ʻನಿವೃತ್ತಿ ಘೋಷಿಸಲು ಸರಿಯಾದ ಸಮಯʼ ಆದರೆ…; ಗೊಂದಲಗಳಿಗೆ ತೆರೆ ಎಳೆದ ಧೋನಿ

Date:

  • ಮುಂದಿನ ಐಪಿಎಲ್‌ ಆಡುವ ಸುಳಿವು ನೀಡಿದ ಧೋನಿ
  • ʻಜನರ ಪ್ರೀತಿಗಾಗಿ ನನ್ನ ಆಟವನ್ನು ಮುಂದುವರಿಸಬೇಕಿದೆʼ

ಈ ಬಾರಿಯ ಐಪಿಎಲ್‌ ಚಾಂಪಿಯನ್‌ ಯಾರಾಗಲಿದ್ದಾರೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ಮಹೇಂದ್ರ ಸಿಂಗ್‌ ಧೋನಿ ಐಪಿಎಲ್‌ನಿಂದ ನಿವೃತ್ತಿಯಾಗುತ್ತಾರ ಎಂಬ ಪ್ರಶ್ನೆಯು ಟೂರ್ನಿಯುದ್ದಕ್ಕೂ ಎಲ್ಲೆಡೆ ಚರ್ಚೆಯಾಗಿತ್ತು.

ಈ ಕುರಿತ ಎಲ್ಲಾ ಊಹಪೋಹಗಳಿಗೆ ಸೋಮವಾರ ತಡರಾತ್ರಿ ಸ್ವತಃ ಎಂಎಸ್‌ ಧೋನಿ ತೆರೆ ಎಳಿದಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್‌ 16ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌,  ಹಾಲಿ ಚಾಂಪಿಯನ್‌ ಗುಜರಾತ್‌ ಟೈಟನ್ಸ್‌ ತಂಡವನ್ನು 5 ವಿಕೆಟ್‌ಗಳಿಂದ ರೋಚಕವಾಗಿ ಮಣಿಸಿ, 5ನೇ ಬಾರಿಗೆ ಚಾಂಪಿಯನ್‌ ಪಟ್ಟವನ್ನೇರಿತ್ತು.

ಪಂದ್ಯದ ಬಳಿಕ ವೀಕ್ಷಕ ವಿವರಣೆಗಾರ ಹರ್ಷಾ ಭೋಗ್ಲೆ ಜೊತೆಗಿನ ಮಾತುಕತೆಯ ವೇಳೆ ತಮ್ಮ ನಿವೃತ್ತಿ ಕುರಿತ ಎಲ್ಲಾ ಗೊಂದಲಗಳಿಗೂ  ಧೋನಿ ತೆರೆ ಎಳಿದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ʼಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ನಿವೃತ್ತಿ ಘೋಷಿಸಲು ಇದು ನನಗೆ ಸರಿಯಾದ ಸಮಯ. ಆದರೆ, ಈ ವರ್ಷ ನಾನು ಎಲ್ಲೇ ಹೋದರೂ ಸಹ ಅಭಿಮಾನಿಗಳು ನನ್ನ ಮೇಲೆ ಅತಿಯಾದ ಪ್ರೀತಿ ಮತ್ತು ವಾತ್ಸಲ್ಯ ತೋರಿಸಿದ್ದಾರೆ. ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಹೇಳುವುದು ಸುಲಭದ ವಿಷಯ, ಆದರೆ ಮುಂದಿನ ಒಂಬತ್ತು ತಿಂಗಳು ಅಭ್ಯಾಸ ನಡೆಸಿ ಕನಿಷ್ಠ ಒಂದು ಸೀಸನ್ ಆದರೂ ಆಡಬಯಸುತ್ತೇನೆ. ಇದು ನನ್ನ ದೇಹಕ್ಕೆ ಸುಲಭವಾಗುವುದಿಲ್ಲ. ಆದರೆ, ಅಭಿಮಾನಿಗಳಿಗೆ ನನ್ನಿಂದ ಉಡುಗೊರೆಯಾಗಲಿದೆʼ ಎಂದು ಹೇಳಿದ್ದಾರೆ. ಜನರು ತೋರಿದ ಪ್ರೀತಿ ನೋಡಿದರೆ ನನ್ನ ಆಟವನ್ನು ಮುಂದುವರಿಸಬೇಕಿದೆ ಎಂದು ಧೋನಿ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ | ‘ಮ್ಯಾಚ್ ವಿನ್ನರ್’ ಆದ ದಿನೇಶ್ ಕಾರ್ತಿಕ್: ಆರ್‌ಸಿಬಿಗೆ ರೋಚಕ ಜಯ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ದಿನೇಶ್...

ಐಪಿಎಲ್ | ಅಲ್‌ಝಾರಿ ಜೋಸೆಫ್ ದುಬಾರಿ ಬೌಲಿಂಗ್; ಆರ್‌ಸಿಬಿಗೆ ಗೆಲ್ಲಲು 177 ರನ್‌ಗಳ ಗುರಿ ನೀಡಿದ ಪಂಜಾಬ್

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ನ 6ನೇ ಪಂದ್ಯವು ರಾಯಲ್ ಚಾಲೆಂಜರ್ಸ್‌...

ಐಪಿಎಲ್ ಸಂಪೂರ್ಣ ವೇಳಾಪಟ್ಟಿ ಪ್ರಕಟ: ಫೈನಲ್ ಪಂದ್ಯ ದಕ್ಷಿಣ ಭಾರತದಲ್ಲಿ ಆಯೋಜನೆ

ಬಿಸಿಸಿಐ ಇಂದು ಐಪಿಎಲ್‌ 2024ರ ಎರಡನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ....

ಐಪಿಎಲ್ | ಉಮೇಶ್ ಯಾದವ್ ಸಾಹಸ: ಮುಂಬೈ ವಿರುದ್ಧ ಗುಜರಾತ್‌ಗೆ 6 ರನ್‌ಗಳ ರೋಚಕ ಜಯ

ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌ನ 5ನೇ...