ಐಪಿಎಲ್‌ 2023 | ಮುಂಬೈ ವಿರುದ್ಧದ ಸೋಲಿನ ಸರಪಳಿ ತುಂಡರಿಸಿದ ಚೆನ್ನೈ

Date:

ಮುಂಬೈ ಇಂಡಿಯನ್ಸ್‌ ತಂಡವನ್ನು ಸಾಮಾನ್ಯ ಮೊತ್ತಕ್ಕೆ ನಿಯಂತ್ರಿಸಿದ ಚೆನ್ನೈ ಸೂಪರ್​ ಕಿಂಗ್ಸ್, ಶನಿವಾರದ ಮೊದಲ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದೆ.

ಚೆನ್ನೈಯ ಚೆಪಾಕ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಮಾಡಿದ್ದ ಮುಂಬೈ ಇಂಡಿಯನ್ಸ್,​ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ​ನಷ್ಟದಲ್ಲಿ 139 ರನ್​ ಗಳಿಸಿತು.

ಸಾಮನ್ಯ ಮೊತ್ತವನ್ನು 17.4 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ ಚೇಸ್‌ ಮಾಡಿದ ಆತಿಥೇಯ ಸಿಎಸ್‌ಕೆ ಮುಂಬೈ ಇಂಡಿಯನ್ಸ್​ ವಿರುದ್ಧ 6 ವಿಕೆಟ್​ಗಳ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಧೋನಿ ಸಾರಥ್ಯದ ಚೆನ್ನೈ, 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2012 ಬಳಿಕ ಚೆಪಾಕ್‌ ಮೈದಾನದಲ್ಲಿ ಮುಂಬೈ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ ದಾಖಲಿಸಿದ ಮೊದಲ ಗೆಲುವು ಇದಾಗಿದೆ. ಇದಕ್ಕೂ ಮೊದಲಿನ 5 ಪಂದ್ಯಗಳಲ್ಲಿ ರೋಹಿತ್‌ ಪಡೆ ಗೆಲುವಿನ ದಾಖಲೆ ಹೊಂದಿತ್ತು.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಪ್ರಸಕ್ತ ಆವೃತ್ತಿಯಲ್ಲಿ ಆಡಿದ್ದ ಕಳೆದ ಮೂರು ಪಂದ್ಯಗಳಲ್ಲಿ ಗೆಲುವು ಕಂಡಿರಲಿಲ್ಲ. ಎರಡು ಸೋಲು ಮತ್ತು ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು . ಇಂದಿನ ಗೆಲುವಿನೊಂದಿಗೆ ಐಪಿಎಲ್‌ 16ನೇ ಆವೃತ್ತಿಯಲ್ಲಿ ಮುಂಬೈ ವಿರುದ್ಧ ಆಡಿದ 2 ಪಂದ್ಯಗಳಲ್ಲಿಯೂ ಚೆನ್ನೈ ಗೆಲುವಿನ ನಗೆ ಬೀರಿದೆ.

ಆರಂಭಿಕರಾದ ಋತುರಾಜ್​ ಗಾಯಕ್ವಾಡ್​ ಮತ್ತು ಡೆವೋನ್​ ಕಾನ್ವೆ ಚೆನ್ನೈ ತಂಡಕ್ಕೆ  ಉತ್ತಮ ಆರಂಭ ಒದಗಿಸಿದರು. ನಾಲ್ಕು ಓವರ್​ ಮುಕ್ತಾಯಕ್ಕೆ 46 ರನ್​ ಒಟ್ಟುಗೂಡಿಸಿದ್ದರು. ಗಾಯಕ್ವಾಡ್ 30 ಮತ್ತು  ಡೆವೋನ್​ ಕಾನ್ವೆ 44 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ರಹಾನೆ 21 ರನ್​ ಮತ್ತು ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದ ಅಂಬಾಟಿ ರಾಯುಡು, ಒಂದು ಸಿಕ್ಸರ್​ ಸೇರಿದಂತೆ 12ರನ್​ ಗಳಿಸಿ ಔಟಾದರು.

ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸಿದ ಶಿವಂ ದುಬೆ, ಮೂರು ಸಿಕ್ಸರ್​ ನೆರವಿನಿಂದ ಅಜೇಯ 26 ರನ್​ ಗಳಿಸಿದರು. ಅಂತಿಮವಾಗಿ ಎಂ.ಎಸ್​ ಧೋನಿ ಒಂಟಿ ಓಟದ ಮೂಲಕ ಗೆಲುವಿನ ರನ್‌ಗಳಿಸಿದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ್ದ ಮುಂಬೈ 14 ರನ್​ ತಲುಪುವಷ್ಟರಲ್ಲಿ ಅಗ್ರ ಕ್ರಮಾಂಕದ  ಮೂರು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಶಾನ್​ ಕಿಶನ್​(7), ಕ್ಯಾಮರೂನ್​ ಗ್ರೀನ್(6)​, ನಾಯಕ ರೋಹಿತ್​ ಶರ್ಮ(0) ತಂಡಕ್ಕೆ ಯಾವುದೇ ಕೊಡುಗೆ ನೀಡಲಿಲ್ಲ.

ಆಸರೆಯಾದ ವದೇರಾ

ಯುವ ಬ್ಯಾಟರ್​ ನೆಹಾಲ್ ವದೇರಾ ಚೊಚ್ಚಲ ಅರ್ಧಶತಕ ಬಾರಿಸಿ ಮುಂಬೈಗೆ ಆಸರೆಯಾದರು. 1 ಸಿಕ್ಸರ್​ ಮತ್ತು 8 ಬೌಂಡರಿ  ನೆರವಿನಿಂದ 51 ಎಸೆತಗಳಲ್ಲಿ 64 ರನ್‌ಗಳಿಸಿದರು. ಸೂರ್ಯಕುಮಾರ್​ ಮೂರು ಬೌಂಡರಿ ನೆರವಿನಿಂದ 26 ರನ್​ ಗಳಿಸಿ ಜಡೇಜಾ ಎಸೆತದಲ್ಲಿ ಕ್ಲೀನ್​ ಬೌಲ್ಡ್​ ಆದರು. ಈ ಜೋಡಿ 4ನೇ ವಿಕೆಟ್​​ಗೆ 55 ರನ್ ಒಟ್ಟುಗೂಡಿಸಿತು.

ಮೂರು ಓವರ್​ ಎಸೆದ ದೀಪಕ್​ ಚಹರ್​, 18 ರನ್​ ಬಿಟ್ಟುಕೊಟ್ಟು 2 ವಿಕೆಟ್​ ಪಡೆದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೆಲುವಿಗೆ ಕಾರಣವಾದ 20 ರನ್ ಸಿಡಿಸಿದ ಧೋನಿ; ಐಪಿಎಲ್‌ನಲ್ಲಿ ವಿಶೇಷ ದಾಖಲೆ

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್‌...

ಐಪಿಎಲ್ 2024 | ಸಾಲ್ಟ್ ಅಮೋಘ ಆಟ: 4ನೇ ಗೆಲುವು ದಾಖಲಿಸಿದ ಕೆಕೆಆರ್

ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅಮೋಘ ಆಟದಿಂದ ಕೋಲ್ಕತ್ತಾ ನೈಟ್‌ ರೈಡರ್ಸ್...

ಐಪಿಎಲ್ 2024 | ಕೆಕೆಆರ್‌ಗೆ ಸಾಧಾರಣ ಗುರಿ ನೀಡಿದ ಲಖನೌ

ಸ್ಫೋಟಕ ಆಟಗಾರ ನಿಕಲೋಸ್‌ ಪೂರನ್‌ ಹಾಗೂ ನಾಯಕ ಕೆ ಎಲ್‌ ರಾಹುಲ್‌...