ಐಪಿಎಲ್ 2023 | ಫೈನಲ್‌ನಲ್ಲಿ ಧೋನಿ ಪಡೆಗೆ 215 ಗುರಿ ನೀಡಿದ ಗುಜರಾತ್‌ ಟೈಟಾನ್ಸ್, ಚೆನ್ನೈಗೆ ಮಳೆ ಕಾಟ

Date:

ಸಾಯಿ ಸುದರ್ಶನ್ ಸ್ಫೋಟಕ ಬ್ಯಾಟಿಂಗ್ ಹಾಗೂ ವೃದ್ಧಿಮಾನ್ ಸಾಹ ಆಕರ್ಷಕ ಅರ್ಧ ಶತಕದ ನೆರವಿನಿಂದ ಐಪಿಎಲ್‌ 2023ರ 16ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್ ತಂಡ ಚೆನ್ನೈ ಸೂಪರ್‌ ಕಿಂಗ್ಸ್ ತಂಡಕ್ಕೆ 215 ರನ್‌ ಗುರಿ ನೀಡಿದೆ. ಆಟ ಆರಂಭವಾದರೂ ಚೆನ್ನೈಗೆ ಮಳೆ ಕಾಟ ತಡೆಯೊಡ್ಡಿದೆ.

ಟಾಸ್ ಗೆದ್ದ ನಾಯಕ ಧೋನಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಶುಭಮನ್ ಗಿಲ್ ಹಾಗೂ ವೃದ್ದಿಮಾನ್ ಸಾಹ ಜೊತೆಯಾಟಕ್ಕೆ ಚೆನ್ನೈ ಬೌಲರ್‌ಗಳು ಸುಸ್ತಾದರು. ಕಳೆದ ಕೆಲ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದ ವೃದ್ಧಿಮಾನ್‌ ಸಾಹ ಫೈನಲ್‌ನಲ್ಲಿ ಅಬ್ಬರಿಸಿದರು. 

ಆರಂಭದಲ್ಲಿ 20 ಚೆಂಡುಗಳಲ್ಲಿ 7 ಬೌಂಡರಿಗಳೊಂದಿಗೆ  39  ರನ್ ಸಿಡಿಸಿ ಶುಭಮನ್ ಗಿಲ್, ಧೋನಿ ಮಿಂಚಿನ ಸ್ಟಂಪಿಂಗ್‌ಗೆ ಔಟ್ ಆದರು. ಗಿಲ್ ವಿಕೆಟ್ ಪತನ ಬಳಿಕ ಸಾಹ ಹಾಗೂ ಸಾಯಿ ಸುದರ್ಶನ್ ಆರ್ಭಟ ಆರಂಭಗೊಂಡಿತು. ಸಾಹ 39 ಎಸೆತದಲ್ಲಿ 5 ಬೌಂಡರಿ 1 ಸಿಕ್ಸರ್‌ನೊಂದಿಗೆ 54 ರನ್ ಗಳಿಸಿ ಔಟಾದರು. ಆದರೆ ಸಾಯಿ ಸುದರ್ಶನ್ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದರು. 

ಈ ಸುದ್ದಿ ಓದಿದ್ದೀರಾ? ಐಪಿಎಲ್‌ 2023 | ಫೈನಲ್‌ನಲ್ಲಿ ಮತ್ತೆ ಮಳೆ ಬಂದರೆ ಸೂಪರ್‌ ಓವರ್‌? ನಿಯಮ ಏನು ಹೇಳುತ್ತದೆ?

ಬೌಂಡರಿ , ಸಿಕ್ಸರ್ ಆಟದ ಮೂಲಕ ಚೆನ್ನೈ ಬೌಲರ್‌ಗಳ ಬೆವರಿಳಿಸಿದರು. ಶತಕದ ಸಮೀಪದಲ್ಲಿದ್ದಾಗ ಸಾಯಿ ಸುದರ್ಶನ್ ಪತಿರಾಣ ಬೌಲಿಂಗ್‌ ಎಲ್‌ಬಿ ಬಲೆಗೆ ಬಿದ್ದರು. 47 ಎಸೆತದಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ 96 ರನ್ ಸಿಡಿಸಿದರು.

ರಶೀದ್ ಖಾನ್ ಈ ಪಂದ್ಯದಲ್ಲಿ ಅಬ್ಬರಿಸಲಿಲ್ಲ. ಆದರೆ ನಾಯಕ ಹಾರ್ದಿಕ್ ಪಾಂಡ್ಯ 12 ಎಸೆತದಲ್ಲಿ ಅಜೇಯ 21 ರನ್ ಸಿಡಿಸಿದರು. ಅಂತಿಮವಾಗಿ ಗುಜರಾತ್ ಟೈಟಾನ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಪೇರಿಸಿತು.

ಚೆನ್ನೈ ಬ್ಯಾಟಿಂಗ್ ಆರಂಭಗೊಂಡು ಮೊದಲ ಓವರ್‌ನ ಮೂರು ಎಸೆತದಲ್ಲಿ ನಾಲ್ಕು ರನ್‌ ಗಳಿಸಿತ್ತು. ಅಷ್ಟರಲ್ಲೇ ಮಳೆ ಆರಂಭವಾಗಿ ಪಂದ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂದು ಏಷ್ಯಾಕಪ್‌ ಫೈನಲ್‌ | ಭಾರತ-ಶ್ರೀಲಂಕಾ ಹಣಾಹಣಿ

ಏಷ್ಯಾಕಪ್ 2023ರ ಫೈನಲ್ ಪಂದ್ಯವು ಇಂದು (ಸೆ 17) ನಡೆಯುತ್ತಿದ್ದು, ಶ್ರೀಲಂಕಾ...

ಏಷ್ಯಾ ಕಪ್ | ಶುಭ್‌ಮನ್‌ ಗಿಲ್ ಶತಕ ವ್ಯರ್ಥ; ಸಂಘಟಿತ ಹೋರಾಟದಿಂದ ಬಾಂಗ್ಲಾಗೆ ಗೆಲುವು

ಏಷ್ಯಾ ಕಪ್ ಸೂಪರ್‌ 4 ಅಂತಿಮ ಹಾಗೂ ಅಪೌಚಾರಿಕ ಪಂದ್ಯದಲ್ಲಿ ಬಾಂಗ್ಲಾದೇಶ...