ಏಕದಿನ ವಿಶ್ವಕಪ್ 2023 | ರೋಹಿತ್ ಶರ್ಮಾ ದಾಖಲೆಗಳ ಸ್ಫೋಟಕ ಶತಕ; ಅಫ್ಘಾನ್ ವಿರುದ್ಧ ಭಾರತಕ್ಕೆ ಸುಲಭ ಗೆಲುವು

Date:

ನಾಯಕ ರೋಹಿತ್ ಶರ್ಮಾ ಸ್ಪೋಟಕ ಶತಕದ ನೆರವಿನಿಂದ ಭಾರತ ತಂಡ ಐಸಿಸಿ ಏಕದಿನ ವಿಶ್ವಕಪ್‌ 2023ರ 14ನೇ ಆವೃತ್ತಿಯ 9ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ 8 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತು.  ಈ ಮೂಲಕ ಟೂರ್ನಿಯಲ್ಲಿ 2ನೇ ಜಯ ದಾಖಲಿಸಿದೆ.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ನೀಡಿದ 274 ರನ್‌ಗಳ ಸವಾಲನ್ನು ಬೆನ್ನಟ್ಟಿದ ಟೀಂ ಇಂಡಿಯಾ 35 ಓವರ್‌ಗಳಲ್ಲಿ ಗೆಲುವನ್ನು ತನ್ನದಾಗಿಸಿಕೊಂಡಿತು.

ಇಶಾನ್‌ ಕಿಶನ್‌ ಅವರೊಂದಿಗೆ ಮೊದಲ ವಿಕೆಟ್‌ ಜೊತೆಯಾಟದಲ್ಲಿ  ಭರ್ಜರಿ ಆಟವಾಡಿದ ನಾಯಕ ರೋಹಿತ್ ಶರ್ಮಾ ಸಿಕ್ಸರ್‌, ಬೌಂಡರಿಗಳನ್ನು ಬಾರಿಸಿ ಅಫ್ಘಾನ್‌ ಬೌಲರ್‌ಗಳ ಬೆವರಿಳಿಸಿದರು. 18.4 ಓವರ್‌ಗಳಲ್ಲಿ ಇವರಿಬ್ಬರ ಜೊತೆಯಾಟದಿಂದ 156 ರನ್‌ ಹರಿದು ಬಂತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

45 ರನ್‌ (5 ಬೌಂಡರಿ, 2 ಸಿಕ್ಸರ್)ಗಳಿಸಿ ಇಶಾನ್‌ ಕಿಶನ್‌ ಔಟಾದ ನಂತರ ವೇಗವಾಗಿ ರನ್‌ ಗಳಿಸುವುದನ್ನು ರೋಹಿತ್‌ ಮುಂದುವರಿಸಿದರು. 25.4 ನೇ ಓವರ್‌ನಲ್ಲಿ ರಶೀದ್‌ ಖಾನ್ ಬೌಲಿಂಗ್‌ನಲ್ಲಿ ರೋಹಿತ್ ಬೌಲ್ಡ್ ಆದರು.

131 ರನ್‌ಗಳ ಅದ್ಭುತ ಆಟದಲ್ಲಿ 16 ಆಕರ್ಷಕ ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ ಒಳಗೊಂಡಿದ್ದವು. ರೋಹಿತ್ ಈ ಪಂದ್ಯದಲ್ಲಿ ಮೂರು ವಿಶ್ವದಾಖಲೆಗಳನ್ನು ತನ್ನದಾಗಿಸಿಕೊಂಡರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಸಿಕ್ಸ್, ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ಶತಕ ಹಾಗೂ ವಿಶ್ವಕಪ್‌ನಲ್ಲಿ ವೇಗವಾಗಿ ಶತಕ ಬಾರಿಸಿದ ಭಾರತೀಯ ಆಟಗಾರನೆಂಬ ಮೂರು ದಾಖಲೆಗಳು ರೋಹಿತ್ ಪಾಲಾಯಿತು.

ರೋಹಿತ್‌ ಔಟಾದ ನಂತರ ಆಟ ಮುಂದುವರಿಸಿದ ವಿರಾಟ್‌ ಕೊಹ್ಲಿ ಹಾಗೂ ಶ್ರೇಯಸ್‌ ಅಯ್ಯರ್ ತಂಡವನ್ನು ಜಯದ ದಡಕ್ಕೆ ಮುಟ್ಟಿಸಿದರು.

ಈ ಸುದ್ದಿ ಓದಿದ್ದೀರಾ? ಮೋದಿಯ ತವರು ಗುಜರಾತ್‌ಗೆ ಅತೀ ಹೆಚ್ಚು ಕ್ರೀಡಾ ಅನುದಾನ: ಏಷ್ಯನ್ ಕ್ರೀಡಾಕೂಟದಲ್ಲಿ ಶೂನ್ಯ ಪದಕ

56 ಚೆಂಡುಗಳಲ್ಲಿ 55 ರನ್‌ ಗಳಿಸಿದ ವಿರಾಟ್‌ ಅಟದಲ್ಲಿ 6 ಬೌಂಡರಿಗಳಿದ್ದರೆ, 25 ರನ್‌ ಗಳಿಸಿದ ಶ್ರೇಯಸ್‌ ಅಯ್ಯರ್ ಬ್ಯಾಟಿಂಗ್‌ನಲ್ಲಿ 1 ಸಿಕ್ಸರ್ 1 ಬೌಂಡರಿಯಿತ್ತು.

ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಅಫ್ಘಾನಿಸ್ತಾನ ಬ್ಯಾಟಿಂಗ್ ಆಯ್ದುಕೊಂಡು ನಾಯಕ ಹಶ್ಮತುಲ್ಲಾ ಶಾಹಿದಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಅವರ ತಲಾ ಅರ್ಧಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.

63ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಹಶ್ಮತುಲ್ಲಾ ಶಾಹಿದಿ (82), ಅಜ್ಮತುಲ್ಲಾ ಒಮರ್ಜಾಯ್ (62) ತಲಾ ಅರ್ಧಶತಕ ಸಿಡಿಸಿದರು. ಅಲ್ಲದೆ, ನಾಲ್ಕನೇ ವಿಕೆಟ್​​ಗೆ ಶತಕದ ಜೊತೆಯಾಟವಾಡಿ ಗಮನಾರ್ಹ ಪ್ರದರ್ಶನ ನೀಡಿದರು. ಇದರಿಂದ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ತಲಾ ಅರ್ಧಶತಕ ಸಿಡಿಸಿ ಮಿಂಚುತ್ತಿದ್ದ ಶಾಹಿದಿ, ಒಮರ್ಜಾಯ್​ಗೆ ಹಾರ್ದಿಕ್, ಕುಲ್ದೀಪ್​​​ ಶಾಕ್ ನೀಡಿದರು. ಬಳಿಕ ಮೊಹಮ್ಮದ್ ನಬಿ (19), ನಜೀಬುಲ್ಲಾ ಜದ್ರಾನ್ (2), ರಶೀದ್​​ ಖಾನ್ನ್‌ರನ್ನು (16) ಬುಮ್ರಾ ಔಟ್‌ ಮಾಡಿದರು. ಆ ಮೂಲಕ ಪಂದ್ಯದಲ್ಲಿ 39/4 ವಿಕೆಟ್​ ಪಡೆದು ಯಶಸ್ವಿ ಬೌಲರ್‌ ಎನಿಸಿದರು.

 

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ಯಾರಿಸ್ ಒಲಿಂಪಿಕ್ಸ್‌ನ ಭಾರತದ ಮುಖ್ಯಸ್ಥ ಸ್ಥಾನಕ್ಕೆ ಮೇರಿ ಕೋಮ್ ರಾಜೀನಾಮೆ

ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನ ಭಾರತದ ಮುಖ್ಯಸ್ಥ ಸ್ಥಾನಕ್ಕೆ ಒಲಿಂಪಿಕ್ ಪದಕ ವಿಜೇತೆ...

ಐಪಿಎಲ್ 2024 | ಮುಂಬೈಗೆ ಭರ್ಜರಿ ಗೆಲುವು; ಆರ್‌ಸಿಬಿಗೆ 5ನೇ ಸೋಲು

ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್​ಗಳ...

ಪಾಂಡ್ಯ ಸಹೋದರರಿಗೆ ಕೋಟ್ಯಂತರ ರೂ. ವಂಚನೆ: ಮಲ ಸಹೋದರನ ಬಂಧನ

ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್‌ ಪಾಂಡ್ಯಾ ಅವರಿಗೆ...

ಐಪಿಎಲ್ 2024 | ಕೊಹ್ಲಿ ದಾಖಲೆ ಮುರಿದ ಗಿಲ್; ಬಟ್ಲರ್ ಹಿಂದಿಕ್ಕಿದ ಸ್ಯಾಮ್ಸನ್

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್) ಟೂರ್ನಿಯ ನಿನ್ನೆ(ಏ.10) ರಾಜಸ್ಥಾನ್ ರಾಯಲ್ಸ್ ವಿರುದ್ಧ...