ಐಪಿಎಲ್ 2023 | ತವರಿನಲ್ಲೇ ಟೈಟನ್ಸ್ ಸದ್ದಡಗಿಸಿದ ರಾಯಲ್ಸ್

Date:

ಐಪಿಎಲ್ 16ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಗೆಲುವಿನ ಓಟ ಮುಂದುವರಿದಿದೆ.

ಹೈದರಾಬಾದ್‌‌ನಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ರಾಯಲ್ಸ್, ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡವನ್ನು ಅವರದ್ದೇ ತವರು ಮೈದಾನದಲ್ಲಿ 3 ವಿಕೆಟ್ ಅಂತರದಲ್ಲಿ ಮಣಿಸಿದೆ‌.

ಟೈಟನ್ಸ್ ಮುಂದಿಟ್ಟಿದ್ದ 178 ರನ್‌ಗಳ ಸವಾಲನ್ನು ಬೆನ್ನಟ್ಟುವ ವೇಳೆ ರಾಜಸ್ಥಾನ ರಾಯಲ್ಸ್ ಆರಂಭದಲ್ಲೇ 4 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆರಂಭಿಕರಾದ ಜೈಸ್ವಾಲ್ 1ರನ್ ಮತ್ತು ಜಾಸ್ ಬಟ್ಲರ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಹಾದಿ ಹಿಡಿದಿದ್ದರು.


ಆದರೆ ಬಳಿಕ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ ನಾಯಕ ಸಂಜು ಸ್ಯಾಮ್ಸನ್, 6 ಸಿಕ್ಸರ್ ಗಳನ್ನು ಒಳಗೊಂಡ 60 ರನ್‌ಗಳಿಸಿ ನೂರ್ ಅಹ್ಮದ್ ಬೌಲಿಂಗ್‌ನಲ್ಲಿ ಮಿಲ್ಲರ್ ಗೆ ಕ್ಯಾಚಿತ್ತು ನಿರ್ಗಮಿಸಿದರು.

ಕೊನೆಯಲ್ಲಿ ಬಿರುಸಿನ ಹೊಡೆತಗಳ ಮೂಲಕ ಟೈಟನ್ಸ್ ಬೌಲರ್‌ಗಳ ಬೆವರಿಳಿಸಿದ ವಿಂಡೀಸ್ ದೈತ್ಯ ಬ್ಯಾಟರ್ ಶಿಮ್ರಾನ್ ಹೆಟ್ಮಯರ್, 26 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ ಅಜೇಯ 56 ರನ್‌ಗಳಿಸಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು.

10 ಎಸೆತಗಳಲ್ಲಿ 18 ರನ್‌ಗಳಿಸಿದ ಧ್ರುವ್ ಜುರೇಲ್ ಮತ್ತು ಕೇವಲ 3 ಎಸೆತಗಳಲ್ಲಿ 10 ರನ್‌ಗಳಿಸಿದ ರವಿಚಂದ್ರನ್ ಅಶ್ವಿನ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಟೈಟನ್ಸ್, ಶುಭಮನ್ ಗಿಲ್ 45 ಮತ್ತು ಡೇವಿಡ್ ಗಳಿಸಿದ 46 ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 177 ರನ್‌ಗಳಿಸಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ | ‘ಮ್ಯಾಚ್ ವಿನ್ನರ್’ ಆದ ದಿನೇಶ್ ಕಾರ್ತಿಕ್: ಆರ್‌ಸಿಬಿಗೆ ರೋಚಕ ಜಯ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ದಿನೇಶ್...

ಐಪಿಎಲ್ | ಅಲ್‌ಝಾರಿ ಜೋಸೆಫ್ ದುಬಾರಿ ಬೌಲಿಂಗ್; ಆರ್‌ಸಿಬಿಗೆ ಗೆಲ್ಲಲು 177 ರನ್‌ಗಳ ಗುರಿ ನೀಡಿದ ಪಂಜಾಬ್

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ನ 6ನೇ ಪಂದ್ಯವು ರಾಯಲ್ ಚಾಲೆಂಜರ್ಸ್‌...

ಐಪಿಎಲ್ ಸಂಪೂರ್ಣ ವೇಳಾಪಟ್ಟಿ ಪ್ರಕಟ: ಫೈನಲ್ ಪಂದ್ಯ ದಕ್ಷಿಣ ಭಾರತದಲ್ಲಿ ಆಯೋಜನೆ

ಬಿಸಿಸಿಐ ಇಂದು ಐಪಿಎಲ್‌ 2024ರ ಎರಡನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ....

ಐಪಿಎಲ್ | ಉಮೇಶ್ ಯಾದವ್ ಸಾಹಸ: ಮುಂಬೈ ವಿರುದ್ಧ ಗುಜರಾತ್‌ಗೆ 6 ರನ್‌ಗಳ ರೋಚಕ ಜಯ

ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌ನ 5ನೇ...