ಐಪಿಎಲ್‌ 2023 | ಹೈದರಾಬಾದ್‌ ಗೆಲುವಿಗೆ 204 ರನ್‌ಗಳ ಕಠಿಣ ಗುರಿ

Date:

ಆರಂಭಿಕರಾದ ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್ ಹಾಗೂ ನಾಯಕ ಸಂಜು ಸ್ಯಾಮ್ಸನ್ ಗಳಿಸಿದ ಅರ್ಧಶತಕಗಳ ಬಲದಲ್ಲಿ ಮಿಂಚಿದ ಸನ್​ರೈಸರ್ಸ್ ಹೈದರಾಬಾದ್, ಐಪಿಎಲ್‌ನ 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್  ತಂಡಕ್ಕೆ 204 ರನ್‌ಗಳ ಗೆಲುವಿನ ಗುರಿ ಮುಂದಿಟ್ಟಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಟಾಸ್‌ ಗೆದ್ದ ಆತಿಥೇಯ ತಂಡ, ರಾಯಲ್ಸ್‌ ಪಡೆಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಆದರೆ ಹೈದರಾಬಾದ್​ ಬೌಲಿಂಗ್‌ ಪಡೆಯನ್ನು ಧೂಳಿಪಟ ಮಾಡಿದ ರಾಯಲ್ಸ್‌ ಆರಂಭಿಕರು ಮೊದಲ 6 ಓವರ್‌ಗಳಲ್ಲೇ 85 ರನ್‌ಗಳಿಸಿದ್ದರು.

ಹೈದರಾಬಾದ್​ ವಿರುದ್ಧ ಕೇವಲ 20 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ ಅರ್ಧಶತಕ ಪೂರ್ತಿಗೊಳಿಸಿದ ಜಾಸ್‌ ಬಟ್ಲರ್‌, ಮತ್ತು ಜೈಸ್ವಾಲ್‌ ತಲಾ 54 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು.

ಮೂರನೇ ಕ್ರಮಾಂಕದಲ್ಲಿ ಬಂದ ನಾಯಕ ಸಂಜು ಸ್ಯಾಮ್ಸನ್‌ ಸಹ ಆರಂಭದಲ್ಲೇ ಬಿರುಸಿನ ಹೊಡೆತಗಳಿಗೆ ಮುಂದಾದರು. ಹೈದರಾಬಾದ್​ ವಿರುದ್ಧ 32 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್‌ಗಳ ನೆರವಿನಿಂದ 55 ರನ್‌ಗಳಿಸಿದರು.

ಈ ಸುದ್ದಿ ಓದಿದ್ದೀರಾ?: ಐಪಿಎಲ್ 2023 | ಮಾರ್ಕ್‌ವುಡ್‌ ಮಾರಕ ದಾಳಿಗೆ ಡೆಲ್ಲಿ ತತ್ತರ; ಲಖನೌ ತಂಡಕ್ಕೆ ಗೆಲುವು

19.5ನೇ ಓವರ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ಶಿಮ್ರಾನ್ ಹೆಟ್ಮೆಯರ್ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಅಂತಿಮವಾಗಿ ಹೈದರಾಬಾದ್​ ವಿರುದ್ಧ ರಾಜಸ್ಥಾನ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ 203 ರನ್‌ಗಳಿಸಿದೆ.

ಹೈದರಾಬಾದ್‌ ತಂಡದ ಪರ ಎಡಗೈ ವೇಗಿಗಳಾದ ಫಝಲ್‌ ಫಾರೂಖಿ ಮತ್ತು ಟಿ ನಟರಾಜನ್‌ ತಲಾ 2 ವಿಕೆಟ್‌ ಪಡೆದರು.

ಉಭಯ ತಂಡಗಳ ಆಡುವ ಹನ್ನೊಂದರ ಬಳಗ

ರಾಜಸ್ಥಾನ್ ರಾಯಲ್ಸ್; ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್

(ನಾಯಕ), ದೇವದತ್ ಪಡಿಕ್ಕಲ್, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಕೆಎಂ ಆಸಿಫ್, ಯುಜ್ವೇಂದ್ರ ಚಾಹಲ್

ಸನ್‌ರೈಸರ್ಸ್ ಹೈದರಾಬಾದ್; ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹ್ಯಾರಿ ಬ್ರೂಕ್, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್‌ (ವಿಕೆಟ್‌ ಕೀಪರ್), ಉಮ್ರಾನ್ ಮಲಿಕ್, ಆದಿಲ್ ರಶೀದ್, ಭುವನೇಶ್ವರ್ ಕುಮಾರ್(ನಾಯಕ), ಟಿ ನಟರಾಜನ್, ಫಝಲ್‌ ಹಖ್ ಫಾರೂಕಿ

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜೂನ್‌ 15ರವರೆಗೆ ಪ್ರತಿಭಟನೆ ನಿಲ್ಲಿಸಲು ಕುಸ್ತಿಪಟುಗಳ ನಿರ್ಧಾರ

ಭಾರತೀಯ ಕುಸ್ತಿ ಫೆಡರೇಷನ್​ನ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್​ ಭೂಷಣ್​...

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ | ತಂಡದಿಂದ ಹೊರಬಿದ್ದ ವಿಶ್ವ ನಂ.1 ಬೌಲರ್‌ ಅಶ್ವಿನ್‌!

ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಮ್‌...

ಕುಸ್ತಿಪಟುಗಳನ್ನು ಮಾತುಕತೆಗೆ ಆಹ್ವಾನಿಸಿದ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್

ಕುಸ್ತಿಪಟುಗಳೊಂದಿಗೆ ಅವರ ಸಮಸ್ಯೆಗಳನ್ನು ಚರ್ಚಿಸಲು ಸರ್ಕಾರ ಸಿದ್ಧವಿದೆ. ಇದಕ್ಕಾಗಿ ಮತ್ತೊಮ್ಮೆ ಕುಸ್ತಿಪಟುಗಳನ್ನು...

ಟೆಸ್ಟ್‌ ಚಾಂಪಿ​ಯ​ನ್‌​ಶಿ​ಪ್‌ ಫೈನಲ್‌ | ಅಭ್ಯಾಸದ ವೇಳೆ ರೋಹಿತ್‌ ಶರ್ಮಾ ಕೈ ಬೆರಳಿಗೆ ಗಾಯ

ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ರೋಹಿತ್‌...