ಏಕದಿನ ವಿಶ್ವಕಪ್ 2023 | ಶ್ರೀಲಂಕಾಕ್ಕೆ 358 ಗುರಿ ನೀಡಿದ ಭಾರತ; ಮೂವರು ಸ್ಫೋಟಕ ಅರ್ಧ ಶತಕ

0
263
ಶ್ರೇಯಸ್ ಅಯ್ಯರ್ ವಿಶ್ವಕಪ್
Shreyas Iyer world cup

ಶ್ರೇಯಸ್‌ ಅಯ್ಯರ್, ಶುಭಮನ್‌ ಗಿಲ್ ಹಾಗೂ ವಿರಾಟ್‌ ಕೊಹ್ಲಿ ಅವರ ಸ್ಫೋಟಕ ಅರ್ಧ ಶತಕದ ನೆರವಿನಿಂದ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ 33ನೇ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾಗೆ 358 ರನ್‌ಗಳ ಬೃಹತ್‌ ಗುರಿ ನೀಡಿದೆ.

ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಶ್ರೀಲಂಕಾ ತಂಡದ ನಾಯಕ ಕುಸಾಲ್‌ ಮೆಂಡೀಸ್ ಭಾರತವನ್ನು ಬ್ಯಾಟಿಂಗ್‌ ಆಹ್ವಾನಿಸಿದರು.

ಬ್ಯಾಟಿಂಗ್‌ ಆರಂಭಿಸಿದ ಮೊದಲ ಓವರ್‌ನಲ್ಲಿ ಲಂಕಾ ವೇಗಿ ಮಧುಶಂಕಾ ನಾಯಕ ರೋಹಿತ್‌ ಶರ್ಮಾ(4) ಅವರನ್ನು ಬೌಲ್ಡ್‌ ಮಾಡಿ ಟೀಂ ಇಂಡಿಯಾಗೆ ಆರಂಭಿಕ ಆಘಾತ ನೀಡಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಂತರ ಎರಡನೇ ವಿಕೆಟ್‌ಗೆ ವಿರಾಟ್‌ ಕೊಹ್ಲಿ ಅತ್ಯುತ್ತಮ 189 ರನ್‌ಗಳ ಜೊತೆಯಾಟವಾಡಿದ ಉದಯೋನ್ಮುಖ ಆಟಗಾರ ಶುಭಮನ್‌ ಗಿಲ್‌ 92 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್‌ನೊಂದಿಗೆ 92 ರನ್‌ ಗಳಿಸಿ 8 ರನ್‌ನಿಂದ ಶತಕ ತಪ್ಪಿಸಿಕೊಂಡರು.

ಕೊಹ್ಲಿ ದಾಖಲೆ

ಶುಭಮನ್‌ ಔಟಾದ ಎರಡು ಓವರ್‌ಗಳ ತರುವಾಯು 88 ರನ್‌ ಗಳಿಸಿದ್ದ ವಿರಾಟ್‌ ಕೊಹ್ಲಿ ಕೂಡ ಔಟಾದರು. 94 ಚೆಂಡುಗಳ ಅವರ ಆಟದಲ್ಲಿ 11 ಬೌಂಡರಿಗಳಿದ್ದವು. ಕೊಹ್ಲಿ ಈ ಪಂದ್ಯದಲ್ಲಿ ಸಂಗಕ್ಕರ, ಶಕೀಬ್‌ ಹಾಗೂ ರೋಹಿತ್‌ ದಾಖಲೆಯನ್ನು ಸರಿಗಟ್ಟಿದರು.

ಈ ಸುದ್ದಿ ಓದಿದ್ದೀರಾ? ಏಕದಿನ ವಿಶ್ವಕಪ್ 2023 | ನಾಲ್ಕು ಸೋಲಿನ ನಂತರ ಬಾಂಗ್ಲಾ ಸೋಲಿಸಿದ ಪಾಕ್

ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ಬಾರಿ 50ಕ್ಕಿಂತ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇ ರಿದರು. ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು 21 ಬಾರಿ ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 13ನೇ ಬಾರಿ ಈ ಸಾಧನೆ ಮಾಡಿದರು.

ಶ್ರೀಲಂಕಾದ ಕುಮಾರ ಸಂಗಕ್ಕರ, ಬಾಂಗ್ಲಾದೇಶದ ಶಕಿಬ್ ಅಲ್ ಹಸನ್ ಮತ್ತು ಭಾರತದ ರೋಹಿತ್ ಶರ್ಮ ಅವರು 12 ಬಾರಿ 50ಕ್ಕಿಂತ ಹೆಚ್ಚು ರನ್‌ಗಳಿಸಿದ್ದಾರೆ.

ಶುಭಮನ್‌ ಹಾಗೂ ವಿರಾಟ್‌ ಪೆವಿಲಿಯನ್‌ಗೆ ತೆರಳಿದ ನಂತರ ಶ್ರೇಯಸ್‌ ಅಯ್ಯರ್ ಬಿರುಸಿನ ಆಟವಾಡಿದರು. 56 ಚೆಂಡುಗಳಲ್ಲಿ 6 ಸಿಕ್ಸರ್‌ ಹಾಗೂ 3 ಬೌಂಡರಿ ಸಹಿತ 82 ಚಚ್ಚಿದರು. ಕೊನೆಯಲ್ಲಿ ರವೀಂದ್ರ ಜಡೇಜಾ 24 ಎಸೆತಗಳಲ್ಲಿ 1 ಸಿಕ್ಸರ್‌ 1 ಬೌಂಡರಿಯೊಂದಿಗೆ 35 ರನ್‌ ಬಾರಿಸಿದರು.

ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 357 ರನ್‌ ಕಲೆ ಹಾಕಿತು.

ಶ್ರೀಲಂಕಾ ಪರ ದಿಲ್ಶನ್ ಮಧುಶಂಕ 80 ರನ್‌ ಕೊಟ್ಟರು ಪ್ರಮುಖ 5 ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾದರು.

LEAVE A REPLY

Please enter your comment!
Please enter your name here