ಪಿಎಸ್‌ಜಿಗೆ ಲಿಯೊನೆಲ್‌ ಮೆಸ್ಸಿ ಸೋಲಿನ ವಿದಾಯ

Date:

ವಿಶ್ವಕಪ್‌ ವಿಜೇತ ದಿಗ್ಗಜ ಫುಟ್‌ಬಾಲ್‌ ಆಟಗಾರ ಲಿಯೊನೆಲ್‌ ಮೆಸ್ಸಿ, ಪ್ಯಾರಿಸ್ ಸೇಂಟ್ ಜರ್ಮೈನ್‌(ಪಿಎಸ್‌ಜಿ) ಕ್ಲಬ್‌ಗೆ ವಿದಾಯ ಹೇಳಿದ್ದಾರೆ.  

ಫ್ರಾನ್ಸ್‌ ಲೀಗ್- 1 ಟೂರ್ನಿಯಲ್ಲಿ ಮೆಸ್ಸಿ ಆಡಿದ ಕೊನೆಯ ಪಂದ್ಯದಲ್ಲಿ ಪಿಎಸ್‌ಜಿ, ಕ್ಲರ್ಮಾಂಟ್ ಫೂಟ್ ತಂಡದ ವಿರುದ್ಧ 2-3  ಗೋಲುಗಳ ಅಂತರದಲ್ಲಿ ಸೋಲು ಕಂಡಿದೆ. ಆ ಮೂಲಕ ಎರಡು ವರ್ಷಗಳ ಪಿಎಸ್‌ಜಿ ಜೊತೆಗಿನ ಪಯಣಕ್ಕೆ ʻಮಾಂತ್ರಿಕ ಆಟಗಾರʼ ಸೋಲಿನ ವಿದಾಯ ಹೇಳಿದ್ಧಾರೆ. ಕ್ಲರ್ಮಾಂಟ್ ಫೂಟ್ ತಂಡದ ವಿರುದ್ಧ ರಾಮೋಸ್ ಮತ್ತು ಕಿಲಿಯನ್‌ ಎಂಬಾಪೆ ಗೋಲು ಗಳಿಸಿದರಾದರೂ ಮೆಸ್ಸಿ ವಿಫಲರಾದರು.

2021ರ ಆಗಸ್ಟ್‌ನಲ್ಲಿ ತನ್ನ ಬಾಲ್ಯಕಾಲದ ತಂಡ ಬಾರ್ಸಿಲೋನಾ ತೊರೆಯುವ ನಿರ್ಧಾರ ಮಾಡಿದ್ದ ಮೆಸ್ಸಿ, ಪಿಎಸ್‌ಜಿ ಸೇರಿದ್ದರು. ಲೀಗ್- 1ನಲ್ಲಿ ಎರಡು ಆವೃತ್ತಿಗಳಲ್ಲಿ ಪಿಎಸ್‌ಜಿ ಪರ 58 ಪಂದ್ಯಗಳನ್ನಾಡಿರುವ ಮೆಸ್ಸಿ ಮೊದಲ ಋತುವಿನಲ್ಲಿ 11 ಮತ್ತು ಎರಡನೇ ಋತುವಿನಲ್ಲಿ 21 ಸೇರಿದಂತೆ ಒಟ್ಟು 32 ಗೋಲುಗಳನ್ನು ಗಳಿಸಿದ್ದು, 35 ಅಸಿಸ್ಟ್‌ಗಳನ್ನು ಒದಗಿಸಿದ್ದಾರೆ. ಮೆಸ್ಸಿ ಆಡಿದ ಎರಡೂ ಆವೃತ್ತಿಗಳಲ್ಲೂ ಪಿಎಸ್‌ಜಿ, ಲೀಗ್‌-1 ಟೂರ್ನಿಯ ಚಾಂಪಿಯನ್‌ ಪಟ್ಟವನ್ನೇರಿದೆ.

ಅಂತಿಮ ಪಂದ್ಯದ ಆರಂಭಕ್ಕೂ ಮುನ್ನ ತಮ್ಮ ಮೂವರು ಮಕ್ಕಳೊಂದಿಗೆ ಮೈದಾನಕ್ಕಾಗಮಿಸಿದ ದಿಗ್ಗಜ ಆಟಗಾರ, ʻಎರಡು ವರ್ಷಗಳ ಕಾಲ ನೀಡಿದ ಪ್ರೋತ್ಸಾಹಕ್ಕೆ ಕ್ಲಬ್‌, ಪ್ಯಾರಿಸ್ ನಗರಕ್ಕೆ ಹಾಗೂ  ಅಭಿಮಾನಿಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ತಂಡದ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆʼ ಎಂದು ಹೇಳಿದರು. 

ಮೆಸ್ಸಿ  ಪಿಎಸ್‌ಜಿ ತಂಡವನ್ನು ತೊರೆಯುವ ವಿಚಾರವನ್ನು ಈ ತಿಂಗಳ ಆರಂಭದಲ್ಲೇ ಕ್ಲಬ್‌ನ ಮುಖ್ಯ ತರಬೇತುದಾರ ಕ್ರಿಸ್ಟೋಫ್ ಗಾಲ್ಟಿಯರ್ ದೃಢಪಡಿಸಿದ್ದರು.

ಕುತೂಹಲ ಮೂಡಿಸಿದ ಮುಂದಿನ ನಡೆ

ಮುಂದಿನ ಋತುವಿನಲ್ಲಿ ಅರ್ಜೆಂಟೀನಾದ ನಾಯಕ ಯಾವ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ವೃತ್ತಿ ಜೀವನ ಆರಂಭಿಸಿದ್ದ ಕ್ಲಬ್‌ ಬಾರ್ಸಿಲೋನಾ, ಮೇಜರ್ ಲೀಗ್ ಸಾಕರ್ (ಎಂಎಲ್‌ಎಸ್‌) ಕ್ಲಬ್‌ ಇಂಟರ್‌ ಮಿಯಾಮಿ, ಸೌದಿ ಪ್ರೊಫೆಷನಲ್ ಲೀಗ್ (ಎಸ್‌ಎಫ್‌ಎಲ್‌) ಕ್ಲಬ್‌ ಅಲ್‌ ಹಿಲಾಲ್‌ ಹಾಗೂ ಯುರೋಪ್‌ನ ಹಲವು ಪ್ರಮುಖ ಕ್ಲಬ್‌ಗಳು ಈಗಾಗಲೇ ಮೆಸ್ಸಿಯನ್ನ ತಂಡಕ್ಕೆ ಸೇರಿಸಿಕೊಳ್ಳಲು ತೀವ್ರ ಪ್ರಯತ್ನವನ್ನು ಆರಂಭಿಸಿದೆ. ಅದಾಗಿಯೂ ಮೆಸ್ಸಿ ಈ ಕುರಿತು ಯಾವುದೇ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯಾ ಕಪ್ ಫೈನಲ್ | ಪಂದ್ಯಶ್ರೇಷ್ಠ ಪ್ರಶಸ್ತಿಯ ಮೊತ್ತವನ್ನು ಮೈದಾನದ ಸಿಬ್ಬಂದಿಗಳಿಗೆ ಅರ್ಪಿಸಿದ ಸಿರಾಜ್

ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ 2023ರ...

ಏಷ್ಯಾ ಕಪ್ ಫೈನಲ್ | ಸಿರಾಜ್ ಮ್ಯಾಜಿಕ್; 8ನೇ ಬಾರಿಗೆ ಟೀಮ್ ಇಂಡಿಯಾ ಚಾಂಪಿಯನ್

ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ 2023ರ...

ಏಷ್ಯಾ ಕಪ್ ಫೈನಲ್ | 50 ರನ್‌ಗೆ ಆಲೌಟಾದ ಶ್ರೀಲಂಕಾ!

ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2023ರ...

ಏಷ್ಯಾ ಕಪ್ ಫೈನಲ್ | ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಸಿರಾಜ್; ಲಂಕಾಗೆ ಆರಂಭಿಕ ಆಘಾತ

ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2023ರ...