ಟಿ20 ಭಾರತ – ಪಾಕ್ ಟಿಕೆಟ್ ಬೆಲೆ 1.46 ಕೋಟಿ ರೂ.ಗೆ ಮಾರಾಟ?

Date:

ಭಾರತ – ಪಾಕ್‌ ಪಂದ್ಯವೆಂದರೆ ಎರಡೂ ದೇಶಗಳ ಅಭಿಮಾನಿಗಳಿಗೆ ಭರ್ಜರಿ ಮನರಂಜನೆಯ ಔತಣಕೂಟ. ಬೇರೆ ತಂಡಗಳ ಪಂದ್ಯಗಳಿಂತ ಇವೆರೆಡು ದೇಶಗಳ ಪಂದ್ಯಗಳಿಗೆ ಕ್ರೀಡಾಭಿಮಾನಿಗಳು ಹುಚ್ಚೆದ್ದು ಆಸ್ವಾದಿಸುತ್ತಾರೆ. 8ನೇ ಆವೃತ್ತಿಯ ಟಿ20 ವಿಶ್ವಕಪ್‌ ಕ್ರಿಕೆಟ್ ಟೂರ್ನಮೆಂಟ್‌ ಆರಂಭವಾಗಿ ಈಗಾಗಲೇ ಒಂದು ವಾರದ ಮೇಲಾಗಿದೆ. ಆವೃತ್ತಿಯ 19ನೇ ಪಂದ್ಯ ಭಾರತ ಹಾಗೂ ಪಾಕಿಸ್ತಾನದ ನಡುವೆ ಇಂದು(ಜೂನ್‌ 9) ಅಮೆರಿಕದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

34 ಸಾವಿರ ಆಸನಗಳ ಸಾಮರ್ಥ್ಯವುಳ್ಳ ಈ ಕ್ರೀಡಾಂಗಣದಲ್ಲಿ ಟಿಕೆಟ್‌ಗಳು ಬಹುತೇಕ ಮಾರಾಟವಾಗಿಬಿಟ್ಟಿವೆ. ಇಲ್ಲಿನ ಟಿಕೆಟ್‌ಗಳ ಬೆಲೆ ಕನಿಷ್ಠ 300 ಡಾಲರ್‌ಗಳಿಂದ ಶುರುವಾಗಿ ಗರಿಷ್ಠ 10 ಸಾವಿರ ಡಾಲರ್‌ಗಳಿಗೂ ಇವೆ. 10 ಸಾವಿರ ಡಾಲರ್‌ಗಳ ಬೆಲೆ ಭಾರತೀಯ ರೂಪಾಯಿಗಳಲ್ಲಿ 8.35 ಲಕ್ಷಗಳವರೆಗೂ ದಾಟುತ್ತದೆ.

ಇಲ್ಲೊಂದು ಆಶ್ಚರ್ಯಕರ ಸಂಗತಿ ಎಂದರೆ ಭಾರತ – ಪಾಕ್‌ ಇಂದಿನ ಪಂದ್ಯದ ಒಂದು ಟಿಕೆಟ್ ಬೆಲೆಯನ್ನು 1,75,400 ಡಾಲರ್‌ಗೆ ಮಾರಾಟ ಮಾಡಲಾಗುತ್ತಿದೆ. ಭಾರತೀಯ ರೂಪಾಯಿಗಳಲ್ಲಿ ಇದರ ಬೆಲೆ ಬರೋಬ್ಬರಿ 1.46 ಕೋಟಿ ರೂ. ದಾಟುತ್ತದೆ. ಅಮೆರಿಕದ ‘ಸ್ಟಬ್‌ಹಬ್‌’ ಎಂಬ ಆನ್‌ಲೈನ್‌ ವೇದಿಕೆಯಲ್ಲಿ ಸೆಕ್ಷನ್‌ 252ರ 20ನೇ ಸಾಲಿನ 30ನೇ ಸಂಖ್ಯೆಯ ಆಸನವನ್ನು 1.46 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಮಾಧ್ಯಮಗಳ ವರದಿಗಳಂತೆ ಈ ಟಿಕೆಟ್‌ಅನ್ನು ಇನ್ನು ಯಾರೊಬ್ಬರು ಖರೀದಿ ಮಾಡಿರಲಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಭಾರತ – ಪಾಕ್ ಟಿ20 ವಿಶ್ವಕಪ್ ಪಂದ್ಯದ ಪ್ರತಿ ಟಿಕೆಟ್ ಬೆಲೆ ಬರೋಬ್ಬರಿ 17 ಲಕ್ಷ ರೂ!

‘ಸ್ಟಬ್‌ಹಬ್‌’ ಅಮೆರಿಕದ ಟಿಕೆಟ್‌ ಬದಲಾವಣೆ, ಮರು ಮಾರಾಟ ಮಾಡುವ ಕಾನೂನುಬದ್ಧ ವೆಬ್‌ಸೈಟ್‌ ಆಗಿದೆ. ಈ ವೆಬ್‌ಸೈಟ್‌ನಲ್ಲಿ ಸೆಕ್ಷನ್‌ 252ರ 20ನೇ ಸಾಲಿನ 30ನೇ ಸಂಖ್ಯೆಯ ಆಸನವನ್ನು 1,75,400 ಡಾಲರ್‌ಗೆ ನಿಗದಿಪಡಿಸಲಾಗಿದೆ.

ಆದರೆ ವಾಸ್ತವವಾಗಿ ಸೆಕ್ಷನ್‌ 252ರ 20ನೇ ಸಾಲಿನ ಟಿಕೆಟ್‌ ಬೆಲೆಗಳು 500 ಡಾಲರ್‌ ದಾಟುವುದಿಲ್ಲ. ನಿಗದಿದ ಬೆಲೆಗೆ ಟಿಕೆಟ್‌ ಖರೀದಿಸಿದ ಆಸಾಮಿ 1,75,400 ಡಾಲರ್‌ಗೆ ‘ಸ್ಟಬ್‌ಹಬ್‌’ ಮಾರಾಟಕ್ಕಿಟ್ಟಿದ್ದಾನೆ. ಇದೇ ವೆಬ್‌ಸೈಟ್‌ನಲ್ಲಿ 21 ನೇ ಸಾಲಿನ ಟಿಕೆಟ್ 693 ಡಾಲರ್‌ ಇದ್ದರೆ, 19ನೇ ಸಾಲಿನ ಟಿಕೆಟ್ 801 ಡಾಲರ್‌ ಇದೆ. ಸೆಕ್ಷನ್‌ 101ರ ಟಿಕೆಟ್ಅನ್ನು 18 ಸಾವಿರ ಡಾಲರ್‌ಗೆ ನಿಗದಿ ಪಡಿಸಲಾಗಿತ್ತು.

ಐಸಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಶುಕ್ರವಾರದ ರಾತ್ರಿಯ ವೇಳೆಗೆ 1500 ಡಾಲರ್‌ ಹಾಗೂ 10 ಸಾವಿರ ಡಾಲರ್‌ನ ಕೆಲವೇ ಟಿಕೆಟ್‌ಗಳು ಮಾತ್ರ ಲಭ್ಯವಿದ್ದವು. 10 ಸಾವಿರ ಡಾಲರ್‌ ಟಿಕೆಟ್‌ನಲ್ಲಿ ಉಚಿತ ಪಾರ್ಕಿಂಗ್‌ ಜೊತೆಗೆ ಅನಿಯಮಿತ ಉಪಹಾರ ಹಾಗೂ ಮದ್ಯದ ವ್ಯವಸ್ಥೆಯಿರುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆಲವೇ ತಿಂಗಳ ಅಂತರದಲ್ಲಿ ಏಳು-ಬೀಳು ಎದುರಿಸಿ ಗೆದ್ದು ಬಂದ ಹಾರ್ದಿಕ್ ಪಾಂಡ್ಯ!

ಅಂದು ಡಿಸೆಂಬರ್ 19, 2023. ಐಪಿಎಲ್ 2024ರ ಪಂದ್ಯಾವಳಿಯ ಹರಾಜಿನ ಸಮಯ....

ಚಾಂಪಿಯನ್ಸ್ ಟ್ರೋಫಿಯ ಪಾಕ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಯಾಣ ಅಸಂಭವ; ಹೈಬ್ರಿಡ್ ಮಾದರಿ ಸರಣಿ ಸಾಧ್ಯತೆ

ಮುಂದಿನ ವರ್ಷ 2025ರ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ಚಾಂಪಿಯನ್ಸ್‌ ಟ್ರೋಫಿ...

ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗೆಲುವು: 2-1 ಮುನ್ನಡೆ ಪಡೆದ ಟೀಂ ಇಂಡಿಯಾ

ಟೀಂ ಇಂಡಿಯಾ ತಂಡ ಜಿಂಬಾಬ್ವೆ ವಿರುದ್ಧ 23 ರನ್‌ಗಳ ಗೆಲುವು ಸಾಧಿಸಿದ್ದು,...

ಗೌತಮ್ ಗಂಭೀರ್: ಖ್ಯಾತಿಗಿಂತ ಹೆಚ್ಚು ವಿವಾದಗಳನ್ನೇ ಉಸಿರಾಡಿದ ಕ್ರಿಕೆಟಿಗನಿಗೆ ಹೊಣೆಗಾರಿಕೆಯ ಹುದ್ದೆ

ಕಪಿಲ್‌ ದೇವ್‌, ಅಜಿತ್‌ ವಾಡೇಕರ್, ಪಿ ಆರ್‌ ಮಾನ್‌ಸಿಂಗ್‌, ಗ್ಯಾರಿ ಕ್ರಿಸ್ಟನ್‌,...