ಐಪಿಎಲ್ 2023 | ಲಖನೌ ಪ್ಲೇಆಫ್ ಆಸೆಗೆ ತಣ್ಣೀರೆರಚುವುದೆ ಕೆಕೆಆರ್?

Date:

2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಹದಿನಾರನೇ ಆವೃತ್ತಿಯ 68ನೇ ಪಂದ್ಯ ಇಂದು (ಮೇ 20) ಸಂಜೆ 7.30ಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡ ಲಖನೌ ಸೂಪರ್ ಜೈಂಟ್ಸ್ ಎದುರು ಪೈಪೋಟಿ ನಡೆಸಲಿದೆ.

ತನ್ನ ಹಿಂದಿನ ಪಂದ್ಯಗಳಲ್ಲಿ ಕೆಕೆಆರ್ ಹಾಗೂ ಲಖನೌ ತಂಡ ಕ್ರಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳನ್ನು ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದು, ನಾಲ್ಕರ ಹಂತಕ್ಕೆ ತಲುಪಬೇಕಾದರೆ ಎರಡೂ ತಂಡಗಳಿಗೆ ಈ ಪಂದ್ಯದಲ್ಲಿನ ಗೆಲುವು ಅನಿವಾರ್ಯವಾಗಿದೆ.

ಒಂದು ವೇಳೆ ಕೆಕೆಆರ್ ಸೋತರೆ ಟೂರ್ನಿಯಿಂದ ನಿರ್ಗಮಿಸಬೇಕಾಗುತ್ತದೆ. ಇನ್ನು ಲಖನೌ ಸೂಪರ್ ಜೈಂಟ್ಸ್ ಸೋತರೂ, ಲೀಗ್‌ ಹಂತದ ಕೊನೆ ಎರಡು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪೈಕಿ ಸೋಲುವ ತಂಡದ ಜೊತೆ ಆಡುವ ಅವಕಾಶ ಗಿಟ್ಟಿಸಿಕೊಳ್ಳಲಿದೆ. ಒಂದು ವೇಳೆ ಲಖನೌ ತಂಡವು ಕೆಕೆಆರ್‌ ಎದುರು ಗೆಲುವು ಪಡೆದರೆ ಅಂಕ ಪಟ್ಟಿಯ 2ನೇ ಸ್ಥಾನಕ್ಕೂ ಪೈಪೋಟಿ ನಡೆಸಬಹುದಾಗಿದೆ.

ಇದುವರೆಗೂ ಲಖನೌ ಮತ್ತು ಕೆಕೆಆರ್ ತಂಡಗಳು ಪರಸ್ಪರ ಒಟ್ಟು 2 ಬಾರಿ ಮುಖಾಮುಖಿಯಾಗಿವೆ. ಆದರೆ ಈ ಎರಡೂ ಪಂದ್ಯಗಳಲ್ಲೂ ಲಖನೌ ತಂಡವು ಜಯಗಳಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಹೊರಗೆ ಮಾತನಾಡುವವರ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ; ವಿರಾಟ್ ಕೊಹ್ಲಿ ‌

ಪಿಚ್ರಿಪೋರ್ಟ್

ಈ ವರ್ಷ ಈಡನ್‌ ಗಾರ್ಡನ್‌ನಲ್ಲಿ ನಡೆದಿರುವ 6 ಪಂದ್ಯಗಳಲ್ಲಿ ಮೊದಲ 3 ಪಂದ್ಯಗಳನ್ನು ಮೊದಲು ಬ್ಯಾಟ್‌ ಮಾಡಿದ ತಂಡ ಗೆದ್ದರೆ, ಕೊನೆಯ 3 ಪಂದ್ಯಗಳನ್ನು ಬೆನ್ನಟ್ಟಿದ ತಂಡ ಗೆದ್ದಿದೆ. ಅಲ್ಲದೆ ಈ ಮೈದಾನವು ಬ್ಯಾಟಿಂಗ್​ ಸ್ನೇಹಿಯಾಗಿದೆ. ಮೊದಲ ಇನ್ನಿಂಗ್ಸ್​ನ ಸರಾಸರಿ ಮೊತ್ತ 196 ಇದೆ. ಆದರೆ ಕಳೆದ ಪಂದ್ಯದಲ್ಲಿ ಕೋಲ್ಕತ್ತಾ 149 ರನ್​ಗಳಿಗೆ ಕುಸಿತ ಕಂಡಿತ್ತು. ಈ ಗುರಿಯನ್ನು ರಾಜಸ್ಥಾನ್ 13.1 ಓವರ್​​ಗಳಲ್ಲಿ ಮುಟ್ಟಿತ್ತು. ಬ್ಯಾಟ್ಸ್​ಮನ್​​ಗಳಿಗೆ ನೆರವಾದರೆ, ಸ್ಪಿನ್ನರ್​ಗಳು ಪ್ರಭಾವ ಬೀರುವ ಸಾಧ್ಯತೆ ಇದೆ. ಟಾಸ್​ ಗೆದ್ದವರು ಚೇಸಿಂಗ್​​ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಆಟವಾಡುವ ಹನ್ನೊಂದರ ಬಳಗ

ಕೋಲ್ಕತ್ತಾ ನೈಟ್ ರೈಡರ್ಸ್:
ರೆಹಮಾನುಲ್ಲಾ ಗುರ್ಬಝ್ (ವಿಕೆಟ್ ಕೀಪರ್), ಜೇಸನ್ ರಾಯ್, ನಿತೀಶ್ ರಾಣಾ (ನಾಯಕ) , ಆಂಡ್ರೆ ರಸೆಲ್, ರಿಂಕು ಸಿಂಗ್, ಶಾರ್ದುಲ್ ಠಾಕೂರ್, ಸುನೀಲ್ ನರೈನ್, ವೈಭವ್ ಅರೋರ, ಹರ್ಷಿತ್ ರಾಣಾ, ಸುಯಾಶ್ ಶರ್ಮಾ, ವರುಣ್ ಚಕ್ರವರ್ತಿ.

ಲಖನೌ ಸೂಪರ್ ಜೈಂಟ್ಸ್:
ಕ್ವಿಂಟನ್ ಡಿ ಕಾಕ್ ( ವಿಕೆಟ್ ಕೀಪರ್), ದೀಪಕ್ ಹೂಡ, ಪ್ರೇರಕ್ ಮಂಕಡ್, ಕೃಣಾಲ್ ಪಾಂಡ್ಯ (ನಾಯಕ), ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಆಯುಷ್ ಬದೋನಿ, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಸ್ವಪ್ನಿಲ್ ಸಿಂಗ್, ಮೊಹ್ಸೀನ್ ಖಾನ್.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೆಲುವಿಗೆ ಕಾರಣವಾದ 20 ರನ್ ಸಿಡಿಸಿದ ಧೋನಿ; ಐಪಿಎಲ್‌ನಲ್ಲಿ ವಿಶೇಷ ದಾಖಲೆ

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್‌...

ಐಪಿಎಲ್ 2024 | ಸಾಲ್ಟ್ ಅಮೋಘ ಆಟ: 4ನೇ ಗೆಲುವು ದಾಖಲಿಸಿದ ಕೆಕೆಆರ್

ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅಮೋಘ ಆಟದಿಂದ ಕೋಲ್ಕತ್ತಾ ನೈಟ್‌ ರೈಡರ್ಸ್...

ಐಪಿಎಲ್ 2024 | ಕೆಕೆಆರ್‌ಗೆ ಸಾಧಾರಣ ಗುರಿ ನೀಡಿದ ಲಖನೌ

ಸ್ಫೋಟಕ ಆಟಗಾರ ನಿಕಲೋಸ್‌ ಪೂರನ್‌ ಹಾಗೂ ನಾಯಕ ಕೆ ಎಲ್‌ ರಾಹುಲ್‌...