ಐಪಿಎಲ್ 2023 | ಪ್ಲೇಆಫ್ ಪ್ರವೇಶಿಸಿದ ಚೆನ್ನೈ; 9 ಸೋಲಿನೊಂದಿಗೆ ಟೂರ್ನಿಯಿಂದ ಡೆಲ್ಲಿ ನಿರ್ಗಮನ

Date:

ಐಪಿಎಲ್‌ 2023ರ 16ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ತನ್ನ 14ನೇ ಹಾಗೂ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವುದರೊಂದಿಗೆ ಅಂಕಪಟ್ಟಿಯಲ್ಲಿ 8 ಪಂದ್ಯಗಳನ್ನು ಗೆದ್ದು ಎರಡನೇ ತಂಡವಾಗಿ ಪ್ಲೇಆಫ್ ಪ್ರವೇಶಿಸಿತು.

ದೆಹಲಿಯ ಅರುಣ್ ಜೈಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ನೀಡಿದ 224 ರನ್‌ಗಳ ಬೃಹತ್‌ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್‌ಗಳನ್ನು ಮಾತ್ರ ಗಳಿಸುವುದರೊಂದಿಗೆ 77 ರನ್‌ಗಳ ಭಾರಿ ಅಂತರದಿಂದ ಸೋಲು ಒಪ್ಪಿಕೊಂಡಿತು. ಡೆಲ್ಲಿ ಪರ ನಾಯಕ ಡೇವಿಡ್‌ ವಾರ್ನರ್‌ ಮಾತ್ರ ಬಿರುಸಿನ 86 ರನ್‌ (58 ಎಸೆತ, 5 ಸಿಕ್ಸರ್, 7 ಬೌಂಡರಿ) ಏಕಾಂಗಿ ಹೋರಾಟ ನಡೆಸಿದರು.

ಈಗಾಗಲೇ ಟೂರ್ನಿಯಿಂದ ನಿರ್ಗಮಿಸಿದ್ದ ಡೆಲ್ಲಿ ಕೊನೆಯ ಪಂದ್ಯದಲ್ಲೂ ಸೋಲು ಕಂಡಿತು. ಚೆನ್ನೈ ಪರ ದೀಪಕ್‌ ಚಹರ್ 22/3 ಹಾಗೂ ಮತೀಶಾ ಪತಿರಣ 22/2 ವಿಕೆಟ್‌ ಗಳಿಸುವುದರೊಂದಿಗೆ ಗೆಲುವಿನ ರೂವಾರಿಗಳಾದರು.

ಈ ಸುದ್ದಿ ಓದಿದ್ದೀರಾ? ಹೊರಗೆ ಮಾತನಾಡುವವರ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ; ವಿರಾಟ್ ಕೊಹ್ಲಿ ‌

ಇದಕ್ಕೂ ಮೊದಲು ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಋತುರಾಜ್‌ ಗಾಯಕ್ವಾಡ್‌ (79 ರನ್‌) ಹಾಗೂ ಡೆವೋನ್‌ ಕಾನ್ವೇ (87) ಅವರ ಅರ್ಧಶತಕಗಳ ಬಲದಿಂದ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ತನ್ನ ಪಾಲಿನ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 223 ರನ್‌ಗಳ ಉತ್ತಮ ಮೊತ್ತ ಗಳಿಸಿತು. ಆರಂಭಿಕ ಆಟಗಾರರಾದ ಋತುರಾಜ್ ಗಾಯಕ್ವಾಡ್ ಹಾಗೂ ಡೆವೋನ್ ಕಾನ್ವೆ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರು. ಈ ಜೋಡಿಯನ್ನು ಕಟ್ಟಿಹಾಕಲು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸಾಧ್ಯವಾಗಲಿಲ್ಲ. ಮೊದಲ ವಿಕೆಟ್‌ಗೆ ಈ ಜೋಡಿ ಬರೊಬ್ಬರಿ 141 ರನ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾದರು.

ಚೆನ್ನೈ 14.3 ಓವರ್‌ಗಳಲ್ಲಿ 141 ರನ್‌ಗಳಿಸಿದ್ದಾಗ ಋತುರಾಜ್ 50 ಎಸೆತಗಳಲ್ಲಿ 79 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಹಾಗೂ 7 ಸಿಕ್ಸರ್ ಸೇರಿತ್ತು. ನಂತರ ಬ್ಯಾಟಿಂಗ್‌ಗೆ ಇಳಿದ ಶಿವಂ ದುಬೆ ಕೇವಲ 9 ಎಸೆತಗಳಲ್ಲಿ 22 ರನ್‌ಗಳಿಸಿ ಸ್ಪೋಟಕ ಪ್ರದರ್ಶನದ ನಂತರ ನಿರ್ಗಮಿಸಿದರು. ನಾಯಕ ಎಂಎಸ್ ಧೋನಿ 4 ಎಸೆತಗಳಲ್ಲಿ 5 ರನ್‌ಗಳಿಸಿ ಅಜೇಯವಾಗುಳಿದರೆ, ರವೀಂದ್ರ ಜಡೇಜಾ ಕೇವಲ 7 ಎಸೆತಗಳಲ್ಲಿ 20 ರನ್ ಬಾರಿಸಿ ಅಬ್ಬರಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟೆಸ್ಟ್‌ ಚಾಂಪಿ​ಯ​ನ್‌​ಶಿ​ಪ್‌ ಫೈನಲ್‌ | ಭಾರತಕ್ಕೆ ಕಾದಿದೆ ಆಸೀಸ್‌ ಕಠಿಣ ಸವಾಲು

ಐಪಿಎಲ್‌ ಅಬ್ಬರ ಮುಗಿದಿದೆ. ಎರಡು ತಿಂಗಳುಗಳ ಕಾಲ ಅಭಿಮಾನಿಗಳಿಗೆ ಭರಪೂರ ಮನರಂಜನೆ...

ಪಿಎಸ್‌ಜಿಗೆ ಲಿಯೊನೆಲ್‌ ಮೆಸ್ಸಿ ಸೋಲಿನ ವಿದಾಯ

ವಿಶ್ವಕಪ್‌ ವಿಜೇತ ದಿಗ್ಗಜ ಫುಟ್‌ಬಾಲ್‌ ಆಟಗಾರ ಲಿಯೊನೆಲ್‌ ಮೆಸ್ಸಿ, ಪ್ಯಾರಿಸ್ ಸೇಂಟ್...

ಕರ್ತವ್ಯಕ್ಕೆ ಮರಳಿದ ಕುಸ್ತಿಪಟುಗಳು: ಪ್ರತಿಭಟನೆ ಮುಂದುವರಿಯಲಿದೆ ಎಂದ ಸಾಕ್ಷಿ, ಪುನಿಯಾ

ಭಾರತೀಯ ಕುಸ್ತಿ ಒಕ್ಕೂಟದ ​​ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್...

ಒಡಿಶಾ ರೈಲು ದುರಂತ | ಪೋಷಕರ ಕಳೆದುಕೊಂಡ ಮಕ್ಕಳಿಗೆ ಸೆಹ್ವಾಗ್, ಗೌತಮ್‌ ಅದಾನಿ ಸಹಾಯಹಸ್ತ; ಉಚಿತ ಶಿಕ್ಷಣ 

ಒಡಿಶಾದಲ್ಲಿ ಶುಕ್ರವಾರ ಸಂಭವಿಸಿದ  ಭೀಕರ ರೈಲು ಅಪಘಾತದಲ್ಲಿ ಕನಿಷ್ಠ 275 ಮಂದಿ...