ಐಪಿಎಲ್ 16ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಋತುರಾಜ್ ಗಾಯಕ್ವಾಡ್ ಅವರ ಭರ್ಜರಿ ಆಟದೊಂದಿಗೆ ಕಳೆದ ಬಾರಿಯ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡಕ್ಕೆ 179 ರನ್‌ಗಳ ಗುರಿ ನೀಡಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಚೆನ್ನೈ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆರಂಭದಲ್ಲಿಯೇ ಎರಡು ವಿಕೆಟ್ ಕಳೆದುಕೊಂಡ ಚೆನ್ನೈ ಆತಂಕಕ್ಕೊಳಗಾಯಿತು. ವೇಗದ ಬೌಲರ್ ಶಮಿ, ಡೆವೊನ್ ಕಾನ್ವೆ ಅವರನ್ನು ಬೌಲ್ಡ್ ಮಾಡಿದರೆ, ಸ್ಪಿನ್ನರ್ ರಶೀದ್ ಖಾನ್ ಮೋಹಿನ್ ಅಲಿ, ಬೆನ್ ಸ್ಟೋಕ್ಸ್ ಅವರ ವಿಕೆಟ್ ಕಬಳಿಸಿದರು.
ಋತುರಾತ್ ಸ್ಫೋಟಕ ಬ್ಯಾಟಿಂಗ್
ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಅವರ ಸ್ಫೋಟಕ ಆಟದ ಮೂಲಕ ಗುಜರಾತ್ ಬೌಲರ್‌ಗಳನ್ನು ದಂಡಿಸಿದರು. ಕೇವಲ 50 ಎಸೆತಗಳಲ್ಲಿ 4 ಬೌಂಡರಿ ಹಾಗೂ 9 ಅಮೋಘ ಸಿಕ್ಸರ್‌ನೊಂದಿಗೆ 92 ರನ್ ಚಚ್ಚಿದರು. ರುತುರಾಜ್ ಹೊರತುಪಡಿಸಿ ಮೊಯಿನ್ ಆಲಿ 23, ಶಿವಂ ದುಬೆ 19 ಹಾಗೂ ನಾಯಕ ಧೋನಿ 14 ರನ್ ಗಳಿಸಿದರು.
ಗುಜರಾತ್ ಪರ ರಶೀದ್ ಖಾನ್ 26/2, ಅಲ್ಜಾರಿ ಜೊಸೆಫ್ 33/2 ,ಮೊಹಮ್ಮದ್ ಶಮಿ 29/2 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು. ಅಂತಿಮವಾಗಿ ಚೆನ್ನೈ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಕಲೆ ಹಾಕಿತು.
ತಂಡಗಳ ಹನ್ನೊಂದರ ಬಳಗ
ಚೆನ್ನೈ ಸೂಪರ್ ಕಿಂಗ್ಸ್:
ಡೇವೋನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಬೆನ್ ಸ್ಟೋಕ್ಸ್, ಅಂಬಾಟಿ ರಾಯುಡು, ಮೊಯಿನ್ ಆಲಿ, ಶಿವಂ ದುಬೆ, ಎಂ.ಎಸ್ ಧೋನಿ(ನಾಯಕ), ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ರಾಜವರ್ಧನ್ ಹಂರ್ಗೇಕಾರ್
ಗುಜರಾತ್ ಟೈಟಾನ್ಸ್
ಶುಭಮನ್ ಗಿಲ್, ವೃದ್ಧಿಮಾನ್ ಸಾಹ, ಕೇನ್ ವಿಲಿಯಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ರಾಹುಲ್ ಟಿವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಜೋಶುವಾ ಲಿಟಲ್, ಯಶ್ ದಯಾಳ್, ಅಲ್ಜಾರಿ ಜೊಸೆಫ್
ಭರ್ಜರಿ ಡ್ಯಾನ್ಸ್ ಮಾಡಿದ ರಶ್ಮಿಕಾ
ಪಂದ್ಯದ ಆರಂಭಕ್ಕೂ ಮುನ್ನ ಅದ್ದೂರಿಯಾಗಿ ಉದ್ಘಾಟನೆಗೊಂಡ ಐಪಿಎಲ್‌ನ 16ನೇ ಆವೃತ್ತಿಗೆ ವರ್ಣ ರಂಜಿತ ಚಾಲನೆ ದೊರೆಯಿತು. ದಕ್ಷಿಣ ಭಾರತದ ಬೆಡಗಿಯರಾದ ರಶ್ಮಿಕಾ ಮಂದಣ್ಣ ಹಾಗೂ ತಮನ್ನಾ ಭಾಟಿಯ ಮನಮೋಹಕ ನೃತ್ಯದ ಮೂಲಕ ರಂಜಿಸಿದರು. ರಶ್ಮಿಕಾ ಇತ್ತೀಚಿಗಷ್ಟೆ ಅಸ್ಕರ್ ಗೆದ್ದು ಆರ್‌ಆರ್‌ಆರ್ ಚಿತ್ರದ ನಾಟುನಾಟು ಹಾಡಿಗೆ ನೃತ್ಯವನ್ನು ಮಾಡಿ ಕ್ರೀಡಾಂಗಣದಲ್ಲಿ ನೆರದಿದ್ದ ಪ್ರೇಕ್ಷಕರಿಗೆ ರಸದೌತಣ ನೀಡಿದರು.
ಅರಜಿತ್ ಸಿಂಗ್ ಹಾಡಿಗೆ ಮನಸೋತ ಪ್ರೇಕ್ಷಕರು
ಬಾಲಿವುಡ್ನ ಖ್ಯಾತ ಸಂಗೀತಗಾರ ಅರಿಜಿತ್ ಸಿಂಗ್ ಹಾಡಿನ ಮೂಲಕ ಐಪಿಎಲ್ 2023ರ 16ನೇ ಸೀಸನ್ ಅದ್ಧೂರಿಯಾಗಿ ಆರಂಭವಾಗಿದೆ. ತಮ್ಮ ಮಧುರವಾದ ಹಾಡುಗಳ ಮೂಲಕ ಅರಿಜಿತ್ ಸಿಂಗ್ ಮೋದಿ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಕ್ರಿಕೆಟ್ ಅಭಿಮಾನಿಗಳನ್ನು ಮನಸೂರೆಗೊಳಿಸಿದರು.