ್ರಾಪ್ ಇರಲಿಲ್ಲ ಎಂಬುದು ವಿಡಿಯೋದಲ್ಲಿ ಕಾಣಿಸುತ್ತಿತ್ತು. ಹಾಗಾಗಿ ಹೆಲ್ಮೆಟ್‌ ಬದಲಿಸಲು ಅವರು ಬಯಸಿದ್ದರು.

ಎಂಜೆಲೋ ಮ್ಯಾಥ್ಯೂಸ್ ಕ್ರೀಸಿಗೆ ಬರಲು ಮೂರು ನಿಮಿಷಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರು. ಇದೇ ಸಮಯದಲ್ಲಿ ಶಕೀಬ್‌ ಅಲ್‌ ಹಸನ್‌ ಅಂಪೈರ್‌ಗೆ ಟೈಮ್ಡ್‌ ಔಟ್ ಮಾದರಿಯ ಮನವಿಯನ್ನು ಸಲ್ಲಿಸಿದರು. ಮೂರು ನಿಮಿಷ ಸಮಯ ಮೀರದ ಕಾರಣ ಎಂಜೆಲೋ ಮ್ಯಾಥ್ಯೂಸ್ ಅವರನ್ನು ಔಟ್‌ ಎಂದು ತೀರ್ಪು ನೀಡಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಔಟ್ ಮೊದಲ ಬಾರಿಯಾಗಿದೆ. ಅಲ್ಲದೆ ಒಂದೇ ಎಸೆತಕ್ಕೆ ಎರಡು ವಿಕೆಟ್‌ ಪತನವಾದಂತಾಯಿತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೌತಮ್ ಗಂಭೀರ್ ಬೇಡಿಕೆಗಳಿಗೆ ಬಿಸಿಸಿಐ ಒಪ್ಪಿಗೆ: ಟೀಂ ಇಂಡಿಯಾ ಕೋಚ್ ಸ್ಥಾನ ಬಹುತೇಕ ಖಚಿತ

ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕೆಕೆಆರ್‌ನ ಮುಖ್ಯ ಕೋಚ್‌ ಆಗಿ ಕಾರ್ಯ...

NOC ಬಳಿಕವಷ್ಟೇ ಲೀಗ್‌ಗಳಲ್ಲಿ ಅವಕಾಶ: T20 ವಿಶ್ವಕಪ್‌ನಿಂದ ಪಾಕಿಸ್ತಾನ ಹೊರಬಿದ್ದ ಬೆನ್ನಲ್ಲೇ ಹೊಸ ನಿಯಮ

ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹೀನಾಯ...

ಟಿ20 ವಿಶ್ವಕಪ್ | ನೇಪಾಳಕ್ಕೆ ಆಘಾತ; 1 ರನ್‌ನಿಂದ ಸೌತ್ ಆಫ್ರಿಕಾ ವಿರುದ್ಧ ವಿರೋಚಿತ ಸೋಲು

ಏಡೆನ್ ಮಾರ್ಕರಮ್ ನೇತೃತ್ವದ ದಕ್ಷಿಣ ಆಫ್ರಿಕಾವನ್ನು 115 ರನ್‌ಗಳಿಗೆ ಕಟ್ಟಿ ಹಾಕಿದ್ದ...

ಟಿ20 ವಿಶ್ವಕಪ್ | ಐರ್ಲ್ಯಾಂಡ್-ಯುಎಸ್‌ಎ ಪಂದ್ಯ ಮಳೆಗಾಹುತಿ; ಟೂರ್ನಿಯಿಂದಲೇ ಔಟಾದ ಪಾಕಿಸ್ತಾನ!

ಟಿ20 ವಿಶ್ವಕಪ್ 2024ರ ಲೀಗ್ ಹಂತದಲ್ಲೇ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಝಿಲ್ಯಾಂಡ್...