ಏಕದಿನ ವಿಶ್ವಕಪ್ 2023 | ಇಂಗ್ಲೆಂಡ್ ಬೌಲರ್‌ಗಳ ದಾಳಿಗೆ ನಲುಗಿದ ಭಾರತ: ಆಂಗ್ಲರಿಗೆ ಸಾಧಾರಣ ಸವಾಲು

Date:

ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡ ಅಲ್ಪ ಮೊತ್ತಕ್ಕೆ ಮುಗ್ಗರಿಸಿದೆ. ಐದು ಸತತ ಗೆಲುವಿನಿಂದ ಆತ್ಮವಿಶ್ವಾಸದಲ್ಲಿದ್ದ ಟೀಂ ಇಂಡಿಯಾ ಕೊನೆಯ ಸ್ಥಾನದಲ್ಲಿರುವ ಇಂಗ್ಲೆಂಡ್ ವಿರುದ್ಧ 9 ವಿಕೆಟ್ ನಷ್ಟಕ್ಕೆ 229 ರನ್‌ಗಳಷ್ಟೆ ಪೇರಿಸಲು ಸಾಧ್ಯವಾಯಿತು.

ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ತಂಡದ ನಾಯಕ ಜೋಸ್‌ ಬಟ್ಲರ್ ಟೀಂ ಇಂಡಿಯಾವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು.

ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ಆರಂಭದಲ್ಲಿಯೇ ಮುಗ್ಗರಿಸಿತು. ನಾಲ್ಕನೇ ಓವರ್‌ನಲ್ಲಿಯೇ ಉದಯೋನ್ಮುಖ ಆಟಗಾರ ಶುಭಮನ್‌ ಗಿಲ್(9) ಅವರು ವೇಗಿ ಕ್ರಿಸ್ ವೋಕ್ಸ್ ಚೆಂಡನ್ನು ಎದುರಿಸಲು ಹೋಗಿ ಬೌಲ್ಡ್‌ ಆದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಂತರ ಆಗಮಿಸಿದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಒಂದು ರನ್‌ ಕೂಡ ಗಳಿಸದೆ ಡೇವಿಡ್ ವಿಲ್ಲಿ ಬೌಲಿಂಗ್‌ನಲ್ಲಿ ಕೆಟ್ಟ ಹೊಡತಕ್ಕೆ ಮುಂದಾಗಿ ಬೆನ್‌ ಸ್ಟೋಕ್ಸ್‌ಗೆ ಕ್ಯಾಚಿತ್ತು ಶೂನ್ಯಕ್ಕೆ ನಿರ್ಗಮಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಆಗಮಿಸಿದ ಶ್ರೇಯಸ್‌ ಅಯ್ಯರ್‌ ಕೂಡ 16 ಚೆಂಡುಗಳನ್ನು ತಿಂದು ಕೇವಲ 4 ರನ್‌ ಗಳಿಸಿ 12ನೇ ಓವರ್‌ನಲ್ಲಿ ವೋಕ್ಸ್‌ ಬೌಲಿಂಗ್‌ನಲ್ಲಿ ವುಡ್‌ಗೆ ಕ್ಯಾಚಿತ್ತು ಪೆವಿಲಿಯನ್‌ಗೆ ತೆರಳಿದರು.

ರೋಹಿತ್‌ ಶರ್ಮಾ ಅರ್ಧ ಶತಕ

ಶ್ರೇಯಸ್‌ ನಂತರ ಕ್ರೀಸಿಗೆ ಬಂದ ಐದನೇ ಕ್ರಮಾಂಕದ ಭರವಸೆಯ ಆಟಗಾರ ಕನ್ನಡಿಗ ಕೆ ಎಲ್‌ ರಾಹುಲ್ ನಾಯಕ ರೋಹಿತ್‌ ಶರ್ಮಾ ಅವರೊಂದಿಗೆ ಐದನೇ ವಿಕೆಟ್ ಜೊತೆಯಾಟದಲ್ಲಿ 91 ರನ್‌ ಪೇರಿಸಿದರು. ರಾಹುಲ್‌ (39) 31ನೇ ಓವರ್‌ನಲ್ಲಿ ವಿಲ್ಲಿ ಬೌಲಿಂಗ್‌ನಲ್ಲಿ ಬ್ಯಾಟ್‌ ಬೀಸಲು ಹೋಗಿ ಬೈರ್‌ಸ್ಟೋಗೆ ಕ್ಯಾಚಿತ್ತು ನಿರ್ಗಮಿಸಿದರು.

ಪ್ರಮುಖ ಆಟಗಾರರು ಔಟಾದ ನಂತರ ಏಕಾಂಗಿಯಾಗಿ ಹೋರಾಟ ನಡೆಸಿದ ನಾಯಕ ರೋಹಿತ್‌ ಶರ್ಮಾ 37 ಓವರ್‌ನ ಐದನೇ ಎಸೆತದಲ್ಲಿ 87 ರನ್‌ ಗಳಿಸಿ ಸ್ಪಿನ್ನರ್‌ ಅದಿಲ್‌ ರಶೀದ್‌ ಬೌಲಿಂಗ್‌ನಲ್ಲಿ ಲಿವಿಂಗ್‌ ಸ್ಟೋನ್‌ಗೆ ಕ್ಯಾಚ್‌ ನೀಡಿ ಔಟಾದರು. 101 ಚೆಂಡುಗಳ ರೋಹಿತ್ ಆಟದಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್‌ಗಳಿದ್ದವು.

ಈ ಸುದ್ದಿ ಓದಿದ್ದೀರಾ? ಭಾರತದ ಮಾಜಿ ಕ್ರಿಕೆಟಿಗ, ಲೆಜೆಂಡರಿ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ನಿಧನ

ನಂತರದಲ್ಲಿ ಸೂರ್ಯ ಕುಮಾರ್‌ ಯಾದವ್‌ ಮಾತ್ರ ಒಂದಷ್ಟು ಹೊತ್ತು ಕ್ರೀಸಿನಲ್ಲಿದ್ದು 47 ಎಸೆತಗಳಲ್ಲಿ 4 ಬೌಂಡರಿ 1 ಸಿಕ್ಸರ್‌ನೊಂದಿಗೆ 49 ರನ್‌ ಗಳಿಸಿ ಇಂದು ರನ್‌ನಿಂದ ಅರ್ಧ ಶತಕ ವಂಚಿತರಾಗಿ ವಿಲ್ಲಿ ಬೌಲಿಂಗ್‌ನಲ್ಲಿ ಔಟಾದರು.

ಕೊನೆಯಲ್ಲಿ ಜಸ್‌ಪ್ರೀತ್‌ ಬೂಮ್ರಾ (16) ಹಾಗೂ ಕುಲದೀಪ್‌ ಯಾದವ್‌ (9) ರನ್‌ ಗಳಿಸಿದರು.

ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 229 ರನ್‌ ಕಲೆ ಹಾಕಿತು. ಇಂಗ್ಲೆಂಡ್‌ ಪರ ಡೇವಿಡ್‌ ವಿಲ್ಲಾ 45/3, ಅದಿಲ್‌ ರಶೀದ್ 35/2, ಕ್ರಿಸ್‌ ವೋಕ್ಸ್‌ 33/2 ವಿಕೆಟ್‌ ಗಳಿಸಿ ಯಶಸ್ವಿ ಬೌಲರ್‌ಗಳೆನಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೌತಮ್ ಗಂಭೀರ್ ಬೇಡಿಕೆಗಳಿಗೆ ಬಿಸಿಸಿಐ ಒಪ್ಪಿಗೆ: ಟೀಂ ಇಂಡಿಯಾ ಕೋಚ್ ಸ್ಥಾನ ಬಹುತೇಕ ಖಚಿತ

ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕೆಕೆಆರ್‌ನ ಮುಖ್ಯ ಕೋಚ್‌ ಆಗಿ ಕಾರ್ಯ...

NOC ಬಳಿಕವಷ್ಟೇ ಲೀಗ್‌ಗಳಲ್ಲಿ ಅವಕಾಶ: T20 ವಿಶ್ವಕಪ್‌ನಿಂದ ಪಾಕಿಸ್ತಾನ ಹೊರಬಿದ್ದ ಬೆನ್ನಲ್ಲೇ ಹೊಸ ನಿಯಮ

ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹೀನಾಯ...

ಟಿ20 ವಿಶ್ವಕಪ್ | ನೇಪಾಳಕ್ಕೆ ಆಘಾತ; 1 ರನ್‌ನಿಂದ ಸೌತ್ ಆಫ್ರಿಕಾ ವಿರುದ್ಧ ವಿರೋಚಿತ ಸೋಲು

ಏಡೆನ್ ಮಾರ್ಕರಮ್ ನೇತೃತ್ವದ ದಕ್ಷಿಣ ಆಫ್ರಿಕಾವನ್ನು 115 ರನ್‌ಗಳಿಗೆ ಕಟ್ಟಿ ಹಾಕಿದ್ದ...

ಟಿ20 ವಿಶ್ವಕಪ್ | ಐರ್ಲ್ಯಾಂಡ್-ಯುಎಸ್‌ಎ ಪಂದ್ಯ ಮಳೆಗಾಹುತಿ; ಟೂರ್ನಿಯಿಂದಲೇ ಔಟಾದ ಪಾಕಿಸ್ತಾನ!

ಟಿ20 ವಿಶ್ವಕಪ್ 2024ರ ಲೀಗ್ ಹಂತದಲ್ಲೇ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಝಿಲ್ಯಾಂಡ್...