ಐಪಿಎಲ್‌ 2023 | ಪ್ರತಿ ಡಾಟ್‌ ಬಾಲ್‌ಗೆ 500 ಗಿಡ ನೆಡಲು ಬಿಸಿಸಿಐ ನಿರ್ಧಾರ

Date:

ಪ್ರತಿನಿತ್ಯ ಐಪಿಎಲ್‌ ಪಂದ್ಯಗಳನ್ನು ಟಿವಿ ಮತ್ತು ಆನ್‌ಲೈನ್‌ನಲ್ಲಿ ವೀಕ್ಷಿಸುತ್ತಿರುವ ಅಭಿಮಾನಿಗಳಿಗೆ ಮಂಗಳವಾರದ ಕ್ವಾಲಿಫೈಯರ್ ಪಂದ್ಯದಲ್ಲಿನ ʻಹೊಸ ಗ್ರಾಫಿಕ್ಸ್‌ʼ ಒಂದು ಕುತೂಹಲ ಮೂಡಿಸಿತ್ತು.  

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದ ವೇಳೆ, ಪ್ರತಿ ಓವರ್‌ನ ಅಂಕಿ ಅಂಶಗಳಲ್ಲಿ ಡಾಟ್ ಬಾಲ್‌ಗಳಾದಾಗ (ಒಂದು ಎಸೆತದಲ್ಲಿ ಯಾವುದೇ ರನ್‌ ಬಾರದೇ ಇದ್ದಾಗ) ‘ಡಾಟ್’ ಚಿಹ್ನೆಯ ಬದಲು ʻಮರದ ಚಿಹ್ನೆʼಗಳನ್ನು ತೋರಿಸಲಾಗುತ್ತಿತ್ತು. ಈ ವಿಶೇಷ ಗ್ರಾಫಿಕ್ಸ್‌ ಎಲ್ಲರ ಗಮನ ಸೆಳೆದಿತ್ತು. ಈ ʻಹಸಿರು ಮರದ ಚಿತ್ರʼ ನೀಡಲು ಮುಖ್ಯ ಕಾರಣ ಬಿಸಿಸಿಐ ಕೈಗೊಂಡಿರುವ ಹೊಸ ಅಭಿಯಾನ.

ಪ್ರತಿ ಡಾಟ್‌ ಬಾಲ್‌ಗೆ 500 ಗಿಡ !

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಐಪಿಎಲ್‌ 16ನೇ ಆವೃತ್ತಿಯಲ್ಲಿನ ಪ್ಲೇ ಆಫ್ ಪಂದ್ಯಗಳಲ್ಲಿನ (ಕ್ವಾಲಿಫೈಯರ್‌-1, ಎಲಿಮಿನೇಟರ್‌, ಕ್ವಾಲಿಫೈಯರ್‌-2 ಹಾಗೂ ಫೈನಲ್‌) ಪ್ರತಿ ಡಾಟ್ ಬಾಲ್‌ಗೆ ತಲಾ 500 ಗಿಡಗಳನ್ನು ನೆಡುವುದಾಗಿ ಬಿಸಿಸಿಐ ಘೋಷಿಸಿದೆ. ಹೀಗಾಗಿ ಡಾಟ್ ಬಾಲ್ ಸ್ಥಾನದಲ್ಲಿ ಹಸಿರು ಮರದ ಚಿತ್ರವನ್ನು ಬಳಸಲಾಗುತ್ತಿದೆ.

ಬಿಸಿಸಿಐನ ಹೊಸ ಅಭಿಯಾನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಕ್ರಮದಿಂದಾಗಿ ಭಾರತವು ಮತ್ತಷ್ಟು ಹಸಿರುಮಯವಾಗಲಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ ಟ್ರೋಲ್‌ ಗೂ ಕಾರಣವಾಗಿದೆ. ಇನ್ನು ಕೆಲವರು ಕೆ.ಎಲ್. ರಾಹುಲ್‌ ಇರುತ್ತಿದ್ದರೆ ಬಿಸಿಸಿಐ, ಹೊಸ ಅಮೆಝಾನ್‌ ಕಾಡು ನಿರ್ಮಿಸಬೇಕಾಗಿ ಬರುತ್ತಿತ್ತು ಎಂದು ಟ್ರೋಲ್‌ ಮಾಡಿದ್ದಾರೆ. ಒಟ್ಟಿನಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಐಪಿಎಲ್‌ ಕ್ರೇಜ್‌ ಮುಂದುವರೆದಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ 2024 | ಸಾಲ್ಟ್ ಅಮೋಘ ಆಟ: 4ನೇ ಗೆಲುವು ದಾಖಲಿಸಿದ ಕೆಕೆಆರ್

ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅಮೋಘ ಆಟದಿಂದ ಕೋಲ್ಕತ್ತಾ ನೈಟ್‌ ರೈಡರ್ಸ್...

ಐಪಿಎಲ್ 2024 | ಕೆಕೆಆರ್‌ಗೆ ಸಾಧಾರಣ ಗುರಿ ನೀಡಿದ ಲಖನೌ

ಸ್ಫೋಟಕ ಆಟಗಾರ ನಿಕಲೋಸ್‌ ಪೂರನ್‌ ಹಾಗೂ ನಾಯಕ ಕೆ ಎಲ್‌ ರಾಹುಲ್‌...

ಐಪಿಎಲ್ | ಹೆಟ್ಮಾಯರ್ ಸ್ಫೋಟಕ ಬ್ಯಾಟಿಂಗ್: ರೋಚಕ ಹಣಾಹಣಿಯಲ್ಲಿ ಪಂಜಾಬ್‌ಗೆ ಸೋಲುಣಿಸಿದ ರಾಜಸ್ಥಾನ

ಚಂಡೀಗಢದ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು...